ಮಹಲಿಂಗಪುರ

ರೋಪ್ ಜಂಪಿಂಗ್ (ಶಿಪ್ಪಿಂಗ್) ನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

ರೋಪ್ ಜಂಪಿಂಗ್ (ಶಿಪ್ಪಿಂಗ್) ನಲ್ಲಿ ರಾಜ್ಯಮಟ್ಟಕ್ಕೆ ಆಯ್ಕೆ

 

ಮಹಾಲಿಂಗಪುರ 26: ಸಮೀಪದ ಮದಬಾವಿ ಗ್ರಾಮದ ಶಾಂತಿನಿಕೇತನ ಆಂಗ್ಲ ಮಾಧ್ಯಮ ಹಿರಿಯ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ರೋಪ್ ಜಂಪಿಂಗ್ (ಶಿಪ್ಪಿಂಗ್) ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದು ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.  

  ಬಾಗಲಕೋಟೆಯ ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದ 14 ವಯೋಮಿತಿಯ ಜಿಲ್ಲಾಮಟ್ಟದ ಕ್ರೀಡಾಕೂಟದಲ್ಲಿ  ಬಾಲಕರ ವಿಭಾಗದ ಫ್ರೀ ಸ್ಟಾಯಿಲ್‌ನಲ್ಲಿ ಆದಿತ್ಯ ಭಜಂತ್ರಿ ಪ್ರಥಮ, ಸ್ಪೀಡ್ ರೋಪ್‌ನಲ್ಲಿ ಮಾನಿಂಗ ಉಪ್ಪಾರಟ್ಟಿ ಪ್ರಥಮ, ಫರಂಟ್ ಟು ಫ್ರಂಟ್‌ನಲ್ಲಿ ಕೈಲಾಸ್ ಕುರಿ, ಆಕಾಶ ಸಂಗಾನಟ್ಟಿ ಪ್ರಥಮ, ಥರೀ ಲೆಗ್ ರೋಪ್‌ನಲ್ಲಿ ಸಮರ್ಥ ತಿಮ್ಮಾಪೂರ, ಮಾನಿಂಗ ಉಪ್ಪಾರಟ್ಟಿ, ಸಮರ್ಥ ಬಿರಾಣಿ, ಆದಿತ್ಯಾ ಭಜಂತ್ರಿ ಪ್ರಥಮ ಸ್ಥಾನ ಪಡೆದಿದ್ದಾರೆ. ಬಾಲಕಿಯರ ಬಿಭಾಗದ ಫ್ರಂಟ್ ಟು ಫ್ರಂಟ್‌ನಲ್ಲಿ ಪ್ರತೀಕ್ಷಾ ಡುಮ್ಮನ್ನವರ, ಅಮೃತಾ ಮುಕುಂದ ದ್ವೀತೀಯ,  ಒನ್ ಲೆಗ್ ಸ್ವಿಚ್‌ನಲ್ಲಿ ಚಂದ್ರವ್ವ ಹಲಗಿಗೌಡರ ದ್ವಿತೀಯ, ಲಕ್ಷ್ಮೀ ದಾಸರ, ಸುಚಿತ್ರಾ ಇಟ್ನಾಳ ತೃತೀಯ ಸ್ಥಾನ ಪಡೆದಿದ್ದಾರೆ ಎಂದು ಶಾಲೆಯ ಆಡಳಿತ ಮಂಡಳಿ ತಿಳಿಸಿದೆ. 


ಸುದ್ದಿ ಓದಿ