ತಾಲೂಕಾಡಳಿತದಿಂದ ವಿಜೃಂಭಣೆಯ ಗಣರಾಜ್ಯೋತ್ಸವ: ಮದ್ದಿನ
ಕೊಲ್ಹಾರ 17: ಇಲ್ಲಿನ ತಾಲೂಕು ಪಂಚಾಯತ ಸಭಾ ಭವನದಲ್ಲಿ ಶುಕ್ರವಾರ ಗಣರಾಜ್ಯೋತ್ಸವ ಕಾರ್ಯಕ್ರಮದ ಪೂರ್ವಭಾವಿ ಸಭೆ ಜರುಗಿತು. ತಾಲೂಕಾ ಪಂಚಾಯತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುನೀಲ ಮದ್ದಿನ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವು ಸಹ ತಾಲೂಕು ಆಡಳಿತ ವತಿಯಿಂದ ಅತಿ ವಿಜೃಂಭಣೆಯಿಂದ ಗಣರಾಜ್ಯೋತ್ಸವವನ್ನು ಆಚರಿಸಲಾಗುವದು ಎಂದರು.
ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ತಾಲೂಕಾ ಆಡಳಿತ ವತಿಯಿಂದ ಸನ್ಮಾನಿಸಲು ತೀರ್ಮಾನಿಸಲಾಯಿತು. ನವ ಚೇತನ ಕಿರಿಯ ಪ್ರಾಥಮಿಕ ಶಾಲೆ ಕೊಲ್ಹಾರ, ಸರಕಾರಿ ಉರ್ದು ಹಿರಿಯ ಪ್ರಾಥಮಿಕ ಶಾಲೆ, ಸರಕಾರಿ ಕನ್ನಡ ಹಿರಿಯ ಮಾದರಿ ಶಾಲೆ ಕೊಲ್ಹಾರ. ಕಿತ್ತೂರು ರಾಣಿ ಚನ್ನಮ್ಮಾ ವಸತಿ ಶಾಲೆ ಕೊಲ್ಹಾರ ಹಾಗೂ ಆಕ್ಸಪರ್ಡ ಕಿರಿಯ ಪ್ರಾಥಮಿಕ ಶಾಲೆ ಕೊಲ್ಹಾರ ಇವರಿಂದ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿಸಲು ತಿಳಿಸಲಾಯಿತು. ಎಲ್ಲಾ ವ್ಯವಸ್ಥೆಯನ್ನು ತಾಲೂಕ ಆಡಳಿತ ವತಿಯಿಂದ ಜರುಗಿಸಲು ತಿರ್ಮಾನಿಸಲಾಯಿತು. ಪೂರ್ವಭಾವಿ ಸಭೆಯಲ್ಲಿ ಪಟ್ಟಣ ಪಂಚಾಯತಿ ಅಧ್ಯಕ್ಷ ಸಿ ಎಸ್ ಗಿಡ್ಡಪ್ಪಗೋಳ, ಮುಖ್ಯಾಧಿಕಾರಿ ವಿರೇಶ ಹಟ್ಟಿ, ಸದಸ್ಯ ಬಾಬು ಭಜಂತ್ರಿ, ಶಿರಸ್ತೆದಾರ ಕೃಷ್ಣಾ ಗುಡೂರ, ವೈದ್ಯಾಧಿಕಾರಿ ಲಕ್ಷ್ಮಿ ತೆಲ್ಲೂರು, ಸಿಆರ್‌ಪಿ ಎಸ್ ಎಸ್ ಜಂಗಮಶೆಟ್ಟಿ, ಎಸ್ ಎನ್ ತಡಲಗಿ, ವೈ ಜಿ ಶಿರೋಳ, ಎಂ ಕೆ ಚೌದ್ರಿ, ಎಸ್ ಎಸ್ ಉತ್ನಾಳ ಸೇರಿದಂತೆ ವಿವಿಧ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.