ಅಂತರರಾಷ್ಟ್ರೀಯ

ಟ್ರಂಪ್‌ ಚುನಾವಣಾ ಫಲಿತಾಂಶವನ್ನು ಸ್ವೀಕರಿಸಲಿದ್ದಾರೆ; ಅಮೆರಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ

ಟ್ರಂಪ್‌ ಚುನಾವಣಾ ಫಲಿತಾಂಶವನ್ನು ಸ್ವೀಕರಿಸಲಿದ್ದಾರೆ;  ಅಮೆರಿಕ ರಾಷ್ಟ್ರೀಯ ಭದ್ರತಾ ಸಲಹೆಗಾರ

ವಾಷಿಂಗ್ಟನ್‌, ಅ 22 :ಅಮೆರಿಕ ಅಧ್ಯಕ್ಷ  ಹುದ್ದೆಯ ಮುಂಬರುವ ಚುನಾವಣೆಯ ಫಲಿತಾಂಶವನ್ನು ಡೊನಾಲ್ಡ್‌ ಟ್ರಂಪ್‌ ಸಕಾರಾತ್ಮಕವಾಗಿ ಸ್ವೀಕರಿಸುವ ವಿಶ್ವಾಸವಿದೆ ಎಂದು ಅಮೆರಿಕದ ರಾಷ್ಟ್ರೀಯ ಭದ್ರತಾ ಸಲಹೆಗಾರ ರಾಬರ್ಟ್‌ ಓ ಬ್ರೈನ್‌ ಹೇಳಿದ್ದಾರೆ.ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಅವರು,ಟ್ರಂಪ್‌ ಈಗಾಗಲೇ ತಾವು ಚುನಾವಣೆಯಲ್ಲಿ ಸೋಲು ಅನುಭವಿಸಿದರೆ ಶಾಂತಿಯುತವಾಗಿ ಅಧಿಕಾರ ಹಸ್ತಾಂತರಿಸುವುದಾಗಿ ಹೇಳಿಕೆ ನೀಡಿದ್ದಾರೆ.ಚುನಾವಣೆಯಲ್ಲಿ ಸೋತರೆ, ಟ್ರಂಪ್ ತಮ್ಮ ಅಧಿಕಾರ ಹಸ್ತಾಂತರಿಸುತ್ತಾರೆ ಎಂಬ ನಂಬಿಕೆಯಿದೆ ಎಂದಿದ್ದಾರೆ.ಆದರೆ ಚುನಾವಣೆಯಲ್ಲಿ ಯಾವುದೇ ವಂಚನೆ ನಡೆಯುವುದಿಲ್ಲ ಎಂದು ನಾವು ಖಚಿತಪಡಿಸಿಕೊಳ್ಳಬೇಕಾಗಿದೆ ಮತ್ತು ಇದು ಮುಕ್ತ ಮತ್ತು ನ್ಯಾಯಯುತ ಚುನಾವಣೆಯಾಗಿದೆ ಎಂದು ನಾವು ಖಚಿತಪಡಿಸಿಕೊಳ್ಳಬೇಕು ಎಂದಿದ್ದಾರೆ.


ಸುದ್ದಿ ಓದಿ