ವಿಮಾನ ಪತನ ಇಬ್ಬರು ಗಾಯಗೊಂಡಿರುವ ಘಟನೆ

ವಿಮಾನ ಪತನ ಇಬ್ಬರು ಗಾಯಗೊಂಡಿರುವ ಘಟನೆ

ಕೊಲ್ಹಾರ 08: ಸಮೀಪದ ಮಂಗಳೂರು ಗ್ರಾಮದಲ್ಲಿ ವಿಮಾನ ಪತನ ಇಬ್ಬರು ಗಾಯಗೊಂಡಿರುವ ಘಟನೆ ಭಾನುವಾರ ನಡೆದಿದೆ ರೆಡ್ ಬರ್ಡ್‌ ಏವಿಯೇಷನ್ ಸೇರಿದ ವಿಮಾನ ಕಲ್ಬುರ್ಗಿಯಿಂದ ಬೆಳಗಾವಿಗೆ ತೆರಳುತ್ತಿದ್ದ ಸಂದರ್ಭದಲ್ಲಿ ಮಧ್ಯಾಹ್ನ 3 ಗಂಟೆಯ ವೇಳೆಗೆ ಕೊಲ್ಹಾರ ಸಮೀಪದ ಮಂಗಳೂರು ಗ್ರಾಮದಲ್ಲಿ ರೈತ ಶಿವನಗೌಡ ಬಿರಾದಾರ ಅವರ ಜಮೀನಿನಲ್ಲಿ ವಿಮಾನ ಪತನಗೊಂಡಿದೆ. ಕ್ಯಾಪ್ಟನ್ ಕುನಾಲ್ ಮಲ್ಹೋತ್ರಾ ಮತ್ತು ತರಬೇತಿ ನಿರತ ಪೈಲಟ್ ಗೌತಮ್ ಶಂಕರ್ ಪಿ.ಆರ್‌. ವಿಮಾನದಿಂದ ಜಿಗಿದು ಪಾರಾಗಿದ್ದು ಆ ಇಬ್ಬರು ತೀವ್ರವಾಗಿ ಗಾಯಗೊಂಡಿರುವುದರಿಂದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಎಂದು ಬಬಲೇಶ್ವರ ಪಿಎಸ್‌ಐ ಬಸನಗೌಡ ಮೇಳಪ್ಪನವರ ಮಾಹಿತಿ ತಿಳಿಸಿದ್ದಾರೆ.  


ಸುದ್ದಿ ಓದಿ