ಸಾರ್ವಜನಿಕ ಸಂಪತ್ತಿನ ರಕ್ಷಣೆ ಎಲ್ಲರ ಹೊಣೆ
-ಡಾ. ಹೇಮಾವತಿ ಸೊನ್ನೊಳ್ಳಿ
ಬೆಳಗಾವಿ
ಒಂದೇ ಆವರಣದಲ್ಲಿ ಪ್ರಾಥಮಿಕ ಮಾಧ್ಯಮಿಕ ಶಾಲೆಗಳು ಮತ್ತು ಮಹಾವಿದ್ಯಾಲಯಗಳು ಇದ್ದವು. ಅವೆಲ್ಲವೂ ಸರಕಾರಿ ಒಡೆತನದಲ್ಲಿದ್ದವು. ಸಾವಿರಾರು ವಿದ್ಯಾಥರ್ಿಗಳು ಅಲ್ಲಿ ಕಲಿಯುತ್ತಿದ್ದರು. ಕೆಲವೊಂದು ವಿದ್ಯಾಥರ್ಿಗಳು ಓದಿನೆಡೆಗೆ ಲಕ್ಷಕೊಡದೆ ಮಸ್ತಿಮೋಜು ಮಾಡುವುದರಲ್ಲೇ ಹೊತ್ತು ಕಳೆಯುತ್ತಿದ್ದರು. ಅವರಿಗೆ ಶಾಲಾ ಕಾಲೇಜಿನ ವಸ್ತುಗಳನ್ನು ಯಾವ ರೀತಿಯಾಗಿ ಉಪಯೋಗಿಸಬೇಕೆನ್ನುವ ಅರಿವು ಅವರಿಗಿರಲಿಲ್ಲ ಶಾಲಾ ಕಾಲೇಜಿನ ಕುಚರ್ಿ, ಡೆಸ್ಕ್, ಟೇಬಲ್, ಬಾಗಿಲುಗಳು, ಕಿಟಕಿಗಳು, ತೋಟದಲ್ಲಿಯ ಹೂ ಗಿಡಗಳನ್ನು ಮನ ಬಂದಂತೆ ಉಪಯೋಗಿಸುತ್ತಿದ್ದರು. ಸಾರ್ವಜನಿಕ ವಸ್ತುಗಳಾದ ಅವುಗಳೆನ್ನೆಲ್ಲ ಬೇಕಾ ಬಿಟ್ಟಿ ಬಳಸಿಕೊಂಡು ಮುರಿದು ಹಾಳುಮಾಡುತ್ತಿದ್ದರು. ಹಂಗೆಲ್ಲಾ ಮಾಡಬಾರದು ಅವುಗಳನ್ನೆಲ್ಲ ಚೆನ್ನಾಗಿ ಉಪಯೋಗಿಸಬೇಕು ಎಂದು ಗುರುಗಳು ಹಾಗೂ ಇನ್ನಿತರರು ಹೇಳಿದರೂ ತಮ್ಮ ಕೆಟ್ಟ ಚಾಳಿಯನ್ನು ಬಿಡುತ್ತಲೇ ಇರಲಿಲ್ಲ. ಹೀಗಾಗಿ ಸಾರ್ವಜನಿಕ ಸಂಪತ್ತಿನ ದುರುಪಯೋಗದಿಂದ ನಷ್ಟವಾಗುತ್ತಿತ್ತು.
ಸಾರ್ವಜನಿಕ ಕಚೇರಿಯೊಂದಿತ್ತು ಅಲ್ಲಿ ಅನೇಕ ಸಿಬ್ಬಂದಿಯವರು ಕಾರ್ಯಗೈಯುತ್ತಿದ್ದರು. ಅವರು ಸಾರ್ವಜನಿಕ ಉಪಯೋಗಕ್ಕಾಗಿ ಇರುವ ವಸ್ತುಗಳನ್ನು ತುಂಬಾ ಅಸಡ್ಡೆಯಿಂದ ಉಪಯೋಗಿಸುತ್ತಿದ್ದರು. ಕಚೇರಿ ಕೆಲಸಕ್ಕೆ ಒದಗಿಸಿದ ವಸ್ತ್ತುಯಗಳನ್ನು ಕಾಳಜಿಪೂರ್ವಕವಾಗಿ ನಾವು ಸಂಭಾಳಿಸಿ ಬಳಸಬೇಕೆನ್ನುವ ಪ್ರಜ್ಞೆ ಅವರಲ್ಲಿ ಇರಲಿಲ್ಲ. ಸಾರ್ವಜನಿಕ ಬಳಕೆಗಾಗಿ ನೀಡಿದ ವಾಹನವನ್ನು ಸ್ವಂತ ಕಾರ್ಯಕ್ಕೆ ಬಳಸಿಕೊಳ್ಳುತ್ತಿದ್ದರು. ಅದಕ್ಕೆ ಬೇಕಾದ ಇಂಧನ ಹಾಗೂ ರಿಪೇರಿ ಖರ್ಚನ್ನು ಸಾರ್ವಜನಿಕ ಬೊಕ್ಕಸಕ್ಕೆ ಹಾಕುತ್ತಿದ್ದರು. ಹೋದದ್ದು ಹೋಯ್ತು ಇದ್ದದ್ದು ಇತ್ತು ಅನ್ನೋ ನಿಲರ್ಿಪ್ತಭಾವನೆಯಿಂದ ಕಾರ್ಯಗೈಯುತ್ತಿದ್ದರು.
ಒಂದು ಸಂಘದ ಸದಸ್ಯರು ತಮ್ಮ ಹಲವಾರು ಬೇಡಿಕೆಗಳನ್ನು ಪೂರೈಸಿಕೊಡಬೇಕೆಂದು ಸರಕಾರದ ವಿರುದ್ಧ ಚಳುವಳಿ ಕೈಗೊಂಡಿದ್ದರು. ಚಳುವಳಿಗಳನ್ನು ಮಾಡುವಾಗ ತುಂಬಾ ಸಂಯಮ, ಶಿಸ್ತು ಹಾಗೂ ಶಾಂತಿಯಿಂದ ಮಾಡಬೇಕಾಗುತ್ತದೆ ಯಾವುದೇ ಸಾರ್ವಜನಿಕ ಸಂಪತ್ತಿಗೆ ಹಾನಿ ಮಾಡಬಾರದು ಆದರೆ ಚಳುವಳಿ ಮಾಡುವ ಇವರು ರಸ್ತೆಯಲ್ಲಿ ಘೋಷಣೆಗಳನ್ನು ಕೂಗುತ್ತಾ ಹೊರಟಿರುವಾಗ ಒಮ್ಮೆಲೇ ಉದ್ರಿಕ್ತರಾಗಿ ಕಲ್ಲು ತೂರಾಟ ಮಾಡತೊಗಿದರು ಇದರಿಂದ ಎಷ್ಟೋ ಜನರಿಗೆ ಪೆಟ್ಟು ಬಿದ್ದವು ದ್ವಿಚಕ್ರವಾಹನಗಳು, ಕಾರುಗಳು, ಬಸ್ಸುಗಳು ಜಖಂಗೊಂಡವು. ಉದ್ರಿಕ ಗುಂಪು ಸಂಬಂಧಿಸಿದ ಕಚೇರಿ ಒಳಗಡೆ ನುಗ್ಗಿ ಕಚೇರಿಯಲ್ಲಿದ್ದ ವಸ್ತುಗಳನ್ನೆಲ್ಲ ಸ್ವಂಸಗೊಳಿಸಿ ಅಟ್ಟಹಾಸ ಮೆರೆದರು. ಅಂಹಿಸ್ಮಾತಕವಾಗಿ ಗೈಯಬೇಕಾಗಿದ್ದ ಚಳುವಳಿಗೆ ಹಿಂಸೆಯ ರೂಪ ಕೊಟ್ಟು ಗೊಂದಲಮಯ ವಾತಾವರಣ ನಿಮರ್ಿಸಿ ಹಾನಿಗಿಡಾಗುವಂತೆ ಮಾಡಿದರು.
ಸಾರ್ವಜನಿಕರ ಸಾಮಾಜಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳನ್ನು ನಡೆಸಲು ಉಪಯೋಗಲೆಂದು ಸರಕಾರದವತಿಯಿಂದ ಒಂದು ಶಹರದಲ್ಲಿ ಸಕಲ ಸವಲತ್ತುಗಳುಳ್ಳ ಒಂದು ಭವನವನ್ನು ಕಟ್ಟಿಸಲಾಗಿತ್ತು. ಅದರ ಉಸ್ತುವಾರಿಗೆಂದು ಅಲ್ಲಿ ಸಿಬ್ಬಂದಿ ವರ್ಗದವರನ್ನು ನೇಮಿಸಿದ್ದರು. ಸರಕಾರಿ ಕೆಲಸಕ್ಕೆ ಸರಕಾರವಿಲ್ಲ ಎಂಬಂತೆ ಸಿಬ್ಬಂದಿಯವರು ಜವಾಬ್ದಾರಿಯುತವಾಗಿ ಕಾರ್ಯನಿರ್ವಹಿಸದೇ ತುಂಬಾ ಬೇಜವಾಬ್ದಾರಿಯಿಂದ ಕೆಲಸ ಮಾಡುತ್ತಿದ್ದರು. ಜನರ ಅನುಕೂಲಕ್ಕಾಗಿ ಇರುವ ಭವನ ಜನರಿಗೆ ಅನಾಕೂಲವನ್ನೇ ಸೃಷ್ಟಿಸುತ್ತಿತ್ತು. ಅಗತ್ಯವಿದ್ದ ಎಲ್ಲಾ ವಸ್ತಗಳನ್ನು ಸರಿಯಾಗಿ ಪೂರೈಸುತ್ತಿದ್ದರೂ ಸಿಬ್ಬಂದಿಯವರು ತಮ್ಮ ತಮ್ಮ ಕಾರ್ಯಗಳಿಗೆ ಉಪಯೋಗಿಸಿಕೊಂಡು ಜನರೇನೆ ಕೇಳಿದರೂ ಅದು ಇಲ್ಲಾ ಇಲ್ಲಾ ಇಲ್ಲಾ ಅನ್ನುತ್ತಿದ್ದರು ಅಲ್ಲಿಯ ಉಸ್ತುವಾರಿಯನ್ನು ಸರಿಯಾಗಿ ನಿಭಾಯಿಸದೇ ಎಷ್ಟೋ ಮೌಲ್ಯಯುತ ವಸ್ತುಗಳು ಸಿಬ್ಬಂದಿಯವರ ಬಂದು ಅಥವಾ ಬಂದರೂ ಲಕ್ಷಕೊಡದೆ ಮಾಯವಾಗಿ ಹೋಗಿಬಿಡುತ್ತಿದ್ದರು. ವಿವಿಧ ಉದ್ದೇಶಗಳಿಂದ ಭವನನ್ನು ಬಳಸಿಕೊಂಡು ಜನರೂ ಅಲ್ಲಿಯ ವಸ್ತುಗಳನ್ನು ಎತ್ತಬೇಕಾದತ್ತ ಬಳಸಿ ಹಾನಿ ಹಾಗೂ ಅಸ್ತವ್ಯಸ್ತತೆಯನ್ನು ಉಂಟು ಮಾಡುತ್ತಿದ್ದರು. ಸಾರ್ವಜನಿಕ ಸಂಪತ್ತನ್ನು ಸದ್ವಿನಿಯೋಗ ಮಾಡಿ ಅವುಗಳನ್ನು ಸಂರಕ್ಷಿಸಬೇಕೆಂಬ ಪರಿಜ್ಞಾನವೇ ಅವರಿಗಿರಲಿಲ್ಲ.
ಇದೇಕೆ ಹೀಗೆ ಅಂತಾ? ಸಾರ್ವಜನಿಕ ಸಂಪತ್ತೆಂದರೆ ಜನರೆಲ್ಲರ ಸಂಪತ್ತು. ಅದು ನಮ್ಮ ಸಂಪತ್ತು ಪೀಳಿಗೆಯಿಂದ ಪಿಳಿಗೆಗೆ ಉಪಯೋಗವಾಗುವಂತಹ ಸಂಪತ್ತದು. ನಮ್ಮ ಮನೆಯ ಒಂದು ಸೂಜಿಯನ್ನು ಕಾಳಜಿಪೂರ್ವಕವಾಗಿ ತೆಗೆದಿಡುವ ನಾವು ಸಾರ್ವಜನಿಕ ಸೊತ್ತಿನ ವಸ್ತುಗಳನ್ನು ದುರ್ಬಳಕೆ ಮಾಡಬಾರದು ಮತ್ತು ಅವುಗಳನ್ನು ಹಾನಿಗೊಳಪಡಿಸಬಾರದು ಎಂಬುದು ನಮಗೆಲ್ಲರಿಗೂ ಅರಿವಾಗಬೇಕು ಸರಕಾರವೆಂದರೆ ನಾವು ನಾವೆಂದರೆ ಸರಕಾರ ಸರಕಾರದ ಹಾನಿ ಇದು ನಮ್ಮೆಲ್ಲರ ಹಾನಿ ನಮ್ಮ ಮನೆಯ ವಸ್ತುಗಳನ್ನು ಅತ್ಯಂತ ಜಾಗರೂಕತೆಯಿಂದ ಇರಿಸಿಕೊಳ್ಳುವಂತೆ. ನಾವು ಸಾರ್ವಜನಿಕ ವಸ್ತುಗಳನ್ನು ಕೂಡಾ ಇರಿಸಿಕೊಳ್ಳಬೇಕು. ಚಳುವಳಿಗಳನ್ನು ಮಾಡಿದರೆ ಅತ್ಯಂತ ಶಾಲೆಯಿಂದ ಹಾಗೂ ಶಿಸ್ತಿನಿಂದ ಅಹಿಂಸಾತ್ಮಕವಾಗಿ ವಿರೋಧಿಸಿ ಯಾವುದೇ ವಾಹನ, ವಸ್ತು ಹಾಗೂ ಕಚೇರಿಗಳು ಹಾಗೂ ಜೀವಗಳು ಹಾಳಾಗದಂತೆ ನೋಡಿಕೊಳ್ಳುವುದು ನಮ್ಮೆಲ್ಲರ ಆದ್ಯ ಕರ್ತವ್ಯವಾಗಿದೆ ಸಾರ್ವಜನಿಕ ಆಸ್ತಿ ನಮ್ಮೆಲ್ಲರ ಆಸ್ತಿ ಎಂಬ ಅರಿವು ನಮ್ಮಲ್ಲಿ ಇರಬೇಕು. ಆದುದರಿಂದ ಸಾರ್ವಜನಿಕ ಸಂಪತ್ತಿನ ರಕ್ಷಣೆ ಎಲ್ಲರ ಹೊಣೆ ಎಂಬುದೇ ನನ್ನ ಅಭಿಪ್ರಾಯ.