ಕಾಗವಾಡ

ಶಿರಗುಪ್ಪಿ ಸಹಕಾರಿಗೆ 45.60 ಲಕ್ಷ ನಿವ್ವಳ ಲಾಭ

ಶಿರಗುಪ್ಪಿ ಸಹಕಾರಿಗೆ 45.60 ಲಕ್ಷ ನಿವ್ವಳ ಲಾಭ
Shiraguppi Cooperative posts net profit of ₹45.60 lakh

ಲೋಕದರ್ಶನ ವರದಿ 

ಕಾಗವಾಡ 10: ಆಡಳಿತ ಮಂಡಳಿ, ಸಿಬ್ಬಂದಿ ವರ್ಗದವರ ಮತ್ತು ರೈತ ಸದಸ್ಯರ ಸಮನ್ವಯದೊಂದಿಗೆ ವಿವಿದೊದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘವು ಪ್ರಗತಿಪಥದಲ್ಲಿ ಸಾಗುತ್ತಿದ್ದು, ಪ್ರಸಕ್ತ ಆರ್ಥಿಕ ವರ್ಷದ ಕೊನೆಗೆ ರೂ. 45.60 ಲಕ್ಷ ನಿವ್ಹಳ ಲಾಭಗಳಿಸಿದ್ದು, ಸದಸ್ಯರಿಗೆ ಶೇ. 8 ರಷ್ಟು ಲಾಭಾಂಶ ವಿತರಿಸಲಾಗುವುದೆಂದು ಅಧ್ಯಕ್ಷ ಸುರೇಶ ಚೌಗುಲೆ ತಿಳಿಸಿದ್ದಾರೆ. ಅವರು ಗುರುವಾರ ದಿ. 10 ರಂದು ತಾಲೂಕಿನ ಶಿರುಗುಪ್ಪಿ ಗ್ರಾಮದ ವಿವಿಧೋದ್ದೇಶಗಳ ಪ್ರಾಥಮಿಕ ಗ್ರಾಮೀಣ ಕೃಷಿ ಸಹಕಾರಿ ಸಂಘದ 74ನೇ ವಾರ್ಷಿಕ ಸರ್ವಸಾದಾರಣ ಸಭೆಯಲ್ಲಿ ಮಾತನಾಡುತ್ತಿದ್ದರು.

ಸಹಕಾರಿಯು ಒಟ್ಟು 1897 ಸದಸ್ಯರನ್ನು ಹೊಂದಿದ್ದು, ರೂ. 1.68 ಕೋಟಿ ಶೇರ್ ಬಂಡವಾಳ, ರೂ. 19.52 ಕೋಟಿ ದುಡಿಯುವ ಬಂಡವಾಳ, ರೂ. 2.92 ಕೋಟಿ ನಿಧಿಗಳು, ರೂ. 3.37 ಕೋಟಿ ಠೇವು, ರೂ. 4.91 ಕೋಟಿ ಬ್ಯಾಂಕ್ ಗುಂತಾವಣೆ, ರೂ. 13.37 ಕೋಟಿ ಸಾಲ ವಿತರಿಸಿ, ಸನ್ 2025-26ನೇ ಸಾಲಿನ ಆರ್ಥಿಕ ವರ್ಷದಲ್ಲಿ ರೂ. 45.60 ಲಕ್ಷ ಲಾಭ ಗಳಿಸಿದೆ ಎಂದು ತಿಳಿಸಿದರು.  ಮುಖ್ಯ ಕಾರ್ಯನಿರ್ವಾಹಕ ಶ್ರೇಣಿಕ ಮಾಂಗೂರೆ ವರದಿ ಓದಿ, ಸಭೆಯಲ್ಲಿ ಚರ್ಚಿಸತಕ್ಕ ವಿಷಯಗಳನ್ನು ಮಂಡಿಸಿ, ಸದಸ್ಯರಿಂದ ಅನುಮೋದನೆ ಪಡೆದುಕೊಂಡರು. ನಿರ್ದೇಶಕ ಶಿವಾನಂದ ಪಾಟೀಲ ಪ್ರಾಸ್ತಾವಿಕವಾಗಿ ಮಾತನಾಡಿ, ಸಹಕಾರಿ ಪ್ರಗತಿ ನೋಟವನ್ನು ವಿವರಿಸಿದರು.

ಈ ವೇಳೆ ಹಿರಿಯ ರೈತರಾದ ಅಶೋಕ ಸುಳಕುಡೆ, ಭರತ ಕನವಾಡೆ, ಚಂದ್ರಕಾಂತ ಗಾಯಕವಾಡ, ಹಾಲಪ್ಪ ಕಾಂಬಳೆ, ಜಿನಪ್ಪಾ ಚೌಗಲೆ, ಮಲ್ಲಪ್ಪಾ ಢಂಗ, ಉಪಾಧ್ಯಕ್ಷ ಶುಭಂ ಕಾಟಕರ, ನಿರ್ದೇಶಕರಾದ ಅಭಯಕುಮಾರ ಅಕಿವಾಟೆ, ರುದ್ರಗೌಡಾ ಪಾಟೀಲ, ಕಿರಣ ಬೋಲೆ, ಶಿವಾನಂದ ಪಾಟೀಲ, ಅಫ್ರೋಜ ಕನವಾಡೆ, ಜ್ಯೋತಿ ಪುದಾಲೆ, ಸಂಜೀವಿನಿ ಕಾಗವಾಡೆ, ಮುಕಾರಿ ವಡ್ಡರ, ಅಪ್ಪಾಸಾಬ ಕೋಳಿ, ಶೋಭಾ ಶಿರಗುಪ್ಪೆ, ವಿಜಯ ಅಕಿವಾಟೆ ಸೇರಿದಂತೆ ಸಹಕಾರಿಯಲ್ಲಿ ಎಲ್ಲ ರೈತ ಸದಸ್ಯರು, ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು. 


ಸುದ್ದಿ ಓದಿ