77ನೇ ಗಣರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿದ ಅಧ್ಯಕ್ಷೆ ರೂಪಾ ಹೊಸಟ್ಟಿ
ಮಹಾಲಿಂಗಪುರ 27 : ರನ್ನಬೆಳಗಲಿ ಪಟ್ಟಣ ಪಂಚಾಯತ ಕಾರ್ಯಾಲಯದ ಆಶ್ರಯದಲ್ಲಿ ಸೋಮವಾರ ದಂದು 77ನೇ ಗಣರಾಜ್ಯೋತ್ಸವದ ಸಮಾರಂಭ ಜರುಗಿತು. ಪಟ್ಟಣ ಪಂಚಾಯತ್ ಕಾರ್ಯಾಲಯದ ಧ್ವಜಾರೋಹಣ ನೆರವೇರಿಸಿದ ಅಧ್ಯಕ್ಷೆ ರೂಪಾ ಸದಾಶಿವ ಹೊಸಟ್ಟಿ ಎಲ್ಲ ಪ್ರಜೆಗಳು ಭೇದ-ಭಾವ ಮರೆತು ಅಖಂಡ ಭಾರತದ ಅಭಿವೃದ್ಧಿಗೆ ಒಂದಾಗಬೇಕು. ಭಿನ್ನ ವಿಭಿನ್ನ ಸಂಸ್ಕೃತಿ ಧರ್ಮ ಒಳಗೊಂಡ ಭಾರತವು ವಿಶ್ವದ ಶಾಂತಿಯ ತೊಟ್ಟಿಲಾಗಿದೆ ಎಂದು ತಿಳಿಸಿದರು. ರಾಜೀವಗಾಂಧಿ ಯುವ ಸೇವಾ ಕೇಂದ್ರ ಭವನದ ಧ್ವಜಾರೋಹಣವನ್ನು. ಉಪಾಧ್ಯಕ್ಷೆ ಸಹನಾ ಸಿದ್ದು ಸಾಂಗ್ಲಿಕರ,ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘ, ಕಾರ್ಯಾಲಯದ ಧ್ವಜಾರೋಹಣವನ್ನು ಅಧ್ಯಕ್ಷ ಚಿನ್ನಪ್ಪ ಪೂಜಾರಿ ನೆರವೇರಿಸಿದರು.
ಸ್ಥಾಯಿ ಸಮಿತಿ ಚೇರ್ಮನ್ ಪ್ರವೀಣ ಬರಮನಿ, ಸದಸ್ಯರಾದ ಪ್ರವೀಣ ಪಾಟೀಲ, ಮುಬಾರಕ ಅತ್ತಾರ, ನೀಲಕಂಠ ಸೈದಾಪುರ, ಮುತ್ತಪ್ಪ ಸನಹಟ್ಟಿ,ಮುತ್ತಪ್ಪ ನಾಯಕ,ಸಿದ್ದುಗೌಡ ಪಾಟೀಲ, ದ್ರಾಕ್ಷಾಯಿಣಿ ಮುರನಾಳ, ಸಾವಿತ್ರಿ ರಾಮದುರ್ಗ, ಭೀಮಪ್ಪ ಹೊಸಮನಿ, ಕರಿಯಪ್ಪ ಕುಂಬಾಳಿ,ಸದಾಶಿವ ಶಂಕ್ರಟ್ಟಿ,ಗೌರವ್ವ ಅಮಾತಿ, ಅನಿತಾ ಮಲಾವಡಿ,ಕಾಶವ್ವ ಪುರಾಣಿಕ, ರೇಣುಕಾ ಬಾಗಲಿ,ನಾಮ ನಿರ್ದೇಶಕ ಸದಸ್ಯರಾದ ಸಿದ್ದು ಮಾಳಿ, ಬಸಪ್ಪ ಗೌರಣ್ಣವರ, ಯಲ್ಲಪ್ಪ ದೋಬಸಿ,ಈರಣ್ಣ ದಡ್ಡಿ ಮುಖ್ಯಾಧಿಕಾರಿಗಳು ಪ್ರಸ್ತವಿಕವಾಗಿ,ಮಾತನಾಡಿ ಎಲ್ಲರನ್ನ ಸ್ವಾಗತಿಸಿದರು. ಯೋಗ ಶಿಕ್ಷಕ ರಾಘವೇಂದ್ರ ನೀಲಣ್ಣವರ ಕಾರ್ಯಕ್ರಮವನ್ನು ನಿರೂಪಿಸಿದರು.
ಮುಖಂಡರಾದ ಸದಾಶಿವ ಹೊಸಟ್ಟಿ, ಸಂಗಪ್ಪ ಅಮಾತಿ, ಈರ್ಪ ಕಿತ್ತೂರ, ಮಹಾಲಿಂಗಪ್ಪ ಪುರಾಣಿಕ,ಸದಾಶಿವ ಕುಲಗೋಡ,ಮಲಪ್ಪ ಮಲಾವಡಿ,ಭಿನಮನಗೌಡ ಪಾಟೀಲ,ಲಕ್ಕಪ್ಪ ಹಂಚಿನಾಳ, ಪ್ರಕಾಶ ಕೊಣ್ಣೂರ, ಮಾರುತಿ ಜಾಲಿಕಟ್ಟಿ,ಪ್ರಶಾಂತ ಪಾಟೀಲ, ರಾಜು ಮುಗಳಖೋಡ,ಉಮಾಶ್ರೀ ಜಾಡರ, ಮಹಾಲಿಂಗಪ್ಪ ಸಮೇರ,ಬಾಬು ಜಕಾತಿ ಮತ್ತು ಊರಿನ ಗಣ್ಯರು, ಪಿಕೆಪಿಎಸ್ ಪದಾಧಿಕಾರಿಗಳು ಮತ್ತು ಸಿಬ್ಬಂದಿ, ಪ.ಪಂ.ಸಿಬ್ಬಂದಿ,ಎಮ್ ಪಿ ಶಾಲೆಯ ಶಿಕ್ಷಕ ಬಳಗ, ವಿದ್ಯಾರ್ಥಿಗಳು ಹಾಗೂ ಸಾರ್ವಜನಿಕರು ಉಪಸ್ಥಿತರಿದ್ದರು.