ಕಲಿಕಾ ಹಬ್ಬ ಪಠ್ಯ, ಪಠ್ಯೇತರ ಚಟುವಟಿಕೆಗಳಲ್ಲೂ ಆಸಕ್ತಿ ಹೆಚ್ಚಿಸುತ್ತದೆ.: ಶಿವಪ್ಪ ಉಪ್ಪಾರ
ಯಲಬುರ್ಗಾ ಫೆ 14: ಮಕ್ಕಳಲ್ಲಿ ಸೃಜನಶೀಲತೆ ಬೆಳೆಸುವುದರ ಜತೆಗೆ ಸಂಭ್ರಮದಿಂದ ಕಲಿಕೆಗೆ ಮಾರ್ಗದರ್ಶನ ನೀಡುವ ಕಲಿಕಾ ಹಬ್ಬ ಪಠ್ಯ, ಪಠ್ಯೇತರ ಚಟುವಟಿಕೆಗಳಲ್ಲೂ ಆಸಕ್ತಿ ಹೆಚ್ಚಿಸುವಲ್ಲಿ ಸಹಕಾರಿಯಾಗಲಿದೆ ಎಂದು ಬಿಆರ್ಪಿ ಶಿವಪ್ಪ ಉಪ್ಪಾರ ಹೇಳಿದರು.
ತಾಲ್ಲೂಕಿನ ಚಿಕ್ಕಮ್ಯಾಗೇರಿ ಗ್ರಾಮದ ನೀಲಮ್ಮ ಶಿವಶಂಕರರಾವ್ ದೇಸಾಯಿ ಸರ್ಕಾರಿ ಪ್ರೌಢ ಶಾಲೆಯಲ್ಲಿ ಹಮ್ಮಿಕೊಂಡಿದ್ದಕ್ಲಸ್ಟರ್ ಮಟ್ಟದ ಕಲಿಕಾ ಹಬ್ಬದಲ್ಲಿ ಪಾಲ್ಗೊಂಡು ಮಾತನಾಡಿದರು. ಕಳೆದ 2019 ರಿಂದ ಎರಡು ವರ್ಷಗಳ ಕಾಲ ಕರೋನರೋಗವು ವ್ಯಾಪಿಸಿದ್ದರಿಂದ ಶಾಲೆಗಳು ಪ್ರಾರಂಭವಾಗಿರಲಿಲ್ಲ. ಆದಕಾರಣ ಮಕ್ಕಳ ಕಲಿಕೆಯಲ್ಲಿಕುಂಠಿತಗೊಂಡಿತ್ತು. ಎರಡು ವರ್ಷದ ಬಳಿಕ ಶಾಲೆ ಪ್ರಾರಂಭವಾದಾಗ ಕಲಿಕಾ ಚೇತರಿಕೆ ಕಾರ್ಯಕ್ರಮ ಮಾಡುವ ಮೂಲಕ ಶಾಲೆಗಳನ್ನು ಪ್ರಾರಂಭಿಸಲಾಗಿತ್ತು. ಮತ್ತೆ ಮಕ್ಕಳಲ್ಲಿ ಕಲಿಕೆಯನ್ನು ಇನ್ನಷ್ಟು ಸಡಿಲಗೊಳಿಸುವ ಉದ್ದೇಶವನ್ನು ಹೊಂದಿ, ಕಲಿಕಾ ಹಬ್ಬಕಾರ್ಯಕ್ರಮವನ್ನು ಜಾರಿಗೊಳಿಸಲಾಗಿದೆ. ಈ ಕಾರ್ಯಕ್ರಮದಿಂದ ಮಕ್ಕಳ ಕಲಿಕೆಯನ್ನು ಸಂತೋಷದಾಯಕವಾಗುವಂತೆ ಮಾಡುತ್ತದೆ ಎಂದರು.
ಗ್ರಾಪಂ ಅಧ್ಯಕ್ಷೆ ಕೆಂಚಮ್ಮರಾಮಣ್ಣ ಹಿರೇಮನಿ ವಿದ್ಯುತ್ ಬಲ್ಬ್ ಗೆ ನೀರು ಹಾಕುವ ಮೂಲಕ ದೀಪ ಬೆಳಗಿಸಿ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಶಾಲೆಯ ಎಸ್ಡಿಎಂಸಿ ಅಧ್ಯಕ್ಷ ನಿಂಗಪ್ಪ ಮದ್ಗುಣ್ಕಿ ಅಧ್ಯಕ್ಷತೆವಹಿಸಿದ್ದರು. ಶಾಲೆಯಲ್ಲಿ ಸೇವೆ ಸಲ್ಲಿಸಿ, ನಿವೃತ್ತಿ ಹೊಂದಿದ ಶಿಕ್ಷಕಿ ರೇಣುಕಾ ಕಲಹಾಳ ಅವರಿಗೆ ಸನ್ಮಾನಿಸಿ ಬಿಳ್ಕೊಡಲಾಯಿತು. ಕಾರ್ಯಕ್ರಮಕ್ಕೂ ಮುನ್ನಗ್ರಾಮದ ಪ್ರಮುಖ ಬೀದಿಗಳಲ್ಲಿ ಮಕ್ಕಳಿಂದ ವಿವಿಧ ಸಾಂಸ್ಕೃತಿಕಕಾರ್ಯಕ್ರಮ ಹಾಗೂ ಮಹಾನ್ ನಾಯಕರ ವೇಷಭೂಷಣ ಗಮನ ಸೆಳೆಯಿತು.
ತಾಪಂ ಮಾಜಿ ಸದಸ್ಯ ಸುಧಾಕರರಾವ್ ದೇಸಾಯಿ, ಗ್ರಾಪಂ ಸದಸ್ಯ ಶರಣಕುಮಾರ್ ಅಮರಗಟ್ಟಿ, ನೌಕರರ ಸಂಘದಅಧ್ಯಕ್ಷ ವೈ.ಜಿ.ಪಾಟೀಲ್, ಮುಖ್ಯೋಪಾಧ್ಯಾಯ ಸುರೇಶ ವೇದಪಾಠಕ, ವಿ.ಎಸ್.ಬೆಣಕಲ್ ಮಾತನಾಡಿದರು.
ಗ್ರಾಪಂ ಸದಸ್ಯರಾದ ಹುಚ್ಚಮ್ಮ ಉಪ್ಪಾರ, ಫಾತೀಮಾಬೇಗಂ, ಶರಣಪ್ಪ ಹಾದಿಮನಿ, ಶರಣಪ್ಪಕರಡದ, ಶಿಕ್ಷಕರಾದ ಸಿದ್ದಲಿಂಗಪ್ಪ ಶಾಗೋಟಿ, ಶರಣಯ್ಯ ಸರಗಣಚಾರ, ಮೆಹಬೂಬ ಬಾದಶಾಹ, ಸುರೇಶ ಹೊಸಮನಿ, ದೀಲೀಪ್ಕುಮಾರ್ ಹೂಗಾರ, ಸುನೀಲ, ಹನುಮೇಶ, ನಿವೃತ್ತ ಶಿಕ್ಷಕರಾದ ಪಿ.ಅಲ್ಲಾಸಾಹೇಬ, ಸೂಗಿರ್ಪ ಬಳಿಗಾರ ಸೇರಿಇತರರಿದ್ದರು.