2018 ರ "ಗಡಿ ಕನ್ನಡ ತೇರು" ರಾಜ್ಯೋತ್ಸವ ಪ್ರಶಸ್ತಿಗಳ ಪ್ರದಾನ ಸಮಾರಂಭ
ಲೋಕದರ್ಶನ ವರದಿ
ಬೆಳಗಾವಿ-20-ಬೆಳಗಾವಿ ಗಡಿ, ನಾಡು, ನುಡಿಗಾಗಿ ದುಡಿದು ಮಡಿದವರ ಸೇವೆಯನ್ನು ಕಾಲ ಕಾಲಕ್ಕೆ ಸ್ಮರಿಸಿಕೊಳ್ಳುವದು ಇಂದಿನ ಯುವ ಕನ್ನಡ ಹೋರಾಟಗಾರರ ಕರ್ತವ್ಯವಾಗಿದೆಯೆಂದು ಹಿರಿಯ ರಂಗಕಮರ್ಿ ಸಾಹಿತಿ ಬಿ. ಎಸ್. ಗವಿಮಠ ಇಂದಿಲ್ಲಿ ಹೇಳಿದರು.
ಬೆಳಗಾವಿ ಜಿಲ್ಲಾ ಕನ್ನಡ ಸಂಘಟನೆಗಳ ಕ್ರಿಯಾ ಸಮಿತಿಯು ಇಂದು ಮುಂಜಾನೆ ಕನ್ನಡ ಸಾಹಿತ್ಯ ಭವನದಲ್ಲಿ ಆಯೋಜಿಸಿದ್ದ 2018 ರ "ಗಡಿ ಕನ್ನಡ ತೇರು" ರಾಜ್ಯೋತ್ಸವ ಪ್ರಶಸ್ತಿಗಳ ಪ್ರದಾನ ಸಮಾರಂಭದ ಅಧ್ಯಕ್ಷತೆ ವಹಿಸಿ ಅವರು ಮಾತನಾಡುತ್ತಿದ್ದರು.
ಕಳೆದ 50 ವರ್ಷಗಳಲ್ಲಿ ಬೆಳಗಾವಿಯ ಸ್ಥಿತಿಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ. 60-70 ರ ದಶಕದಲ್ಲಿ ಕನರ್ಾಟಕ ರಾಜ್ಯೋತ್ಸವವನ್ನು ಕನ್ನಡಿಗರು ಅಂಜಿಕೆ ಮತ್ತು ಅಳುಕಿನಿಂದ ಔಪಚಾರಿಕವಾಗಿ ಆಚರಿಸುವ ದುಸ್ಥಿತಿಯಿತ್ತು. ಆದರೆ ಇಂದು ಕನರ್ಾಟಕ ರಾಜ್ಯೋತ್ಸವದ ಮೆರವಣಿಗೆಯಲ್ಲಿ ಮೂರು ಲಕ್ಷಕ್ಕಿಂತ ಅಧಿಕ ಕನ್ನಡಿಗರು ಮುಂಜಾನೆಯಿಂದ ರಾತ್ರಿಯವರೆಗೆ ನಿರ್ಭಯವಾಗಿ, ನಿರಾತಂಕವಾಗಿ ಭಾಗವಹಿಸುತ್ತಿದ್ದಾರೆ. ಈ ಸುಧಾರಣೆಗೆ ಕನ್ನಡ ಸಂಘಟನೆಗಳ ಹೋರಾಟವೇ ಕಾರಣವಾಗಿದೆ ಎಂದು ಶ್ರೀ ಗವಿಮಠ ಅವರು ಹೇಳಿದರು.
ದುಡಿದು ಮಡಿದವರ ಸ್ಮರಣಾರ್ಥ ಕನ್ನಡ ಕ್ರಿಯಾ ಸಮಿತಿಯು "ಗಡಿ ಕನ್ನಡ ತೇರು" ರಾಜ್ಯೋತ್ಸವ ಪ್ರಶಸ್ತಿಗಳನ್ನು ಪ್ರದಾನ ಮಾಡುತ್ತಿರುವದು ಸಹ ಬೆಳಗಾವಿಯ ಇತಿಹಾಸದಲ್ಲಿ ಮೊಟ್ಟ ಮೊದಲನೆಯದಾಗಿದೆಯೆಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಿರಿಯ ಕನ್ನಡ ಹೋರಾಟಗಾರ ಶ್ರೀ ಬಿ. ತಿಪ್ಪೇಸ್ವಾಮಿಯವರು ಮಾತನಾಡಿ, 80 ರ ದಶಕದ ಆರಂಭದಲ್ಲಿ ಕನ್ನಡ ಸಂಘಟನೆಗಳು ನಡೆಸಿದ ಹೋರಾಟದ ಫಲವಾಗಿ ಬೆಳಗಾವಿಯಲ್ಲಿ ಅನೇಕ ಕನ್ನಡ ಪರ ಕೆಲಸಗಾಳಾದವೆಂದು ಸ್ಮರಿಸಿಕೊಂಡರು. ಮಹಾನಗರ ಪಾಲಿಕೆಯ ಸದಸ್ಯ ಶ್ರೀ ರಮೇಶ ಸೊಂಟಕ್ಕಿ ಮಾತನಾಡಿ ಬೆಳಗಾವಿ ನಗರದಲ್ಲಿ ಪ್ರತಿಶತ 80 ರಷ್ಟು ಕನ್ನಡದ ವಾತವಾರಣ ಇದೆಯೆಂದು ಹೇಳಿದರು.
ಇದೇ ಸಂದರ್ಭದಲ್ಲಿ ಶ್ರೀ ಎಂ.ಎಸ್. ಇಂಚಲ, ಶ್ರೀ ಡಿ.ಎಲ್. ಕುಲಕಣರ್ಿ, ದಿವಂಗತ ಹೋರಾಟಗಾರ ಜಯಪಾಲ ಅಪ್ಪಣ್ಣವರ ಪುತ್ರಿ ಸುರೇಖಾ ಗೌರಗೊಂಡ, ದಿ. ಗೋಪಾಲ ಘಂಟಿಯವರ ಪುತ್ರಿ ಶ್ರೀಮತಿ ಭುವನೇಶ್ವರಿ ಹಲಕಣರ್ಿ ಅವರು ಮಾತನಾಡಿದರು.
ಪ್ರಶಸ್ತಿಗಳ ವಿವರ :
ಕನ್ನಡ ಸಂಘಟನೆಗಳ ರೂಪಕಗಳು
ಪ್ರಥಮ ಪ್ರಶಸ್ತಿ: ದಿ. ಅಣ್ಣೂಗುರೂಜಿ ಸ್ಮರಣಾರ್ಥ : ಜಯವಾಗಲಿ ಯುವಕ ಮಂಡಳ
ದ್ವಿತೀಯ ಪ್ರಶಸ್ತಿ : ದಿ. ಶಂಕರ ಟೋಪಗಿ ಸ್ಮರಣಾರ್ಥ : ಜಯ ಕನರ್ಾಟಕ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವಕ ಸಂಘ, ತೃತಿಯ ಪ್ರಶಸ್ತಿ : ದಿ. ಎಂ.ಎಸ್. ಮುಗಳಿ ಸ್ಮರಣಾರ್ಥ : ಚೈತನ್ಯ ಗೆಳೆಯರ ಬಳಗ, ನಾಲ್ಕನೆಯ ಪ್ರಶಸ್ತಿ : ದಿ. ಜಯಪಾಲ ಅಪ್ಪಣ್ಣವರ ಸ್ಮರಣಾರ್ಥ : ಜೈ ಚಾಮುಂಡೇಶ್ವರಿ ಯುವಕ ಸಂಘ, ಐದನೆಯ ಪ್ರಶಸಿ : ದಿ. ಅನಿಕ ಕಮತೆ ಸ್ಮರಣಾರ್ಥ : ಶ್ರೀ ದುಗರ್ಾದೇವಿ ಮಹಿಳಾ ಸಂಘ,
ವಿವಿಧ ಸರಕಾರಿ ಇಲಾಖೆಗಳ ರೂಪಕಗಳು
ಪ್ರಥಮ ಪ್ರಶಸ್ತಿ : ದಿ. ವಾಲಿ ಚೆನ್ನಪ್ಪ ಸ್ಮರಣಾರ್ಥ : ಬೆಳಗಾವಿ ಮಹಾನಗರ ಪಾಲಿಕೆ
ದ್ವಿತೀಯ ಪ್ರಶಸ್ತಿ : ದಿ. ಅಜರ್ುನ ಹಂಪಹೊಳಿ ಸ್ಮರಣಾರ್ಥ : ಬೆಳಗಾವಿ ನಗರಾಭಿವೃದ್ಧಿ ಪ್ರಾಧಿಕಾರ, ತೃತಿಯ ಪ್ರಶಸ್ತಿ : ದಿ. ಜಿ.ಕೆ. ಟಕ್ಕೇದ ಸ್ಮರಣಾರ್ಥ : ಕನರ್ಾಟಕ ನೀರು ಸರಬರಾಜು ಮಂಡಳಿ, ನಾಲ್ಕನೆಯ ಪ್ರಶಸ್ತಿ : ದಿ. ಸುನೀಲ ಮುತಗಿ ಸ್ಮರಣಾರ್ಥ : ವಾಯವ್ಯ ರಸ್ತೆ ಸಾರಿಗೆ ಸಂಸ್ಥೆ, ಐದನೆಯ ಪ್ರಶಸ್ತಿ : ದಿ. ದೀಪಕ ಅನಗೋಳಕರ ಸ್ಮರಣಾರ್ಥ : ಸಾರ್ವಜನಿಕ ಶಿಕ್ಷಣ ಇಲಾಖೆ.
ಜಾನಪದ ಕಲಾ ತಂಡಗಳ ವಿಭಾಗ
ಪ್ರಥಮ ಪ್ರಶಸ್ತಿ : ದಿ. ಅರವಿಂದ ಜೋಶಿ ಸ್ಮರಣಾರ್ಥ : ಶ್ರೀಮತಿ ಶಂಕ್ರೆವ್ವ ಮುಗಳಿ ಮಹಿಳಾ ಡೊಳ್ಳು ಕುಣಿತ ರಾಮದುರ್ಗ, ದ್ವಿತೀಯ ಪ್ರಶಸ್ತಿ : ದಿ. ಎಂ.ಎಸ್. ಟೋಪಣ್ಣವರ ಸ್ಮರಣಾರ್ಥ : ಶ್ರೀ ಶಿವಾನಂದ ಕಮತೆ ಕರಬಲ್ ಕುಣಿತ ಶಹಾಪುರ ತಾಲೂಕಾ ಅಥಣಿ, ತೃತಿಯ ಪ್ರಶಸ್ತಿ : ದಿ. ಹರಿ ದೇಶಪಾಂಡೆ ಸ್ಮರಣಾರ್ಥ : ಶ್ರೀ ಆದಿನಾಥ ಹಳ್ಳೂರ ಝಾಂಜ್ ಪಥಕ ಹಳ್ಳೂರು ತಾಲೂಕ ಗೋಕಾಕ, ನಾಲ್ಕನೆಯ ಪ್ರಶಸ್ತಿ : ದಿ. ಉದಯ ದೊಡಕನ್ನವರ ಸ್ಮರಣಾರ್ಥ : ಪರಶುರಾಮ ಸಂಗನ್ನವರ ನಾಸಿಕ ಡೋಲ್ ಚಿಂಚಲಿ ತಾಲೂಕ ರಾಯಬಾಗ, ಐದನೆಯ ಪ್ರಶಸ್ತಿ : ದಿ. ಗೋಪಾಲ ಘಂಟಿ ಸ್ಮರಣಾರ್ಥ : ಹೆಜ್ಜೆಮೇಳ ಮನಿಹಾಳ ತಾಲೂಕ ರಾಮದುರ್ಗ.
ಪ್ರಾಸ್ತಾವಿಕವಾಗಿ ಮಾತನಾಡಿದ ಕ್ರಿಯಾ ಸಮಿತಿಯ ಅಧ್ಯಕ್ಷ ಅಶೋಕ ಚಂದರಗಿ ಅವರು ಬೆಳಗಾವಿಗಾಗಿ ದುಡಿದು ಮಡಿದವರ ಸ್ಮರಣಾರ್ಥ ಮೊಟ್ಟ ಮೊದಲ ಬಾರಿಗೆ ಪ್ರಶಸ್ತಿಗಳನ್ನು ಪ್ರದಾನ ಮಾಡಲಾಗುತ್ತಿದ್ದು ದಿವಂಗತ ಹೋರಾಟಗಾರರಿಗೆ ನಾವು ಸಲ್ಲಿಸಿದ ಗೌರವವಾಗಿದೆಯೆಂದು ಹೇಳಿದರು.
ಆರಂಭದಲ್ಲಿ ನಾಡಗೀತೆಯನ್ನು ನುಡಿಸಲಾಯಿತು. ಪದ್ಮರಾಜ ವೈಜನ್ನವರ ಸ್ವಾಗತಿಸಿದರು. ಶಂಕರ ಬಾಗೇವಾಡಿಯವರು ಕಾರ್ಯಕ್ರಮ ನಿರೂಪಿಸಿ ಕೊನೆಗೆ ಆಭಾರ ಮನ್ನಿಸಿದರು.