ಎಲಬುರ್ಗ

ಎರಡನೇ ಹಂತದ ಇವಿಎಂ, ವಿವಿಪ್ಯಾಟ್ ತರಬೇತಿ

ಎರಡನೇ ಹಂತದ ಇವಿಎಂ, ವಿವಿಪ್ಯಾಟ್ ತರಬೇತಿ

ಲೋಕದರ್ಶನ ವರದಿ

ಯಲಬುರ್ಗಾ: 63 ಯಲಬುರ್ಗಾ  ವಿಧಾನಸಭಾ ಕ್ಷೇತ್ರದ ಸೆಕ್ಟರ್ ಅಧಿಕಾರಿಗಳಿಗೆ ಚುನಾವಣಾಧಿಕಾರಿ ಅವರ ನೇತೃತ್ವದಲ್ಲಿ ಇವಿಎಂ ಮತ್ರು ವಿವಿಪ್ಯಾಟ್ ಕುರಿತು ಎರಡನೇ ಬಾರಿ ಸೆಕ್ಟರ್ ಅಧಿಕಾರಿಗಳಿಗೆ ತರಬೇತಿ ನೀಡಲಾಯಿತು.

    ಮತದಾನ ಪ್ರಕ್ರಿಯೆಯಲ್ಲಿ ಕೆಲವು ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತರಬೇತುದಾರ ಯಲ್ಲಪ್ಪ ಹಳ್ಳದ್, ಹಾಗೂ ಮಂಜುನಾಥ ಮುರಡಿ ಅವರು ಅಣುಕು ಮತದಾನ ಮಾಡುವ ಮೂಲಕ ತಿಳಿಸಿಕೊಟ್ಟರು.ಬಳಿಕ ಚುನಾವಣಾಧಿಕಾರಿ ಕಾವ್ಯರಾಣಿ ಕೆ.ವಿ ಅವರು ಮಾತನಾಡಿ, ಮೇ 10 ರಂದು ನಡೆಯುವ ವಿಧಾನಸಭಾ ಚುನಾವಣೆಯಲ್ಲಿ ಸುವ್ಯವಸ್ಥಿತ ಹಾಗೂ ಅಚ್ಚುಕಟ್ಟಾಗಿ ಯಾವುದೇ ಸಮಸ್ಯೆಯಾಗದಂತೆ ಎಚ್ಚರಿಕೆಯಿಂದ ಸೆಕ್ಟರ್ ಅಧಿಕಾರಿಗಳು ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.

    ತಾಂತ್ರಿಕ ಸಮಸ್ಯೆ ಬಂದಲ್ಲಿ ತಕ್ಷಣವೇ ಚುನಾವಣಾಧಿಕಾರಿ ಗಮನಕ್ಕೆ ತರಬೇಕು. ಸಕಾರಾತ್ಮಕ ಭಾವನೆಯಿಂದ ಕೆಲಸ ಮಾಡಿ ಈ ಬಾರಿಯ ಚುನಾವಣೆಯನ್ನು ಯಶಸ್ವಿಗೊಳಿಸಬೇಕಿದೆ ಎಂದರು. ಈ ಸಂದರ್ಭದಲ್ಲಿ ಸಹಾಯಕ ಚುನಾವಣಾಧಿಕಾರಿ ವಿಠಲ ಚೌಗಲೆ, ಸೆಕ್ಟರ್ ಅಧಿಕಾರಿಗಳು, ತರಬೇತುದಾರರು ಎಲ್ಲಾ ತಾಲೂಕ ಅಧಿಕಾರಿಗಳು ಹಾಜರಿದ್ದರು 

ಸುದ್ದಿ ಓದಿ