ಭ್ರಷ್ಟ ಬಿಜೆಪಿ ಸರ್ಕಾರ ಕಿತ್ತುಹಾಕಿ: ರಾಯರಡ್ಡಿ
ಕುಕನೂರ 10: ನುಡಿದಂತೆ ನಡೆಯದ ರೈತರಿಗೆ ಅನ್ಯಾಯವೆಸಗಿದ 40% ಕಮಿಷನ್ ಸರ್ಕಾರವನ್ನು ಈ ಬಾರಿ 2023ರ ಚುನಾವಣೆಯಲ್ಲಿ ಕಿತ್ತು ಹಾಕಿ ಎಂದು ಮಾಜಿ ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರೆಡ್ಡಿ ಹೇಳಿದರು.
ಪಟ್ಟಣದ ಶಿರೂರು ವೀರಭದ್ರಪ್ಪ ವೃತ್ತದಲ್ಲಿ ಕುಕನೂರು ಯಲಬುಗ್ರಾ ಬ್ಲಾಕ್ ತಾಲೂಕ ಕಾಂಗ್ರೆಸ್ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಪ್ರಯುಕ್ತ ಸ್ವಾತಂತ್ರ ನಡಿಗೆಯ ಪಾದಯಾತ್ರೆಯ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು
ಬಿಜೆಪಿ ಸರ್ಕಾರದ ಪ್ರತಿಯೊಂದರಲ್ಲೂ ಭ್ರಷ್ಟಾಚಾರ ನಡೆದಿದೆ ತಾಲೂಕನ್ನು ಸಂಪೂರ್ಣವಾಗಿ ಹಾಳು ಮಾಡಲಾಗಿದೆ. ತಾಲೂಕಿನಲ್ಲಿರುವ ಸಂಸ್ಥೆಗಳನ್ನು ಮುಚ್ಚಿ ಹಾಕಲಾಗಿದೆ, ಜನತೆ ಆರಿಸಿ ಕಳುಹಿಸಿದ ಶಾಸಕರು ಮಂತ್ರಿಯಾದರು ಕೂಡ ತಾಲೂಕಿಗೆ ಯಾವುದೇ ಅಭಿವೃದ್ಧಿ ಕೆಲಸಗಳು ಆಗಿಲ್ಲ, ಅಧಿಕಾರಕ್ಕೆ ಬಂದು ಐದು ವರ್ಷ ಕಳೆಯುತ್ತಾ ಬಂದರೂ ತಾಲೂಕ ಕಚೇರಿ ಪ್ರಾರಂಭಿಸಲು ಆಗಿಲ್ಲ, ನಾನು ಸಚಿವನಾಗಿದ್ದ ಸಂದರ್ಭದಲ್ಲಿ ತಾತ್ಕಾಲಿಕವಾಗಿ ಪ್ರಾರಂಭಿಸಿದ ಕಲ್ಯಾಣ ಮಂಟಪದಲ್ಲೇ ತಹಶೀಲ್ದಾರ್ ಕಚೇರಿ ಇನ್ನೂ ನಡಿತಾ ಇದೆ, ಇವರು ಐದು ವರ್ಷಗಳಲ್ಲಿ ಮಾಡಿದ ಕೆಲಸವಾದರೂ ಏನು ತೋರಿಸಲಿ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಕುಕನೂರು ಘಟಕದ ಅಧ್ಯಕ್ಷ ಹನುಮಂತಗೌಡರು ಯಲಬುಗರ್ಾ ಬ್ಲಾಕ್ ಘಟಕದ ಅಧ್ಯಕ್ಷ ಬಸವರಾಜ ಉಳ್ಳಾಗಡ್ಡಿ ಪ್ರಮುಖರಾದ ಸತ್ಯನಾರಾಯಣ ಹರಪ್ನಳ್ಳಿ, ಮಂಜುನಾಥ್ ಕಡೆಮನಿ, ಕರಿಬಸಪ್ಪ ನಿಡುಗುಂದಿ, ಯಠಕಣ್ಣ ಯರಾಸಿ, ಸಿದ್ದಯ್ಯ ಕಳ್ಳಿಮಠ, ವೀರಯ್ಯ ತೋಂಟದಾರ್ಯ ಮಠ, ರಾಮಣ್ಣ ಬಂಕದಮನಿ ಪರಶುರಾಮ್ ಸಕ್ರ ನವರ್, ಸಂಗಮೇಶ್ ಗುತ್ತಿ ಗಗನ್ ನೋಟಗಾರ ಪ್ರಶಾಂತ್ ಆರುಬೆರಳಿನ, ಇನ್ನಿತರರು ಇದ್ದರು