ಸಾಂಸ್ಕೃತಿಕ ವೈಧ್ಯವಕ್ಕೆ ಸಾಕ್ಷಿಯಾದ ಅಳ್ವಾಸ್ ನುಡಿಸಿರಿ
- ಎಲ್.ಎಸ್.ಶಾಸ್ತ್ರಿ, ಬೆಳಗಾವಿ
ಇ೦ತಹ ಒಂದು ಸಂಘಟನೆ ಡಾ. ಮೋಹನ ಆಳ್ವಾರಂಥವರಿಗೆ ಮಾತ್ರ ಸಾಧ್ಯವಾಗುವಂತಹದು. ಆಳ್ವಾಸ್ ನುಡಿಸಿರಿಗೆ ಸಮನಾದ ಸಾಂಸ್ಕೃತಿಕ ಹಬ್ಬ ಬೇರೊಂದಿಲ್ಲ ಎಂದರೆ ಅದು ಅತಿಶಯೋಕ್ತಿಯೇನಲ್ಲ. ದಿ. 16-17-18 ಈ ಮೂರುದಿನ ಮೂಡಬಿದರೆಯಲ್ಲಿ ಹದಿನೈದನೇ ವರ್ಷದ ನುಡಿಸಿರಿ ಕಾರ್ಯಕ್ರಮ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದಿಂದ ಅತ್ಯಂತ ಯಶಸ್ವಿಯಾಗಿ , ವಿಶಿಷ್ಟ ರೀತಿಯಲ್ಲಿ ನಡೆದು ಲಕ್ಷಾಂತರ ಜನರ ಮೆಚ್ಚುಗೆ ಪಡೆದುಕೊಂಡಿತು. ನಾವೆಲ್ಲ ಅನೇಕ ಸಾಹಿತ್ಯ ಸಮ್ಮೇಳನಗಳನ್ನು ನೋಡಿರುತ್ತೇವೆ. ಸರಕಾರದಿಂದ ಕೋಟಿಗಟ್ಟಲೆ ಅನುದಾನ ಪಡೆಯುವ ಆ ಸಮ್ಮೇಳನಗಳೆಲ್ಲ ಬಹುತೇಕ ಅಧ್ವಾನದಿಂದ ಕೂಡಿರುತ್ತವೆ. ಅವ್ಯವಸ್ಥೆಯೇ ಅವುಗಳ ಮುಖ್ಯ ಲಕ್ಷಣವಾಗಿರುತ್ತದೆ. ಆದರೆ ಆಳ್ವಾಸ್ ನುಡಿಸಿರಿ ಅತ್ಯಂತ ಅಚ್ಚುಕಟ್ಟಾಗಿ, ಶಿಸ್ತಿನಿಂದ ಮತ್ತು ಅಷ್ಟೇ ಸೊಗಸಾಗಿ ನಡೆಯುತ್ತದೆ. ಪ್ರತಿದಿನ 50 ಸಾವಿರದಷ್ಟು ಜನರು ನಾಡಿನ ಬೇರೆ ಬೇರೆಡೆಯಿಂದ ಬರುತ್ತಾರೆ. ಅವರಿಗೆಲ್ಲ ಉತ್ತಮ ವಸತಿ, ಊಟ, ಉಪಾಹಾರಗಳನ್ನು ಯಾವ ಗೊಂದಲವಿಲ್ಲದೇ ಒದಗಿಸಲಾಗುತ್ತದೆ. ಅಷ್ಟೊಂದು ಜನರಿದ್ದರೂ ಎಲ್ಲಿಯೂ ಹತ್ತು ನಿಮಿಷಕ್ಕಿಂತ ಹೆಚ್ಚು ಸಾಲಿನಲ್ಲಿ ನಿಲ್ಲುವ ಅಗತ್ಯವಿಲ್ಲದಂತೆ ನೋಡಿಕೊಳ್ಳಲಾಗುತ್ತದೆ.
ಇನ್ನೊಂದು ವೈಶಿಷ್ಟ್ಯವೆಂದರೆ ಇದು ಸಾಹಿತ್ಯ ಮತ್ತು ವಿವಿಧ ಕಲೆಗಳ ಪ್ರದರ್ಶನಕ್ಕೆ ವೇದಿಕೆಯಾಗಿರುವದು. ಆರೆಂಟು ಪ್ರತ್ಯೇಕ ವೇದಿಕೆಗಳಲ್ಲಿ ನಿರಂತರವಾಗಿ ಮೂರು ದಿನ ಕಾರ್ಯಕ್ರಮಗಳು ನಡೆಯುತ್ತಲೇಇರುತ್ತವೆ. ಯಾರಿಗೆ ಯಾವುದರಲ್ಲಿ ಹೆಚ್ಚು ಆಸಕ್ತಿಯಿದೆಯೋ ಅವರು ಅಂತಹ ವೇದಿಕೆಯನ್ನು ಆಯ್ಕೆ ಮಾಡಿಕೊಂಡು ಅಲ್ಲಿಗೆ ಹೋಗಿ ಕುಳಿತು ನೋಡಿ ಕೇಳಿ ಆನಂದಿಸಬಹುದು. ರತ್ನಾಕರವಣರ್ಿ ವೇದಿಕೆಯಲ್ಲಿ ಮುಖ್ಯ ಸಭಾ ಕಾರ್ಯಕ್ರಮಗಳಿದ್ದರೆ, ಇನ್ನುಳಿದವುಗಳಲ್ಲಿ ಬಗೆಯ ಕಲೆಗಳ ಪ್ರದರ್ಶನ ನಡೆದಿರುತ್ತದೆ. ಈ ಸಲ ರತ್ನಾಕರವಣರ್ಿ ವೇದಿಕೆಯಲ್ಲದೆ, ವಿ. ಎಸ್. ಆಚಾರ್ಯ ಸಭಾಭವನ , ಕೆ. ವಿ. ಸುಬ್ಬಣ್ಣ ರಂಗಮಂದಿರ, ಕು.ಶಿ. ಹರಿದಾಸ ಭಟ್ಟ ವೇದಿಕೆ, ಚಟ್ಟೋಪಾಧ್ಯಾಯ ವೇದಿಕೆ, ಬೋಳಾರ ವೇದಿಕೆಗಳಲ್ಲಿ ಈ ಕಾರ್ಯಕ್ರಮಗಳು ನಡೆದವು.
ಈ ಬಾರಿಯ ಸವರ್ಾಧ್ಯಕ್ಷತೆಯನ್ನು ಹಂಪೆ ಕನ್ನಡ ವಿ.ವಿ. ಕುಲಪತಿ ಡಾ. ಮಲ್ಲಿಕಾ ಘಂಟಿ ಅವರು ನಿರ್ವಹಿಸಿದರೆ, ಹಿರಿಯ ಇತಿಹಾಸ ಸಂಶೋಧಕ ಡಾ. ಷ. ಶೆಟ್ಟರ್ ಉತ್ಸವ ಉದ್ಘಾಟಿಸಿದರು. 2018 ರ ನುಡಿಸಿರಿಯ ಪರಿಕಲ್ಪನೆ" ಕನರ್ಾಟಕ ದರ್ಶನ- ಬಹುರೂಪಿ ಆಯಾಮಗಳು " ಎಂಬುದಾಗಿತ್ತು. ಎಲ್ಲ ಉಪನ್ಯಾಸಗಳನ್ನು ಆ ಪರಿಕಲ್ಪನೆಯ ಮಿತಿಯಲ್ಲಿ ಪ್ರಸ್ತುತ ಪಡಿಸಲಾಗುತ್ತದೆ.
ಕನ್ನಡ ನಾಡುನುಡಿ ಸಂಸ್ಕೃತಿ ಯ ರಾಷ್ಟ್ರೀಯ ಸಮ್ಮೇಳನವಾಗಿರುವ ನುಡಿಸಿರಿ ಯ ಕಾರ್ಯಕ್ರಮಗಳನ್ನು ಅದಕ್ಕೆ ತಕ್ಕಂತೆ ರೂಪಿಸಲಾಗುತ್ತದೆ. ಸಮಯ ಪಾಲನೆಗೆ ಹೆಚ್ಚಿನ ಮಹತ್ವ ನೀಡಲಾಗುತ್ತದೆ. ಎಲ್ಲರಿಗೂ ನಿದರ್ಿಷ್ಟ ಸಮಯಮಿತಿ ಇರುತ್ತದೆ. ಹೆಚ್ಚಿನವರು ಅದನ್ನು ಪಾಲಿಸುತ್ತಾರೆ.
ಮೊದಲ ದಿನ:
ಮೊದಲ ದಿನ ಬೆಳಿಗ್ಗೆ 8.30 ಕ್ಕೆ ಅದ್ಭುತವಾದ ಸಾಂಸ್ಕೃತಿಕ ಮೆರವಣಿಗೆಯಲ್ಲಿ ಐವತ್ತಕ್ಕೂ ಹೆಚ್ಚು ಕಲಾ ತಂಡಗಳು ವಾದನ ನೃತ್ಯಗಳೊಂದಿಗೆ ಆರಂಭವಾಗಿ 9. 25 ಕ್ಕೆ ಸಭಾಂಗಣ ತಲುಪಿತು. 9. 30 ರಿಂದ ಉದ್ಘಾಟನಾ ಸಮಾರಂಭ ಆರಂಭ. ನುಡಿಸಿರಿ ಅಧ್ಯಕ್ಷ ಮೋಹನ ಆಳ್ವಾರು ಪ್ರಾಸ್ತಾವಿಕ ಮಾತುಗಳಲ್ಲಿ ಈ ಉತ್ಸವದ ಉದ್ದೇಶವನ್ನು ಸ್ಪಷ್ಟಪಡಿಸಿದರು. ಉದ್ಘಾಟಕರಾದ ಡಾ. ಶೆಟ್ಟರ್ ಕನ್ನಡ ಭಾಷೆಯ ಉಗಮ , ಬೆಳವಣಿಗೆಗಳ ಕುರಿತು ಬಹಳ ಉಪಯುಕ್ತ ಮಾಹಿತಿಗಳನ್ನೊದಗಿಸುತ್ತ ಮೊದಲ ಶಾಸನವೆನ್ನಲಾಗುತ್ತಿರುವ ಹಲ್ಮಿಡಿ ಶಾಸನಕ್ಕಿಂತ ಮೊದಲೇ ಕನ್ನಡ ಭಾಷೆಯ ಅಸ್ತಿತ್ವವಿತ್ತು. ನಮ್ಮ ಇತಿಹಾಸ ಸಮರ್ಪಕವಾಗಿ ದಾಖಲಾಗಿಲ್ಲ. ಅನೇಕ ಬಗೆಯ ದೋಷಗಳಿಂದ ಕೂಡಿದ ಇತಿಹಾಸವನ್ನೇ ನಾವು ಕಣ್ಣು ಮುಚ್ಚಿ ಬೋಧಿಸುತ್ತ ಬಂದೆವು ಹೊರತು ಸ್ವತಂತ್ರವಾದ ನೆಲೆಯಲ್ಲಿ ನಾವು ಸಂಶೋಧನೆ ಮಾಡಲಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು. ಅವರ ಭಾಷಣ ಅತ್ಯಂತ ಪ್ರಬುದ್ಧ ಹಾಗೂ ಚಿಂತನೆಗೆ ತೊಡಗಿಸುವಂತಹದಾಗಿತ್ತು.
ಆದರೆ ನುಡಿಸಿರಿ ಯ ಅಧ್ಯಕ್ಷ ಸ್ಥಾನದಿಂದ ಮಾತನಾಡಿದ ಡಾ. ಮಲ್ಲಿಕಾ ಘಂಟಿಯವರು ಎಡಪಂಥೀಯ ಪ್ರಗತಿಪರರನ್ನು ಮೆಚ್ಚಿಸಲು ವ್ಯರ್ಥ ಪ್ರಯತ್ನ ಮಾಡಲು ಹೋಗಿ ತಾವೇ ಗೊಂದಲಕ್ಕೊಳಗಾದಂತೆನಿಸಿತು. ಅಲ್ಲಲ್ಲಿ ಕೆಲ ಅಂಶಗಳು ಚೆನ್ನಾಗಿದ್ದವು. ಅದರ ಬದಲು ಅವರು ನಾಡು ನುಡಿ ಕಲೆ ಸಂಸ್ಕೃತಿಗಳಿಗೆ ಸಂಬಂಧಿಸಿ ಪ್ರಬುದ್ಧ ವಿಚಾರ ಮಂಡನೆ ಮಾಡಬಹುದಿತ್ತು ಎಂಬುದು ಶ್ರೋತೃಗಳ ಅನಿಸಿಕೆಯಾಗಿತ್ತು.
ಇದೇ ಸಂದರ್ಭದಲ್ಲಿ ಆಳ್ವಾಸ್ ನುಡಿಸಿರಿ - 2017 ರ ನೆನಪಿನ ಸಂಚಿಕೆ ಬಿಡುಗಡೆ ಮಾಡಲಾಯಿತು.
ನಂತರ ನಡೆದ ಮೊದಲ ವಿಚಾರಗೋಷ್ಠಿಯಲ್ಲಿ ಕನರ್ಾಟಕ ದರ್ಶನ: ಸಾಹಿತ್ಯ ವಿಭಾಗದಲ್ಲಿ ವಿದ್ವಾಂಸರಾದ ಲಕ್ಷ್ಮೀಶ ತೋಳ್ಪಾಡಿ ಅವರು " ರಾಮಾಯಣ: ಸಮಕಾಲೀನ ನೆಲೆಗಳು " ಎಂಬ ವಿಷಯವಾಗಿ ಮಾತನಾಡಿ ಕರುಣಾರಸ ಪ್ರಧಾನವಾದ ರಾಮಾಯಣ ಕಾವ್ಯದ ಸಾರ್ವಕಾಲಿಕತೆಯನ್ನು ವಿವರಿಸಿದರು. ಪ್ರೊ. ಸತ್ಯಮಂಗಲ ಮಹಾದೇವ ಅವರು " ಕವಿಸಮಯ- ಕವಿನಮನ" ನಡೆಸಿಕೊಟ್ಟರು. ಅದಕ್ಕೆ ಕಲಾವಿದ ಮಾರ್ಕಂಡೇಯ ಅವರು ಚಿತ್ರ ಬಿಡಿಸಿದರು. ನಂತರ ಕನ್ನಡ ಪದಸೃಷ್ಟಿ ಕುರಿತು ಮಾತನಾಡಿದ ಪ್ರೊ. ಎಂ. ಕೃಷ್ಣೇಗೌಡ ಅವರು ಕನ್ನಡ ಶಬ್ದಗಳು ಹೆಚ್ಚಾಗಿಸೃಷ್ಟಿಯಾಗುವದು ಹಳ್ಳಿಗರಿಂದಲೇ ಎಂದರು. ರಘುನಾಥ ಚ. ಹ. ಅವರು ಇತ್ತೀಚಿನ ಮಹತ್ವದ ಪ್ರಕಟನೆಗಳ ಕುರಿತು, ಮಹೇಶ ಜೋಶಿ ಅವರು ಸಂತ ಶಿಶುನಾಳ ಷರೀಫರ ಕುರಿತು, ವಚನಗಳ ಕುರಿತು ಡಾ. ಕಟಗಿಹಳ್ಳಿಮಠ ಮಾತನಾಡಿದರು. ವಿ. ಉಮಾಕಾಂತ ಭಟ್ಟ ಅವರು " ಮಹಾಭಾರತ: ಸಮಕಾಲೀನ ನೆಲೆಗಳು" ಎಂಬ ವಿಷಯ ಪ್ರಸ್ತುತ ಪಡಿಸಿದರು. ಡಾ. ವೆಂಕಟಗಿರಿ ದಳವಾಯಿ ಕವಿಸಮಯ ಕವಿನಮನ ನಡೆಸಿಕೊಟ್ಟರು.
ಅಭಿವೃದ್ಧಿ ಎಂಬ ಕಿರು ನಾಟಕದ ನಂತರ ಚಿತ್ರನಟ ರಮೇಶ್ ಅರವಿಂದ " ನನ್ನ ಕಥೆ- ನಿಮ್ಮ ಜೊತೆ" ಯಲ್ಲಿ ತಮ್ಮ ಬದುಕು ಸಾಗಿ ಬಂದ ಬಗೆಯನ್ನು ಆಕರ್ಷಕ ರೀತಿಯಲ್ಲಿ ವಿವರಿಸಿದರು.
ಎರಡನೆಯ ದಿನ
ದಿ. 17 ರಂದು ಆನಂದ ಝಂಜರವಾಡರಿಂದ ಕವಿ ಸಮಯ, ಮಾಜಿ ಶಾಸಕ ವೈ. ಎಸ್. ವಿ. ದತ್ತ ಅವರಿಂದ " ಅಖಂಡ ಕನರ್ಾಟಕ" ಕುರಿತು ಭಾಷಣಗಳಾದವು. ದತ್ತ ಅವರು ಉತ್ತರ ಕನರ್ಾಟಕ ಭಾಗದ ಅಭಿವೃದ್ಧಿ ಕುರಿತು ನಿರ್ಲಕ್ಷ್ಯ ಮನೋಭಾವವನ್ನು ಖಂಡಿಸಿ ವಿಶೇಷ ಆಯೋಗ ರಚಿಸಲು ಸಲಹೆ ನೀಡಿದರು. ಡಾ. ಪ್ರಭುಶಂಕರ ಕುರಿತು ಡಾ. ಎನ್. ಎಸ್ ತಾರಾನಾಥರು ಸಂಸ್ಮರಣಾ ಭಾಷಣ ಮಾಡಿದರು. ತತ್ವಪದಗಳ ಬಗ್ಗೆ ಡಾ. ಬಸವರಾಜ ಸಬರದ, ಸೂಫಿ ಪರಂಪರೆ ಬಗ್ಗೆ ರಮಜಾನ್ ದಗರ್ಾ, ಕೀರ್ತನ ಪರಂಪರೆ ಬಗ್ಗೆ ಡಾ. ಮುರಳೀಧರ್ ಮಾತನಾಡಿದರು. ಡಾ. ಜಿ. ಎಂ. ಹೆಗಡೆ ಗಿರಡ್ಡಿ ಗೋವಿಂದರಾಜ ಸಂಸ್ಮರಣಾ ಭಾಷಣ ಮಾಡಿದರು. ಶಿಕ್ಷಣ ಮತ್ತು ಸಾಮರಸ್ಯ ಕುರಿತು ಬಿ. ಗಣಪತಿ, ಜೀವನ ಪದ್ಧತಿಯ ಆತಂಕದ ನೆಲೆಗಳು ಕುರಿತು ಡಾ. ನರಹಳ್ಳಿ ಬಾಲಸುಬ್ರಮಣ್ಯ ಮಾತನಾಡಿದರು. ನಂದಿನಿ ವಿಶ್ವನಾಥ್, ಕಾವೆಂ ಶ್ರೀನಿವಾಸ ಮೂತರ್ಿ, ಮೀನಾ ಮೈಸೂರ ಇವರು ಕವಿಸಮಯ ಕವಿನಮನ ಕಾರ್ಯಕ್ರಮ ನೀಡಿದರು. ಮಂಗಳಮುಖಿ ರೇವತಿ ತಮ್ಮ ಬದುಕಿನ ಕಥೆ ವ್ಯಥೆ ಹೇಳಿಕೊಂಡರು.
ಮೂರನೆಯ ದಿನ
ದಿ. 18 ರಂದು ಜನಪದ ಸಾಹಿತ್ಯ, ಮಹಿಳಾ ಬಿಕ್ಕಟ್ಟುಗಳು, ಸಾಮಾಜಿಕ ಜಾಲತಾಣ, ಜನಪದ ಆರಾಧನೆ, ಕಲಾಪರಂಪರೆ ಮೊದಲಾದ ವಿಷಯಗಳ ಕುರಿತು ಡಾ. ಪಿ. ಕೆ. ರಾಜಶೇಖರ, ಡಾ. ಎಂ. ಉಷಾ, ರೋಹಿತ ಚಕ್ರತೀರ್ಥ, ಡಾ. ಅಂಬಳಿಕೆ ಹಿರಿಯಣ್ಣ, ವಸಮತ ಕಜೆ, ಡಾ. ಡಿ. ಬಿ. ನಾಯಕ ಮಾತನಾಡಿದರೆ, ಮೈ. ಶ್ರೀ. ನಟರಾಜ, ವಿಕ್ರಮ ಹತ್ವಾರ ಕವಿಸಮಯ ಹಾಗೂ ಮಹಾಬಲಮೂತರ್ಿ ಕೊಡ್ಲಕೆರೆಯವರಿಂದ ಡಾ. ಸುಮತೀಂದ್ರ ನಾಡಿಗ ಸಂಸ್ಮರಣೆಗಳಾದವು.
ಡಾ. ಚಂದ್ರಶೇಖರ ಕಂಬಾರ ಅವರು ಗೌರವ ಸನ್ಮಾನ ನೆರವೇರಿಸಿ ಸಮಾಪನ ಭಾಷಣ ಮಾಡಿದರು.
ಮೂರೂ ದಿನ ವಿವಿಧ ವೇದಿಕೆಗಳಲ್ಲಿ ಯಕ್ಷಗಾನ, ನಾಟಕ, ಹಾಸ್ಯಪ್ರಹಸನಗಳು, ಜಾನಪದ ಕಲೆಗಳು, ಕೀರ್ತನೆ, ದಾಸವಾಣಿ, ಶಾಸ್ತ್ರೀಯ ಸಂಗೀತ, ನೃತ್ಯ, ವಾದನ ಮೊದಲಾದ ನೂರಕ್ಕೂ ಹೆಚ್ಚು ಕಾರ್ಯಕ್ರಮಗಳನ್ನು ನಾಡಿನ ಹಲವೆಡೆಯ ಕಲಾವಿದರಲ್ಲದೇ ಆಳ್ವಾಸ್ ವಿದ್ಯಾಥರ್ಿಗಳು ಪ್ರಸ್ತುತ ಪಡಿಸಿದರು .
ನುಡಿಸಿರಿಯಲ್ಲದೇ ವಿದ್ಯಾಥರ್ಿ ಸಿರಿ, ವಿಜ್ಞಾನ ಸಿರಿ, ಕೃಷಿ ಸಿರಿಗಳು, ಪುಷ್ಪ ಪ್ರದರ್ಶನ, ಕೃಷಿ ತೋಟಗಾರಿಕೆ ಪ್ರದರ್ಶನ ಗಳನ್ನು ಲಕ್ಷಾಂತರ ಜನ ನೋಡಿ ಆನಂದಿಸಿದರು.
ಒಟ್ಟಿನಲ್ಲಿ ಈ ಮೂರು ದಿನಗಳ ಉತ್ಸವ ನೂರು ದಿನಗಳ ಕಾಲವೂ ಮರೆಯದಂತೆ ಹೊಸ ಅನುಭವ ನೀಡಿದವು. ಇವನ್ನೆಲ್ಲ ಅಕ್ಷರಗಳಲ್ಲಿ ಸೆರೆ ಹಿಡಿಯುವದು ಕಷ್ಟ. ಅದನ್ನು ನೋಡಿಯೇ ಖುಷಿಪಡಬೇಕು. ಇಷ್ಟೊಂದು ದೊಡ್ಡ ಪ್ರಮಾಣದ ಸಮ್ಮೇಳನವನ್ನು ಅತ್ಯಂತ ವ್ಯವಸ್ಥಿತವಾಗಿ ನಡೆಸಿದ ಬಗೆ ಎಲ್ಲರಿಗೂ ಮಾದರಿಯಾಗಿದೆ. ಇದರ ರೂವಾರಿ ಡಾ. ಮೋಹನ ಆಳ್ವಾ ಮತ್ತು ಅವರ ಬಳಗದವರಿಗೆ ನಮೋನ್ನಮ:!