ಉದ್ಯೋಗ ಸೃಷ್ಟಿ ಯೋಜನೆ ತರಬೇತಿಯ ಸಮಾರೋಪ ಸಮಾರಂಭ
ಲೋಕದರ್ಶನ ವರದಿ
ಬೆಳಗಾವಿ 07: ಸಿಂಡ್ ಗ್ರಾಮೀಣ ಸ್ವ ಉದ್ಯೋಗ ತರಬೇತಿ ಸಂಸ್ಥೆ ಬೆಳಗಾವಿ ಇವರ ಸಂಯುಕ್ತಾಶ್ರಯದಲ್ಲಿ ಪ್ರಧಾನ ಮಂತ್ರಿಗಳ ಉದ್ಯೋಗ ಸೃಷ್ಟಿ ಯೋಜನೆಯಡಿ ಆಯ್ಕೆಯಾದ ಪಲಾನುಭವಿಗಳಿಗೆ ಹಮ್ಮಿಕೊಂಡಿದ್ದ ಉದ್ಯಮ ಶೀಲತಾ ಅಭಿವೃದ್ಧಿ ತರಬೇತಿಯ ಸಮಾರೋಪ ಸಮಾರಂಭ ಇತ್ತಿಚಿಗೆ ಜರುಗಿತು.
ಕಾರ್ಯಕ್ರಮದ ಮುಖ್ಯ ಅತಿಥಿ ಸ್ಥಾನವನ್ನು ಅಲಂಕರಿಸಿದಂತಹ ಶಿ ಆರ್ ಟಿ ಕಾಂಬಳೆ ಮುಖ್ಯ ವ್ಯವಸ್ಥಾಪಕರು ಕ್ಷೇತ್ರಿಯ ಕಾಯರ್ಾಲಯ, ಸಿಂಡಿಕೇಟ್ ಬ್ಯಾಂಕ್ ಬೆಳಗಾವಿ ಇವರು ಮಾತನಾಡಿ ಒಬ್ಬ ವ್ಯಕ್ತಿ ಬಂಡವಾಳವನ್ನು ಹೂಡಿಕೆ ಮಾಡಲು ಸಾಮಥ್ರ್ಯವಿಲ್ಲದಿರುವ ಅರ್ಹ ವ್ಯಕ್ತಿ ತನ್ನ ಯೋಜನೆಯಿಂದ ಹಿಂದೆ ಸರಿಯಬಾರದೆಂಬ ಸದುದ್ದೇಶದಿಂದ ಪ್ರಧಾನ ಮಂತ್ರಿಗಳ ಉದ್ಯೋಗ ಸೃಷ್ಟಿ ಯೋಜನೆ ರೂಪಿಸಲಾಗಿದೆ ಇದರ ಮುಖ್ಯ ಉದ್ದೇಶ ನೀವು ಯಶಸ್ವಿ ಉದ್ಯಮಿಯಾಗಿ ಹತ್ತಾರು ಜನರಿಗೆ ಉದ್ಯೋಗವನ್ನು ನೀಡಿ, ಉದ್ಯೋಗಗಳು ಸೃಷ್ಟಿಯಾಗಬೇಕು ಜೋತೆಗೆ ಯೋಜನೆಯಲ್ಲಿ ಪಡೆದ ಹಣವನ್ನು ಉತ್ತಮ ರೀತಿಯಲ್ಲಿ ಬಳಸಿ, ಮತ್ತು ಸಾಲ ಪಡೆದ ನಂತರ ಸರಿಯಾದ ಸಮಯದಲ್ಲಿ ಕಂತುಗಳನ್ನು ಬ್ಯಾಂಕಿಗೆ ತುಂಬಬೇಕು, ಇಲ್ಲವಾದಲ್ಲಿ ನಿಮ್ಮ ಸಿಬಿಲ್ ರಿಪೋರ್ಟ ಸರಿಯಾಗಿ ಬರುವುದಿಲ್ಲ. ಇದರಿಂದ ಮುಂದಿನ ದಿನಗಳಲ್ಲಿ ಸಾಲವನ್ನು ಪಡೆಯಲು ತೊಂದರೆಯಾಗುತ್ತದೆ ಆದ್ದರಿಂದ ಸಾಲವನ್ನು ಸರಿಯಾದ ಸಮಯದಲ್ಲಿ ತುಂಬಿ ಬ್ಯಾಂಕಿನ ಜೋತೆ ಉತ್ತಮ ಬಾಂದವ್ಯವನ್ನು ಹೊಂದಿ, ದೇಶದ ಪ್ರಗತಿಗೇ ಕೈ ಜೋಡಿಸಿರಿ ಎಂದು ಹೇಳಿ ಶೀಬಿರಾಥರ್ಿಗಳನ್ನು ಹಾರೈಸಿ, ಹುರಿದುಂಬಿಸಿದರು.
ಸಂಸ್ಥೆಯ ನಿದರ್ೇಶಕರಾದಂತಹ ಲಕ್ಷ್ಮೀಕಾಂತ ಪಾಟೀಲ ರವರು ಮಾತನಾಡಿ ಇವತ್ತಿನ ದಿನದಲ್ಲಿ ನಿರುದ್ಯೋಗ ನಿವಾರಣೆಗೆ ಸ್ವ-ಉದ್ಯೋಗವೆ ಮದ್ದು ಅದಕ್ಕಾಗಿ ಸಕರ್ಾರ ಹಲವಾರು ಯೋಜನೆಗಳ ಮೂಲಕ ಸಾಲ-ಸೌಲಬ್ಯ ಒದಗಿಸುತ್ತಿದೆ ಅವುಗಳ ಸಂಪೂರ್ಣ ಉಪಯೋಗವನ್ನು ಪಡೆದುಕೊಂಡು ದೂಡ್ಡಮಟ್ಟದ ಉದ್ಯಮಿಗಳಾಗಿ ಉತ್ತಮ ಜೀವನ ನಡೆಸಿರಿ, ತರಬೇತಿಯಲ್ಲಿ ಪಡೆದ ಜ್ಞಾನವನ್ನು ಉತ್ತಮ ರೀತಿಯಲ್ಲಿ ಬಳಸಿಕೊಂಡು ನೀವೂ ಇನ್ನೂಬ್ಬರಿಗೆ ಉದ್ಯೋಗವನ್ನು ಕೊಡುವಷ್ಟರ ಮಟ್ಟಿಗೆ ಬೆಳೆಯಬೇಕು, ಇವತ್ತಿನ ದಿನ ಆಥರ್ಿಕ ಕ್ಷೇತ್ರದಲ್ಲಿ ಸ್ವ ಉದ್ಯೋಗ ವಲಯದ ಕೂಡುಗೆ ಮಹತ್ತರವಾಗಿದ್ದು ಇದಕ್ಕೆ ಎಲ್ಲಾ ಕಡೆಗಳಲ್ಲಿಯೂ ಮಹತ್ವ ಇದೆ ಅದರ ಕಡೆಗೆ ಹೆಚ್ಚಿನ ಮಟ್ಟದಲ್ಲಿ ಕಾರ್ಯ ಪ್ರವೃತ್ತರಾಗಿ ದೇಶದ ಅಭಿವೃದ್ದಿಗೆ ಕೈ-ಜೋಡಿಸಿರಿ ಎಂದು ತಿಳಿಹೇಳಿ, ಶಿಭಿರಾಥರ್ಿಗಳಿಗೆ ಹಾರೈಸಿದರು
ಕೊನೆಯದಾಗಿ ಶಿಬಿರದಲ್ಲಿ ಪಾಲ್ಗೊಂಡ ಶಿಭಿರಾಥರ್ಿಗಳು ತಮ್ಮ ತರಬೇತಿ ದಿನಗಳ ಅನುಭವ ಮತ್ತು ಅನಿಸಿಕೆಗಳನ್ನು ಅತೀ ಉತ್ಸಾಹದಿಂದ ಹಂಚಿಕೊಂಡರು ನಂತರ ಮುಖ್ಯ ಮುಖ್ಯ ಅತಿಥಿಗಳು ಶಿಬಿರಾಥರ್ಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಲಾಯಿತು. ಸಂಸ್ಥೆಯ ಸಿಬ್ಬಂದಿಯವರಾದ ರಾಜೇಶ್ವರಿ ದೇವಲಾಪೂರ ಸ್ವಾಗತಿಸಿದರು. ಸಂಸ್ಥೆಯ ಉಪನ್ಯಾಸಕರಾದ ಚಂದ್ರಕಾಂತ ಹಿರೇಮಠ ನಿರೂಪಿಸಿ, ವಂದಿಸಿದರು. ಸಂಸ್ಥೆಯ ಸಿಬ್ಬಂದಿಯವರಾದ ಬಸವರಾಜ ಕುಬಸದ ಮತ್ತು ಅಬ್ಬುಲ ರಜಾಕ್ ಉಪಸ್ಥಿತರಿದ್ದರು.