ಕುಷ್ಟಗಿ

ಪಂಪ್ಸೆಟ್ ಲೈನ್, ಲೈನಮನ್ ಬದಲಾಯಿಸುವಂತೆ ಒತ್ತಾಯಿಸಿ ಮುತ್ತಿಗೆ

ಪಂಪ್ಸೆಟ್ ಲೈನ್, ಲೈನಮನ್ ಬದಲಾಯಿಸುವಂತೆ ಒತ್ತಾಯಿಸಿ ಮುತ್ತಿಗೆ

ಲೋಕದರ್ಶನ ವರದಿ 

ಕುಷ್ಟಗಿ 06: ತಾಲೂಕಿನ ವಣಗೇರಿ ಗ್ರಾಮದ ಪಂಪ್ ಸೆಟ್ ಲೈನ್ ವೇಳೆ ಹಾಗೂ ಗ್ರಾಮದ ಲೈನಮನ್ ಅವರನ್ನು ಬದಲಾಯಿಸುವಂತೆ ಒತ್ತಾಯಿಸಿ ಸೋಮವಾರ ಬೆಳಗ್ಗೆ ವಣಗೇರಿ ಗ್ರಾಮಸ್ಥರು ಇಲ್ಲಿನ ಜೆಸ್ಕಾಂ ಕಚೇರಿಗೆ ಮುತ್ತಿಗೆ ಹಾಕಿ ಮನವಿ ಪತ್ರ ಸಲ್ಲಿಸಿದರು. 

ವಣಗೇರಿ ಗ್ರಾಮದ ವ್ಯಾಪ್ತಿಯಲ್ಲಿ ಸುಮಾರು ಒಂದು ತಿಂಗಳಿನಿಂದ ಬಿಜಕಲ್ ಫೀಡರ್ ಮಾರ್ಗದಿಂದ ನಮಗೆ ಸರಿಯಾಗಿ ವಿದ್ಯುತ್ ಪೂರೈಕೆಯಾಗುತ್ತಿಲ್ಲ ಇದರಿಂದ ನಮ್ಮ ಜಮೀನುಗಳಲ್ಲಿ ಬೆಳೆದ ಬೆಳೆಗಳೆಲ್ಲಾ ಒಣಗಿ ತುಂಬಾ ನಷ್ಟ ಉಂಟಾಗುತ್ತಿದೆ. 

ಗ್ರಾಮದಲ್ಲಿ ಕಾರ್ಯನಿರ್ವಹಿಸುತ್ತಿರುವ ಲೈನಮನ್ ಅವರನ್ನು ವಗರ್ಾವಣೆ ಮಾಡಬೇಕು.  ಈ ಹಿಂದೆ ಸರಬರಾಜಾಗುತ್ತಿದ್ದ ಬಿಜಕಲ್ ಐ.ಪಿ ಸೆಟ್ ವೇಳಾಪಟ್ಟಿ ಸಮಯ ಬೆಳಗ್ಗೆ 11 ರಿಂದ ಸಂಜೆ 6 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಯಾಗುತ್ತಿತ್ತು.  ಸದ್ಯದ ಪರಿಸ್ಥಿತಿಯಲ್ಲಿ ಬೆಳಗ್ಗೆ  4 ಗಂಟೆಯಿಂದ 11 ಗಂಟೆಯವರೆಗೆ ಸಮಯವನ್ನು ಬದಲಾವಣೆ ಮಾಡಿ  ವಿದ್ಯುತ್ ಪೂರೈಸುವಂತೆ ವಣಗೇರಿ ಗ್ರಾಮಸ್ಥರು ಮನವಿ ಪತ್ರದಲ್ಲಿ ಜೆಸ್ಕಾಂ ಅಧಿಕಾರಿಗಳನ್ನು ಒತ್ತಾಯಿಸಿದರು. 

ಈ ಸಂದರ್ಭದಲ್ಲಿ ಹೊಳೆಯಪ್ಪ ಮಸ್ಕಿ, ಶಿವಕುಮಾರ ಹುಚ್ಚಳ್ಳಿ, ವಿರುಪಾಕ್ಷಪ್ಪ ಟೆಂಗಿನಕಾಯಿ, ಹನುಮಂತಪ್ಪ ಹುಚ್ಚಳ್ಳಿ , ಮುತ್ತಪ್ಪ ಬೆಳ್ಳಕ್ಕಿ, ಬಸವರಾಜ ಹಳ್ಳದಮನಿ, ಪಂಪಣ್ಣ ಅಗಸಿಮುಂದಿನ, ಶರಣಪ್ಪ ಬಳಿಗಾರ,ಗುರು ಭಾವಿಕಟ್ಟಿ, ಮೌನೇಶ್ ಹಲರ್ಾಪುರ, ಯಲ್ಲಪ್ಪ ಗುರಿಕಾರ, ಶಿವಪ್ಪ ಪೂಜಾರಿ, ಮಂಜಪ್ಪ ಅಗಸಿಮುಂದಿನ ಸೇರಿದಂತೆ ವಣಗೇರಿ ಗ್ರಾಮಸ್ಥರು ಉಪಸ್ಥಿತರಿದ್ದರು 

ಸುದ್ದಿ ಓದಿ