ನೀಲಕಂಠ ಮಹಾಶಿವಯೋಗೀಶ್ವರರ ಜಾತ್ರಾ ಮಹೋತ್ಸವ

ನೀಲಕಂಠ ಮಹಾಶಿವಯೋಗೀಶ್ವರರ ಜಾತ್ರಾ ಮಹೋತ್ಸವ

ಲೋಕದರ್ಶನ ವರದಿ

ಬೈಲಹೊಂಗಲ, 26 - ಪಟ್ಟಣದ ಶಾಖಾ ಮೂರುಸಾವಿರ ಮಠದಲ್ಲಿ ಫೆ.26ರಿಂದ ಮಾ.4 ರ ವರೆಗೆ ಅವಿರಳ ಪರಂಜ್ಯೋತಿ ನೀಲಕಂಠ ಮಹಾಶಿವಯೋಗೀಶ್ವರರ ಜಾತ್ರಾ ಮಹೋತ್ಸವ ಹಾಗೂ ರಾಷ್ಟ್ರೀಯ ರತ್ನ ಪ್ರಶಸ್ತಿ ವಿಭೂಷಿತರು ಹಾಗೂ ಶಿಕ್ಷಣ ಹರಿಕಾರರಾದ ಪರಮಪೂಜ್ಯ ಗಂಗಾಧರ ಮಹಾಸ್ವಾಮಿಗಳ 10ನೇ ಪುಣ್ಯಸ್ಮರಣೋತ್ಸವ, ಸಾಂಸ್ಕೃತಿಕ ಕಾರ್ಯಕ್ರಮಗಳು, ಮಹಾರಥೋತ್ಸವ, ಸತ್ಕಾರ ಸಮಾರಂಭ ಸೇರಿದಂತೆ ನಾನಾ ಕಾರ್ಯಕ್ರಮಗಳು ಅದ್ಧೂರಿಯಾಗಿ ನಡೆಯಲಿವೆ. 

       ಮೂರುಸಾವಿರ ಮಠದ ಪ್ರಭುನೀಲಕಂಠ ಸ್ವಾಮೀಜಿ ಎಲ್ಲ ಕಾರ್ಯಕ್ರಮಗಳ ನೇತೃತ್ವವಹಿಸುವರು. ಮಾ.2ರಂದು ಬೆಳಗ್ಗೆ 10ಕ್ಕೆ ಗಂಗಾಧರ ಮಹಾಸ್ವಾಮೀಜಿಯವರ 10ನೇ ಪುಣ್ಯಸ್ಮರಣೋತ್ಸವ ಮತ್ತು ಸಾಮೂಹಿಕ ವಿವಾಹಗಳು ಹಾಗೂ ಸುವರ್ಣ ಕಿರೀಟ ಧಾರಣ ಸಮಾರಂಭ ನಡೆಯಲಿದೆ. 

        ಮುರಗೋಡದ ನೀಲಕಂಠ ಮಹಾಸ್ವಾಮೀಜಿ ಸಾನಿಧ್ಯವಹಿಸುವರು. ಬೆಳಗಾವಿ ಕಾರಂಜಿಮಠದ ಗುರುಸಿದ್ಧ ಮಹಾಸ್ವಾಮೀಜಿ, ಮುನವಳ್ಳಿಯ ಮುರುಘೇಂದ್ರ ಮಹಾಸ್ವಾಮೀಜಿ ಅಧ್ಯಕ್ಷತೆವಹಿಸುವರು. ರುದ್ರಾಕ್ಷಿಮಠದ ಬಸವಲಿಂಗ ಸ್ವಾಮೀಜಿ, ಘೋಡಗೇರಿಯ ಕಾಶೀನಾಥ ಸ್ವಾಮೀಜಿ, ಕಟಕೋಳದ ಸಚ್ಚಿದಾನಂದ ಸ್ವಾಮೀಜಿ, ಹೊಸೂರಿನ ಗಂಗಾಧರ ಸ್ವಾಮೀಜಿ, ಚಿಮ್ಮಡದ ಪ್ರಭುಸ್ವಾಮೀಜಿ, ಸುಣಧೋಳಿಯ ಶಿವಾನಂದ ಸ್ವಾಮೀಜಿ, ಬೈಲಹೊಂಗಲದ ಮಡಿವಾಳೇಶ್ವರ ಸ್ವಾಮೀಜಿ ಸಮ್ಮುಖವಹಿಸುವರು.

     ಮಾ.2ರಂದು ಸಂಜೆ 6ಕ್ಕೆ ಮಹಿಳಾ ಗೋಷ್ಠಿ ಕಾರ್ಯಕ್ರಮ ನಡೆಯಲಿದೆ. ಹೊಸೂರ-ಬೈಲಹೊಂಗಲ ಮೂರುಸಾವಿರ ಮಠದ ಪ್ರಭುನೀಲಕಂಠ ಸ್ವಾಮೀಜಿ ಸಾನಿಧ್ಯವಹಿಸುವರು. ಹುಣಶ್ಯಾಳ ಪಿ.ಜಿ.ಕೈವಲ್ಯಾಶ್ರಮದ ನಿಜಗುಣ ದೇವರು ಅಧ್ಯಕ್ಷತೆ ವಹಿಸುವರು. 

      ಮಾ.3ರಂದು ಬೆಳಗ್ಗೆ 9ರಿಂದ ಮಧ್ಯಾಹ್ನ 3ರ ವರೆಗೆ ಉಚಿತ ವೈದ್ಯಕೀಯ ತಪಾಸಣಾ ಶಿಬಿರದಲ್ಲಿ ಪ್ರಭುನೀಲಕಂಠ ಮಹಾಸ್ವಾಮೀಜಿ ಸಾನಿಧ್ಯವಹಿಸುವರು. ಖ್ಯಾತ ನೇತ್ರ ತಜ್ಞ ಡಾ.ಎಂ.ಎಸ್.ಹೊತ್ತಗಿಮಠ ಕಾಯಕ್ರಮ ಉದ್ಘಾಟಿಸುವರು. 

      ಸಂಜೆ 7ಕ್ಕೆ ನಡೆಯಲಿರುವ ಪ್ರವಚನ ಮಂಗಲೋತ್ಸವದಲ್ಲಿ ಹುಬ್ಬಳ್ಳಿ-ಹಾನಗಲ್ ಮೂರುಸಾವಿರ ಮಠದ ಗುರುಸಿದ್ಧ ರಾಜಯೋಗೀಂದ್ರ ಮಹಾಸ್ವಾಮೀಜಿ ಸಾನಿಧ್ಯವಹಿಸುವರು. ರಾತ್ರಿ 8.30ಕ್ಕೆ ಮಹಾದೇವ ಸತ್ತಿಗೇರಿ ಅವರಿಂದ ನಗೆಹಬ್ಬ ಮತ್ತು ಮನರಂಜನಾ ಕಾರ್ಯಕ್ರಮಗಳು ನಡೆಯಲಿವೆ. 

ಮಾ.4ರಂದು ಬೆಳಗ್ಗೆ 6ಕ್ಕೆ ಅವಿರಳ ಪರಂಜ್ಯೋತಿ ನೀಲಕಂಠ ಮಹಾಶಿವಯೋಗಿಶ್ವರ ಹಾಗೂ ಗಂಗಾಧರ ಮಹಾಸ್ವಾಮೀಜಿಗಳ ಕತರ್ೃ ಗದ್ದುಗೆಗಳಿಗೆ ರುದ್ರಾಭಿಷೇಕ, ಸಹಸ್ರ ಬಿಲ್ವಾರ್ಚನೆ, ಪಲ್ಲಕ್ಕಿ ಉತ್ಸವ, ಅಯ್ಯಾಚಾರ ಮತ್ತು ಲಿಂಗದೀಕ್ಷೆ ಕಾರ್ಯಕ್ರಮ ನಡೆಯಲಿದೆ.

    ಮಾ.4ರಂದು ಸಂಜೆ 4ಕ್ಕೆ ಮೂರುಸಾವಿರ ಮಠದ ಅವಿರಳ ಪರಂಜ್ಯೋತಿ ನೀಲಕಂಠ ಮಹಾಶಿವಯೋಗಿಶ್ವರರ ಮಹಾರಥೋತ್ಸವ ವಿಜೃಂಭಣೆಯಿಂದ ನಡೆಯಲಿದೆ. ರುದ್ರಾಕ್ಷಿಮಠದ ಬಸವಲಿಂಗ ಮಹಾಸ್ವಾಮೀಜಿ, ಹೊಸೂರ ಶ್ರೀಗುರು ಮಡಿವಾಳೇಶ್ವರ ಮಠದ ಗಂಗಾಧರ ಮಹಾಸ್ವಾಮೀಜಿ ಸಾನಿಧ್ಯವಹಿಸುವರು. ಬೈಲಹೊಂಗಲ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಜನಾ ಮಂಡಳಿ, ಕರಡಿ ಮಜಲು, ಡೊಳ್ಳಿನ ಮಜಲುಗಳು ಪಾಲ್ಗೊಳ್ಳಲಿವೆ ಎಂದು ಹೊಸೂರ-ಬೈಲಹೊಂಗಲ ತಿಪ್ಪಿಮಠ (ಮೂರುಸಾವಿರ ಮಠ)ದ ಜಾತ್ರಾ ಮಹೋತ್ಸವ ಸಮಿತಿಯವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ. 

 

ಸುದ್ದಿ ಓದಿ