ಸೋತವನ ಕೈ ಹಿಡಿದ ಗೆಳೆಯರ ಕಾರ್ಯ ಮಾದರಿ: ಪ್ರಭು ಸ್ವಾಮೀಜಿ
ಮಹಾಲಿಂಗಪುರ 21: ದಿಕ್ಕು ದೆಸೆಯಿಲ್ಲದೆ, ತಂದೆ- ತಾಯಿಗಳಿಲ್ಲದೇ ಏಕಾಂಗಿಯಾಗಿ ಕೇವಲ ಅಂಗವಿಕಲ ಮಾಶಾಸನದಲ್ಲಿಯೇ ಅರೆ ಹೊಟ್ಟೆ ತಿಂದು, ಮೈ ತುಂಬಾ ಬಟ್ಟೆ ಇಲ್ಲದೆ ಮುರುಕಲು ಗುಡಿಸಲಿನಲ್ಲಿ ಸಂಕಷ್ಟದ, ಯಾತನಾಮಯ ಬದುಕು ಸಾಗಿಸುತ್ತಿದ್ದ ಎರಡೂ ಕಾಲುಗಳಿಲ್ಲದ ಅಸಹಾಯಕ ಸಿದ್ದಪ್ಪ ಕಂಬಾರ ಎಂಬ ವಿಶಿಷ್ಟಚೇತನನಿಗೆ ಗೆಳೆಯರ ಬಳಗದ ಬಾಲ್ಯದ ಗೆಳೆಯರು ಸೇರಿ ಸಹಾಯ ಹಸ್ತ ಚಾಚಿ ತಮ್ಮಂತೆಯೇ ತಮ್ಮ ಸ್ನೇಹಿತನು ಸಹ ವಾಹನದಲ್ಲಿ ಓಡಾಡಲಿ ಎಂಬ ಮಹತ್ವಾಕಾಂಕ್ಷೆಯಿಂದ ಒಮ್ಮೆ ಚಾರ್ಜ್ ಮಾಡಿದರೆ 200 ಕಿಮೀ ಓಡಬಲ್ಲ ಸ್ವಯಂಚಾಲಿತ ತ್ರಿಚಕ್ರ ವಾಹನ ನೀಡಿ ಓದಾರ್ಯ ಮೆರೆದ ಮಾದರಿ ಕಾರ್ಯ ಸಮೀಪದ ಚಿಮ್ಮಡ ಗ್ರಾಮದಲ್ಲಿ ಜರುಗಿದೆ.
ಸ್ನೇಹಿತರೆಲ್ಲ ಸೇರಿ ತ್ರಿಚಕ್ರ ವಾಹನ ಖರೀದಿಸಿ ಸ್ಥಳೀಯ ವಿರಕ್ತಮಠದ ಪ್ರಭು ಸ್ವಾಮೀಜಿಯವರ ನೇತೃತ್ವದಲ್ಲಿ ಭಾನುವಾರ ಸಿದ್ದಪ್ಪ ಕಂಬಾರ ಅವರಿಗೆ ಹಸ್ತಾಂತರ ಮಾಡಿದರು. ಸ್ಥಳೀಯ ಗೆಳೆಯರ ಬಳಗದ ಪ್ರಭಾವಿ ವ್ಯಕ್ತಿಗಳಾದ ಶಂಕರ ಬಟಕುರ್ಕಿ, ನಿಂಗಪ್ಪ ಪೂಜಾರಿ, ಚನ್ನಪ್ಪ ತೇಲಿ, ರಾಜು ಬಗನಾಳ, ಸಿದ್ದು ಯಮಗರಣಿ, ಅವ್ವಣ್ಣ ಮುಗಳಖೋಡ, ಮನೋಜ ಹಟ್ಟಿ, ಬಸು ಬಳಗಾರ, ಸಿದ್ರಾಯಪ್ಪ ಹಳಗಂಳಿ, ಪ್ರಭು ಮುಧೋಳ, ಅಕ್ಷಯ ಕರಡಿ, ರುದ್ರ್ಪ ಹಳಮನಿ, ಶಂಕರ ನಿಡೋಣಿ, ಮಹಾಂತೇಶ ಯಂಕಂಚಿ, ಶೌಕತ್ ಮಿರ್ಜಿ,ಹನಮಂತ ಭಜಂತ್ರಿ ಇವರು ಗೆಳೆಯನಿಗೆ ಆಧಾರವಾಗಿ ಮಾದರಿಯಾಗಿದ್ದಾರೆ.