ಸೋಮೈಯ ಸಕ್ಕರೆ ಕಾರ್ಖಾನೆ ಕಾರ್ಯಕ್ಷೇತ್ರದ ವಿದ್ಯಾರ್ಥಿಗಳಿಗೆ ಶಿಷ್ಯ ವೇತನ !
ಮಹಾಲಿಂಗಪುರ : ಸೋಮಯ್ಯ ಗ್ರಾಮೀಣ ವಿಕಾಸ ಕೇಂದ್ರ, ಗೋದಾವರಿ ಬಯೋರಿಫೈನ್ರಿಸ್ ' ಹೆಲ್ಪ್ ಏ ಚೈಲ್ಡ್ ' ಮತ್ತು ಶಿಷ್ಯ ವೇತನಕ್ಕಾಗಿ 2023-24ನೇ ಸಾಲಿನ ಸೋಮೈಯ ಸಕ್ಕರೆ ಕಾರ್ಖಾನೆ ಕಾರ್ಯಕ್ಷೇತ್ರದಲ್ಲಿರುವ ಶಿಕ್ಷಣ ಸಂಸ್ಥೆಗಳಲ್ಲಿ ಎಸೆಸೆಲ್ಸಿ, ಪಿಯುಸಿ, ಪದವಿ ಮುಗಿಸಿರುವ ಹಾಗೂ ಇತರೆ ಪದವಿ/ಡಿಪ್ಲೊಮಾ ತರಗತಿಗಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಗಳಿಗೆ ಶಿಷ್ಯವೇತನಕ್ಕಾಗಿ ಅರ್ಜಿ ಕರೆಯಲಾಗಿದೆ.
ಜುಲೈ 9ರಂದು ರವಿವಾರ ಮುಂಜಾನೆ 9ಗಂಟೆಗೆ ಗೋದಾವರಿ ಸಕ್ಕರೆ ಕಾರ್ಖಾನೆ ಆವರಣದಲ್ಲಿರುವ ಸೋಮಯ್ಯ ವಿನಯಮಂದಿರ ಪ್ರೌಢಶಾಲೆ ಹಾಗೂ ಕೆ.ಜೆ.ಸೋಮಯ್ಯ ಆಂಗ್ಲ ಮಾಧ್ಯಮ ಶಾಲೆಯ ಸಮೀರವಾಡಿಯಲ್ಲಿ ನಡೆಯುವ ಸಮಾರಂಭದಲ್ಲಿ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸ್ಕಾಲರ್ಶಿಪ್ ವಿತರಿಸಲಾಗುವುದು.
ಮಾನದಂಡಗಳು : *ವಿದ್ಯಾರ್ಥಿಗಳು ಆರ್ಥಿಕವಾಗಿ ಹಿಂದುಳಿದವರಾಗಿರಾಗಿದ್ದು ಪ್ರತಿ ಶತ 70 ಸರಾಸರಿ ಅಂಕಗಳನ್ನು ಪಡೆದಿರಬೇಕು. ನಮ್ಮ ಕಾರ್ಯಕ್ಷೇತ್ರದಲ್ಲಿಯೇ ಮುಂದಿನ ಶಿಕ್ಷಣ ಮುಂದುವರೆಸುವರಾಗಿಬೇಕು. * ಸರ್ಕಾರಿ ಕಾಲೇಜು ಮತ್ತು ಸರಕಾರಿ ಕೋಟಾದಲ್ಲಿ ಪ್ರವೇಶ ಪಡೆಯುವವರು ಹಾಗೂ ಸಣ್ಣ ರೈತ, ಮಾಜಿ ದೇವದಾಸಿ, ಅನಾಥ, ದಿನಗೂಲಿ, ನೇಕಾರ, ಬೀದಿ ಬದಿ ವ್ಯಾಪಾರಸ್ಥರಿಗೆ ಆದ್ಯತೆ ನೀಡಲಾಗುವುದು.
ಬಿ.ಇ, ಬಿಎ ಸ್ಇ ಅಗ್ರಿ ಹಾಗೂ ಇತರೆ ವೃತಿಪರ ಕೋರ್ಸ್ ಗಳಿಗೆ 15ಸಾವಿರ ಕಿಂತ ಕಡಿಮೆ, ಸಿಇಟಿ ಯಾರ್ಂಕ್, ಎಂ.ಬಿ.ಬಿ.ಎಸ್ 30ಸಾವಿರ ಕಿಂತ ಕಡಿಮೆ, ನೀಟ್ ಹಾಗೂ ಡಿಪ್ಲೊಮಾ ನಂತರದ ಬಿ.ಇ ವಿದ್ಯಾರ್ಥಿಗಳಿಗೆ 2ಸಾವಿರ ನೀಡಲಾಗುವುದು.
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಜೂನ್ 30 ಇದ್ದು ಎಸ್ಎಸ್ಎಲ್ಸಿ ವಿದ್ಯಾಥರ್ಿಗಳಿಗೆ ಮಾತ್ರ ಪರಿಕ್ಷೆ ಜುಲೈ 9ರಂದು ಮುಂಜಾನೆ 9ರಿಂದ 11.30 ರವರೆಗೆ ನಡೆಯಲಿದೆ. ವಿದ್ಯಾರ್ಥಿ ಗಳು ಬರುವಾಗ ಹಾಕಿದ ಅರ್ಜಿ ಯ ನಕಲು ಮತ್ತು ಅರ್ಜಿ ಸಂಖ್ಯೆ ಹೊಂದಿರಬೇಕು. ಎಸ್ಎಸ್ಎಲ್ಸಿ ಹಾಲ್ ಟಿಕೆಟ್ ಮತ್ತು ಆಧಾರ್ ಕಾರ್ಡ್ ತರಬೇಕು. ಸ್ಮಾರ್ಟ್ ಫೋನ್, ಟ್ಯಾಬ್ ಮೂಲಕವೆ ಪರೀಕ್ಷೆ ಮತ್ತು ಸಂದರ್ಶನ ನಡೆಯಲಿದೆ ವಿದ್ಯಾ ವಿಹಾರದ ಮುಖ್ಯ ಸಂಯೋಜಕರಾದ ವಿಜಯಕುಮಾರ ಕಣವಿ ತಿಳಿಸಿದ್ದಾರೆ..
ಹೆಚ್ಚಿನ ಮಾಹಿತಿಗಾಗಿ 08350- 260046/47,48 ಈ ನಂಬರ್ ಗಳಿಗೆ ಸಂಪರ್ಕಿಸಬಹುದಾಗಿದೆ.