ಅಧ್ಯಕ್ಷರಾಗಿ ಶಂಭುಲಿಂಗ, ಉಪಾಧ್ಯಕ್ಷರಾಗಿ ರುಕ್ಮವ್ವ ಆಯ್ಕೆ.
ಮಹಾಲಿಂಗಪುರ 16: ಸ್ಥಳೀಯ ಸರ್ಕಾರಿ ಪ್ರೌಢಶಾಲೆಯ ಎಸ್ ಡಿ ಎಂ ಸಿ ನೂತನ ಅಧ್ಯಕ್ಷರಾಗಿ ಶಂಭುಲಿಂಗ ಪಕೀರಪುರ ಮತ್ತು ಉಪಾಧ್ಯಕ್ಷರಾಗಿ ರುಕ್ಮವ್ವ ನಾಯಕ ಆಯ್ಕೆಯಾದರು ಎಂದು ಚುನಾವಣಾ ಅಧಿಕಾರಿಯಾಗಿದ್ದ ಮುಖ್ಯೋಪಾಧ್ಯಾಯ ಧನಂಜಯ ಕುಲಕರ್ಣಿ ತಿಳಿಸಿದರು.
ಶುಕ್ರವಾರ ಮುಂಜಾನೆ ಜರುಗಿದ ಆಯ್ಕೆ ಪ್ರಕ್ರಿಯೆಯಲ್ಲಿ ಸದಸ್ಯರಾದ ಅಪ್ಪಾಸಾಬ ನಾಲಬಂದ,ಮಲ್ಲಪ್ಪ ಸೈದಾಪುರ, ಮಹಾದೇವ ಉತ್ನಾಳ, ಹಸನ ತೇರದಾಳ, ಗೀತಾ ಸಂಶಿ, ರುಕ್ಮಿಣಿ ಮಳಲಿ, ಚನ್ನಪ್ಪ ಪಾತ್ರೋಟ ಸೇರಿದಂತೆ ಇತರರಿದ್ದರು. ಸನ್ಮಾನ: ನೂತನ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೆ ಬಿಜೆಪಿ ನಗರ ಘಟಕದ ವತಿಯಿಂದ ಸನ್ಮಾನಿಸಿ ಅಭಿನಂದಿಸಲಾಯಿತು.
ಭಾಜಪ ನಗರ ಘಟಕದ ಅಧ್ಯಕ್ಷ ಶಂಕರಗೌಡ ಪಾಟೀಲ, ಮುಖಂಡರಾದ ಶೇಖರ ಅಂಗಡಿ,ಯುವ ಮೋರ್ಚಾ ಅಧ್ಯಕ್ಷ ಮಲ್ಲಪ್ಪ ದಲಾಲ, ಈರ್ಪ ದಿನ್ನಿಮನಿ, ಚನ್ನಬಸು ಯರಗಟ್ಟಿ, ವಿಷ್ಣುಗೌಡ ಪಾಟೀಲ, ನಿಕಟಪೂರ್ವ ಅಧ್ಯಕ್ಷ ಸಂಜಯ ರಾಥೋಡ, ಜಗದೀಶ ಜಗದೀಶ ಜಕ್ಕಣ್ಣವರ, ಮಲ್ಲಪ್ಪ ಸೈದಾಪುರ, ಚೇತನ ಬಂಡಿವಡ್ಡರ,ಬಸವರಾಜ ಮಡಿವಾಳ, ಸೇರಿದಂತೆ ಅನೇಕ ಭಾಗವಹಿಸಿದ್ದರು.