6ಕೋಟಿ ರೂ. ವೆಚ್ಚದ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ
6ಕೋಟಿ ರೂ. ವೆಚ್ಚದ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ
ಬೀದರ್ 10; ಗ್ರಾಮೀಣ ಪ್ರದೇಶದಲ್ಲಿ ಎಲ್ಲಾ ಗ್ರಾಮಗಳಿಗೆ ಉತ್ತಮ ಸಂಪರ್ಕ ಕಲ್ಪಿಸುವ ನಿಟ್ಟಿನಲ್ಲಿ ಹಗಲಿರುಳು ಶ್ರಮಿಸಲಾಗುತ್ತಿದೆ. ರಸ್ತೆ ಸುಧಾರಣೆ ಮಾಡಿ ಅಭಿವೃದ್ಧಿ ಪಥದಲ್ಲಿ ಕ್ಷೇತ್ರವನ್ನು ಸಾಗಿಸಿ, ಜನರಿಗೆ ರಸ್ತೆ ಮೂಲಸೌಕರ್ಯ ಮತ್ತು ಪ್ರಮುಖ ಕೊಡುಗೆ ನೀಡಲಾಗುತ್ತಿದೆ ಎಂದು ಬೀದರ್ ದಕ್ಷಿಣ ಕ್ಷೇತ್ರದ ಶಾಸಕರಾದ ಡಾ. ಶೈಲೇಂದ್ರ ಬೆಲ್ದಾಳೆ ಅವರು ಹೇಳಿದರು.
ಬೀದರ್ ದಕ್ಷಿಣ ಕ್ಷೇತ್ರದ ಕಮಠಾಣಾ ಗ್ರಾಮದಲ್ಲಿ ಇಂದು ಕಮಠಾಣಾ, ಮಂದಕನಳ್ಳಿ, ಶಮಶೀರನಗರ, ಕಂಗನಕೋಟ, ಬಾವಗಿ, ಸಿರ್ಸಿ (ಎ), ನೆಲವಾಡ, ಸಂಗೋಳಗಿ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸುಮಾರು 6ಕೋಟಿ ರೂ. ವೆಚ್ಚದ ರಸ್ತೆ ಡಾಂಬರೀಕರಣ ಕಾಮಗಾರಿಗೆ ಚಾಲನೆ ನೀಡಿ ಅವರು ಮಾತನಾಡಿದರು.
ಕ್ಷೇತ್ರದ ಮತದಾರರು ತೊಂದರೆ ಅನುಭವಿಸದಂತೆ ಹಗಲು-ರಾತ್ರಿ ಕೆಲಸ ಮಾಡುತ್ತಿದ್ದೇನೆ, ಕಮಠಾಣಾ ಗ್ರಾಮದಿಂದ ಹಲವು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಈ ರಸ್ತೆ ಹಲವು ವರ್ಷಗಳಿಂದ ತಗ್ಗು ಮುಚ್ಚುವ ಕೆಲಸವಾಗುತಿತ್ತು ಸಾರ್ವಜನಿಕರ ಬೇಡಿಕೆಯಂತೆ ಇದೀಗ ಈ ರಸ್ತೆ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಶಾಶ್ವತ ಪರಿಹಾರ ಕಲ್ಪಿಸಲಾಗುತ್ತಿದೆ ಎಂದರು.
ಈ ಸಂದರ್ಭದಲ್ಲಿ ಗ್ರಾಮಪಂಚಾಯಿತಿ ಅಧ್ಯಕ್ಷರಾದ ಚಿನ್ನಮ್ಮಾ ಶಿವರಾಜ, ಮುಖಂಡರಾದ ಕುಶಲರಾವ ಯಾಬಾ, ನಾಗಭೂಷಣ ಕಮಠಾಣಾ, ಗುರುನಾಥ ರಾಜಗೀರಾ, ಸುರೇಶ ಮಾಶೆಟ್ಟಿ, ಶಿವಕುಮಾರ ಸ್ವಾಮಿ, ಚಂದ್ರಯ್ಯಾ ಸ್ವಾಮಿ, ಉದಯಕುಮಾರ ತೋರಣ, ಬಸವರಾಜ ಕ್ಯಾಸಾ, ಉಮೇಶ ಯಾಬಾ, ಉದಯಕುಮಾರ ಮಹಾರಾಜ, ಗೌಶೋದಿನ್ನ್, ಸಂತೋಷ ರೆಡ್ಡಿ, ರಾಜಶೇಖರ್ ನೌಬಾದೆ, ರಾಜಕುಮಾರ ಯಾಬಾ, ತಾಜೋದಿನ್ನ, ರವಿ ಕಮಠಾಣಾ, ಓಂಕಾರ, ಶಂಕರ ಬಾವಗಿ, ಮಾರುತಿ ಯಾಬಾ, ತಜ್ಜಮುಲ್ಲ, ಸಿಜಾಯಿದ್ದ, ಕಲ್ಯಾಣರಾವ ಯಾಬಾ, ವಿನೋದ, ಓಂಕಾರ ಮಜಗೆ, ಮಲ್ಲಯ್ಯಾ ಸ್ವಾಮಿ, ಪುಂಡಲೀಕ ಟುಬಾಕ ಸುರೇಶ ಮತ್ತಿತರರು ಉಪಸ್ಥಿತರಿದ್ದರು.