'ಹೆಣ್ಣು ಮಕ್ಕಳಲ್ಲಿ ಆತ್ಮ,ವಿಶ್ವಾಸ ಮೂಡಿಸಿ'
ಲೋಕದರ್ಶನ ವರದಿ
ಅಥಣಿ 01: ಆತ್ಮವಿಶ್ವಾಸ ಇದ್ದರೆ ಹೆಣ್ಣು ಮಕ್ಕಳು ಯಾವ ಕ್ಷೇತ್ರದಲ್ಲಾದರೂ ಸರಿ ಸೇವೆ ಸಲ್ಲಿಸಬಹುದು. ಆತ್ಮವಿಶ್ವಾಸದಿಂದ ತಮ್ಮನ್ನು ತಾವು ರಕ್ಷಣೆ ಮಾಡಿಕೊಳ್ಳುವ ದೈರ್ಯ ಅವರಲ್ಲಿ ಇದ್ದರೆ ಯಾವುದೆ ಪರಿಸ್ಥಿತಿಯನ್ನು ಕೂಡ ಅವರು ಗೆಲ್ಲಬಹುದು ಹಾಗೂ ದೌರ್ಜನ್ಯಗಳನ್ನು ತೊಡೆದುಹಾಕಬಲ್ಲರಿ ಎಂದು ಕವಿತಾ ಪಾಟೀಲ ಅವರು ವಿಧ್ಯಾಥರ್ಿನಿಯರನ್ನು ಉದ್ದೇಶಿಸಿ ಮಾತನಾಡಿದರು.
ಸ್ಥಳೀಯ ಜೆ ಇ ಶಿಕ್ಷಣ ಸಂಸ್ಥೆಯ ಕೆ ಎ ಲೋಕಾಪೂರ ಪದವಿ ಮಹಾವಿದ್ಯಾಲಯದ ಮಹಿಳಾ ಒಕ್ಕೂಟದ ವತಿಯಿಂದ ಹಮ್ಮಿಕೊಂಡ ಸ್ವಯಂ ರಕ್ಷಣೆ ವಿಷಯದ ಉಪನ್ಯಾಸ ಸಮಾರಂಬದಲ್ಲಿ ನೆರೆದ ವಿಧ್ಯಾಥರ್ಿನಿಯರನ್ನು ಉದ್ದೇಶಿಸಿ ಮಾತನಾಡಿದರು. ಮುಖ್ಯವಾಗಿ ಮಹಿಳೆಯರಿಗೆ ಹೇಗೆ ದೌರ್ಜನ್ಯಗಳು ಉಂಟಾಗುತ್ತವೆ ಅವುಗಳನ್ನು ತಡೆಯಲು ಕೈಗೊಳ್ಳಬಹುದಾದ ಕ್ರಮ ತಿಳಿಸಿದರು.
ಪ್ರಭಾರಿ ಪ್ರಾಚಾರ್ಯ ಗಿರೀಶ ಕುಲಕಣರ್ಿ ಮಾತನಾಡಿ ಹೆಣ್ಣು ಮಕ್ಕಳು ಆದಷ್ಟು ಎಚ್ಚರಿಕೆಯಿಂದ ಇರಬೇಕು , ಆತ್ಮವಿಶ್ವಾಸದಿಂದ ತಮ್ಮನ್ನು ತಾವು ಸಂರಕ್ಷಿಸಿಕೊಳ್ಳಬೇಕು ಎಂದರು. .
ಈ ಕಾರ್ಯಕ್ರಮದಲ್ಲಿ ಕಾಲೇಜಿನ ಮಹಿಳಾ ಒಕ್ಕೂಟದ ಅಧ್ಯಕ್ಷೆ ಗೀತಾ ಕುಲಕಣರ್ಿ, ಉಪಾಧ್ಯಕ್ಷೆ ಅರ್ಚನಾ ಪೂಜಾರಿ, ಕಾರ್ಯದಶರ್ಿ ಝಡ್ ಝಡ್ ಖಾನ, ಮಂಜೂಷಾ ನಾಯಿಕ, ಭಾಗ್ಯಶ್ರೀ ಗುಂಡಾ, ವಿ ಪಿ ಜಾಲಿಹಾಳ, ಟಿ ಎಸ್ ಗೂಗವಾಡ, ಆರ್ ಎಸ್ ಕುಲಕಣರ್ಿ, ರೂಪಾ ಬೋರಗಾರ ಹಾಗೂ ಮುಂತಾದ ಮಹಿಳಾ ಶಿಕ್ಷಕಕಿಯರು ಹಾಗೂ ವಿಧ್ಯಾಥರ್ಿನಿಯರು ಉಪಸ್ಥಿತರಿದ್ದರು. ಧನಶ್ರೀ ತಾಂಬಟ್ ಹಾಗೂ ಭಾಗ್ಯಾ ಉತ್ತೂರ ನಿರೂಪಿಸಿದರು ಝಡ್ ಝಡ್ ಖಾನ ಅವರು ವಂದಿಸಿದರು.