ಜೆ.ಇ.ಇ. ಪರೀಕ್ಷೆಯಲ್ಲಿ ಸರ್‌ಎಂ.ವಿ. ಯ ಷಗುಣ್ ಜಂಬೂರ್ ಜಿಲ್ಲೆಗೆ ಪ್ರಥಮ
ಶಿವಮೊಗ್ಗ 19. : ದೇಶದ ಪ್ರತಿಷ್ಠಿತ ತಾಂತ್ರಿಕ ವಿದ್ಯಾಲಯಗಳಾದ ಐ.ಐ.ಟಿ. ಮತ್ತು ಎನ್.ಐ.ಟಿ.ಗಳಿಗೆ ಪ್ರವೇಶ ಪಡೆಯಲು ನ್ಯಾಶನಲ್ ಟೆಸ್ಟಿಂಗ ಏಜೆನ್ಸಿ ನಡೆಸುವ 2026 ರ ಜೆ.ಇ.ಇ. ಮೇನ್ಸ್ ಸೆಷನ್-1 ರ ಪರೀಕ್ಷೆಯಲ್ಲಿ ಶಿವಮೊಗ್ಗದ ಸರ್‌ಎಂ.ವಿ. ಸಹಯೋಗದೊಂದಿಗೆ ನಡೆಯುತ್ತಿರುವ ವಿದ್ಯಾಭಾರತಿ ಪದವಿ ಪೂರ್ವ ಕಾಲೇಜಿನ ಷಗುಣ್ ವಿ.ಜಂಬೂರ್ ಇವರು 99.56 ಪರ್ಸೆಂಟೈಲ್ ಗಳಿಸುವುದರೊಂದಿಗೆ ಶಿವಮೊಗ್ಗ ಜಿಲ್ಲೆಗೆ ಪ್ರಥಮ ಸ್ಥಾನ ಪಡೆದಿದ್ದಾರೆ. ಕಾಲೇಜಿನ ಒಟ್ಟು 35 ಕ್ಕೂ ಹೆಚ್ಚು ವಿದ್ಯಾರ್ಥಿಗಳು 90 ಪರ್ಸೆಂಟೈಲ್‌ಗಿಂತ ಅಧಿಕ ಫಲಿತಾಂಶವನ್ನು ಗಳಿಸಿರುವುದು ಹೆಮ್ಮೆಯ ಸಂಗತಿಯಾಗಿದೆ. ಉತ್ತಮ ಸಾಧನೆಗೈದ ಎಲ್ಲಾ ವಿದ್ಯಾರ್ಥಿಗಳಿಗೆ ಸರ್ ಎಂ.ವಿ.ಯ ಆಡಳಿತ ಮಂಡಳಿಯ ನಿರ್ದೇಶಕರಾದ ಜಗನ್ಮೋಹನರಾವ್ ಹಾಗೂ ಆಡಳಿತ ಮಂಡಳಿ, ಪ್ರಾಂಶುಪಾಲರು, ಉಪನ್ಯಾಸಕ ವರ್ಗದವರು ಮತ್ತು ಬೋಧಕೇತರ ಸಿಬ್ಬಂದಿಗಳು ಹರ್ಷ ವ್ಯಕ್ತಪಡಿಸಿ ಅಭಿನಂದಿಸಿದ್ದಾರೆ.