ಆರ್ ಬಿ ತಿಮ್ಮಾಪುರ್ ಅವರ ಗೆಲುವಿಗೆ ಹರಕೆಯ ಪೂರೈಕೆ
ಮಹಾಲಿಂಗಪುರ: ಹತ್ತಿರದ ಬೆಳಗಲಿಯ ಕಾಂಗ್ರೆಸ್ ಕಾರ್ಯಕರ್ತರಾದ ಅಡಿವೆಪ್ಪ ಕಾಶಪ್ಪ ಪೂಜಾರಿ ರವರು ಆರ್ ಬಿ ತಿಮ್ಮಾಪುರವರ ಗೆಲುವಿಗಾಗಿ ರನ್ನ ಬೆಳಗಲಿಯ ರನ್ನ ವೃತ್ತದಿಂದ ಮುಧೋಳದ ಶ್ರದ್ಧಾ ಕೇಂದ್ರವಾದ ಸೈಯದ್ ಸಾಬ್ ದರ್ಗಾ ಕತೃ ಗದ್ದಿಗೆಯ ವರೆಗೆ ದಂಡೋತ ನಮಸ್ಕಾರ ಹಾಕುವ ಹರಕೆ ಹೊತ್ತಿಕೊಂಡಿದ್ದರು.ಆ ಹರಕೆಯು ಈ ವರ್ಷ ಅಂದರೆ 2023ರ ರಾಜ್ಯ ಸಾರ್ವತ್ರಿಕ ಚುನಾವಣೆಯಲ್ಲಿ ಮುಧೋಳ ಮತಕ್ಷೇತ್ರದ ಕಾಂಗ್ರೆಸ್ ಅಭ್ಯಥರ್ಿಯಾಗಿ ಆರ್ ಬಿ ತಿಮ್ಮಾಪುರ ರವರು ವಿಜಯ ಪಡೆದುಕೊಂಡ ಸಂಭ್ರಮಕ್ಕಾಗಿ ಕಾರ್ಯಕರ್ತರಾದ ಅಡಿವೆಪ್ಪ ಕಾಶಪ್ಪ ಪೂಜಾರಿ,ರವರು 17 ಕಿಲೋಮೀಟರ್ ದಂಡೋತ್ತ ನಮಸ್ಕಾರ ಹಾಕುವುದರ ಮೂಲಕ ಹರಕೆಯನ್ನು ಪೂರೈಸಿದರು,ಈ ಸಮಯದಲ್ಲಿ ಸ್ಥಳೀಯ ಕಾಂಗ್ರೆಸ್ ಮುಖಂಡರ ಅವರೊಂದಿಗೆ ಪಾದಯಾತ್ರೆ ಮಾಡುವ ಮೂಲಕ ಪ್ರೋತ್ಸಾಹ ನೀಡಿದರು.
ಆರ್ ಬಿ ತಿಮ್ಮಾಪುರ್ರವರ ಪುತ್ರರಾದ ವಿನಯ ತಿಮ್ಮಾಪುರ ಅವರು ಅಡಿವೆಪ್ಪ ಪೂಜಾರಿ ಅವರಿಗೆ ಸತ್ಕರಿಸಿ ಮುಧೋಳ ಮತಕ್ಷೇತ್ರದ ನಿಷ್ಠಾವಂತ ಕಾಂಗ್ರೆಸ್ ಕಾರ್ಯಕರ್ತರು, ಸುಮಾರು 20 ವರ್ಷಗಳ ಕಾಲ ಪಕ್ಷಕ್ಕಾಗಿ ದುಡಿಯುತ್ತಾ ಕಾಂಗ್ರೆಸ್ಸಿನ ಗೆಲುವಿಗಾಗಿ ಅನೇಕ ಹರಕೆಗಳನ್ನು ಹೊತ್ತುಕೊಂಡು.ಇಂದು ಅತಿ ಉತ್ಸಾಹದಲ್ಲಿ ಹರಕೆಯನ್ನು ಈಡೇರಿಸುತ್ತಾ.
ಯಾವುದೇ ಆಸೆ ಆಮಿಷಗಳಿಗೆ ಒಳಗಾಗದೆ, ನಮ್ಮ ತಂದೆಯವರ ಮೇಲಿನ ಪ್ರೀತಿ ಗೌರವಕ್ಕೆ ಪಾತ್ರರಾಗಿ,ಪಕ್ಷಕ್ಕೆ ನಿಷ್ಟೂರಾಗಿ ದುಡಿದು ಕಾಂಗ್ರೆಸ್ ಪಕ್ಷಕ್ಕೆ ಗೆಲುವನ್ನು ನೀಡಿದ್ದಾರೆ.ಮುಧೋಳ ಮತಕ್ಷೇತ್ರದ ಅಭಿವೃದ್ಧಿಗಾಗಿ ಪಕ್ಷದ ಕಾರ್ಯಕರ್ತರು ಏಳಿಗೆಗಾಗಿ ನಾವು ನಮ್ಮ ತಂದೆಯವರ ಜೊತೆಗೆ ಕೈಜೋಡಿಸಿ ಸವಾರ್ಂಗಿನ ಪ್ರಗತಿಗೆ ಅವಿರತವಾಗಿ ಕಾರ್ಯಕರ್ತರ ಜೊತೆಗೆ ಸೇವೆಗೆಯುತ್ತೇವೆ.ನಮ್ಮ ತಂದೆಯ ಗೆಲುವಿಗಾಗಿ ಈ ರೀತಿ ಹರಕೆ ಹೊತ್ತುಕೊಂಡಂತ ಎಲ್ಲಾ ಕಾರ್ಯಕರ್ತರಿಗೆ ಹಾಗೂ ಮುಧೋಳದ ಎಲ್ಲಾ ನಮ್ಮ ಪಕ್ಷದ ಕಾರ್ಯಕರ್ತರಿಗೆ ಅನಂತ ನಮನಗಳನ್ನು ಸಲ್ಲಿಸುವುದರ ಜೊತೆಗೆ ನಿಮ್ಮೆಲ್ಲರ ಸೇವೆಗೆ ಸದಾಕಾಲ ನಿಮ್ಮೊಂದಿಗೆ ಇರುತ್ತೇವೆ ಎಂಬ ವಿಚಾರವನ್ನು ತಿಳಿಸಿದರು.ಈ ಸಮಯದಲ್ಲಿ ಕಾಂಗ್ರೆಸ್ ಮುಖಂಡರಾದ ಪ್ರಕಾಶ ಮಾಂಗ,ಸತೀಶ್ ಗಾಡಿ, ಪ್ರವೀಣ್ ಪಾಟೀಲ, ರಾಘವೇಂದ್ರ ನೀಲಣ್ಣವರ,ಸಂಗಪ್ಪ ಅಮಾತಿ, ಈರಪ್ಪ ಕಿತ್ತೂರ,ಲಕ್ಕಪ್ಪ ಹಂಚಿನಾಳ, ಶಿವ ಗೌರಣ್ಣವರ,ಗಿರೀಶ ಗೌರವ್ವಗೋಳ,ಸುರೇಶ ಮೇತ್ರಿ,ಚಂದು ಬಂಡಿಗಿಣಿ, ಸದಾಶಿವ ಹೊರಗಿನಮನಿ,ಅಲಿಸಾಬ್ ನದಾಫ್, ಚಂದ್ರಶೇಖರ್ ನೀಲಣ್ಣವರ,ಅಶೋಕ್ ಸರವಿ,ಕಲ್ಮೇಶ್ ಮಳಲಿ,ಕುಮಾರ್ ಹಲಕಿ,ರಮೇಶ್ ಬಾವಿಮನಿ, ಪರಮಾನಂದ ಮೇತ್ರಿ, ಇದೇ ಸಂದರ್ಭದಲ್ಲಿ ಹಲವಾರು ಕಾರ್ಯಕರ್ತರೂ ಭಾಗಿಯಾಗಿದ್ದರು.