ಮಹಲಿಂಗಪುರ

ಗುರುವಿನ ಸೇವೆ ಮಾಡಿದರೆ ಪುಣ್ಯ ಪ್ರಾಪ್ತಿ: ಸೋಮೇಶ್ವರ ಸ್ವಾಮೀಜಿ

ಗುರುವಿನ ಸೇವೆ ಮಾಡಿದರೆ ಪುಣ್ಯ ಪ್ರಾಪ್ತಿ: ಸೋಮೇಶ್ವರ ಸ್ವಾಮೀಜಿ

ಮಹಾಲಿಂಗಪುರ  18: ಗುರುವಿನ ಸೇವೆ ಮಾಡಿದರೆ ನಮಗೆ ಸ್ವಲ್ಪಾವಾದರೂ ಪುಣ್ಯ ದೊರೆಯುತ್ತದೆ ಎಂದು ಯಾದಗಿರಿ ಜಿಲ್ಲೆಯ ಸೈದಾಪುರದ ಸಿದ್ದಾರೂಢ ಮಠದ ಸೋಮೇಶ್ವರ ಮಹಾಸ್ವಾಮಿಗಳು ಹೇಳಿದರು. 

 ನಗರದ ಬಸವ ನಗರದ ಬಸವೇಶ್ವರ ಸಮುದಾಯ ಭವನದಲ್ಲಿ ನಡೆದ ಸಿದ್ದಾರೂಢರ 258 ನೇ ಸತ್ಸಂಗ ಕಾರ್ಯಕ್ರಮದ ದಿವ್ಯ ಸಾನಿಧ್ಯ ವಹಿಸಿ ಸಿದ್ದಾರೂಢರ ಮತ್ತು ಗುರುನಾಥರೂಢರ ಭಾವ ಚಿತ್ರಕ್ಕೆ ಪೂಜೆ ಸಲ್ಲಿಸಿ ಮಾತನಾಡಿ ಗುರುವಿಗಿಂತಲೂ ಅಧಿಕವಾದ ತತ್ತ್ವವಿಲ್ಲ, ಗುರುವಿಗಿಂತಲೂ ಅಧಿಕವಾದ ತಪಸ್ಸಿಲ್ಲ, ತತ್ವಜ್ಞಾನಕ್ಕಿಂತಲೂ ಶ್ರೇಷ್ಠವಾದದ್ದು ಯಾವುದೂ ಇಲ್ಲ. ಆದ್ದರಿಂದ ಶ್ರೀಗುರುವನ್ನು ನಮಿಸುತ್ತೇವೆ ಎಂದರು.  

   ನಗರದ ಸಿದ್ದಾರೂಢ ಮಠದ ಸಹಜಾನಂದ ಸ್ವಾಮೀಜಿ ಮಾತನಾಡಿ ಗುರುಶಕ್ತಿಯನ್ನು ಮೀರಿದ್ದು ಈ ಜಗತ್ತಿನಲ್ಲಿ ಇನ್ನಾವುದೂ ಇಲ್ಲ. ತನ್ನೆಡೆಗೆ ಬಂದ ಪುಣ್ಯಾತ್ಮರನ್ನು ಆತ ಸಂತೋಷದಿಂದ ಮತ್ತು ಪಾಪಾತ್ಮರನ್ನೂ ಕಡೆಗಣಿಸದೆ ಕರುಣೆಯಿಂದ ಸ್ವೀಕರಿಸುವ ವಿಧಾನವೇ ಆಲೋಚನೆ  ಯೋಗ್ಯವಾದದ್ದು. ಕೈಯಲ್ಲಿ ಬಿಡಿಗಾಸಿಲ್ಲದವನನ್ನು ಅಥವಾ ಹೊಟ್ಟೆಗೆ ತುತ್ತು ಅನ್ನವಿಲ್ಲದವನನ್ನು ಜನರು ‘ದೀನ’ ಎಂದೇ ಗುರ್ತಿಸಿರಬಹುದಾದರೂ ಗುರುಕೃಪೆ ಇಲ್ಲದವನಿಗಿಂತ ದೀನ ಮತ್ತೊಬ್ಬನಿಲ್ಲ ಎಂದರು.  

ಪುಸ್ತಕ ಬಿಡುಗಡೆ : ಸಮಾಜ ಸೇವಕ ದೀನ ದಲಿತರ ಬಂಧು, ಚನ್ನಬಸು ಹುರಕಡ್ಲಿ ಅವರ ಸಮಾಜಮುಖಿ ಜೀವನ ಕುರಿತು ಯುವ ಲೇಖಕ ಶಿವಾನಂದ ನೇಗಿನಾಳ ಬರೆದ "ಮಿಡಿದ ಮನಸ್ಸು’ ಪುಸ್ತಕವನ್ನು ಸೋಮೇಶ್ವರ ಸ್ವಾಮೀಜಿ ಸಹಜಾನಂದ ಸ್ವಾಮೀಜಿ ಬಿಜೆಪಿ ಮುಖಂಡರಾದ ಮಹಾಂತೇಶ ಹಿಟ್ಟಿನಮಠ ಕಾಂಗ್ರೆಸ್ ಮುಖಂಡರಾದ ಸಿದ್ದು ಕೊಣ್ಣೂರ ಮತ್ತು ವೇದಿಕೆ ಮೇಲಿದ್ದ ಗಣ್ಯರು ಬಿಡುಗಡೆ ಮಾಡಿದರು. ಮಲ್ಲಪ್ಪ ಕಟಗಿ, ಶಿವಾನಂದ ನೇಗಿನಾಳ, ಚನ್ನಬಸು ಹುರಕಡ್ಲಿ, ಮ ಕೃ ಮೆಗಾಡಿ, ಭಾಗ್ಯಶ್ರೀ ಕೋಟಿ, ಶ್ರೀಶೈಲಪ್ಪ ಉಳ್ಳಾಗಡ್ಡಿ, ಡಾ ಕಲ್ಲೇದ ಡಾ ರಾಘವೇಂದ್ರ ಸೇರಿದಂತೆ ಹಲವರು ಇದ್ದರು. 


ಸುದ್ದಿ ಓದಿ