ನೂತನ ಮಹಾತ್ಮಾ ಗಾಂಧಿಜಿ ಪುತ್ಥಳಿ ಅನಾವರಣ
New Mahatma Gandhi statue unveiled
ಸಿಂದಗಿ 24: ಇದೇ 26 ರಂದು ಸಾಯಂಕಾಲ 5 ಗಂಟೆಗೆ ನೂತನ ಮಹಾತ್ಮಾ ಗಾಂಧಿಜಿ ಪುತ್ಥಳಿ ಅನಾವರಣ, ರಾಷ್ಟ್ರೀಯ ಲಾಂಛನ ಅಶೋಕ ಸ್ಥಂಭ ಲೋಕಾರೆ್ಣ, ನಗರಸಭೆ ಕಾರ್ಯಾಲಯ, ಸರಕಾರಿ ಆಸ್ಪತ್ರೆಗೆ ಹೈಟೆಕ್ ಅಂಬುಲೆನ್ಸ ಚಾಲನೆ, ಹಾಗೂ ಡಯಾಲಿಸಿಸ್ ಸೆಂಟರ್, ಪಿಡಿಯಾಟ್ರಿಕ್ ಐಸಿಯು ಇವುಗಳನ್ನು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಂ.ಬಿ.ಪಾಟೀಲರು ಉದ್ಘಾಟಿಸಲಿದ್ದಾರೆ ಕಾರಣ ಅಭಿಮಾನಿಗಳು, ಪಕ್ಷದ ಕಾರ್ಯಕರ್ತರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸುವಂತೆ ಶಾಸಕ ಅಶೋಕ ಮನಗೂಳಿ ಕರೆ ನೀಡಿದರು.
ಪಟ್ಟಣದ ಶಾಸಕರ ಕಾರ್ಯಾಲಯದಲ್ಲಿ ಹಮ್ಮಿಕೊಂಡ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗಾಂಧಿಜಿ ವೃತ್ತದಲ್ಲಿ ಆಯೋಜಿಸಲಾದ ಕಾರ್ಯಕ್ರಮದ ಸಾನಿಧ್ಯತೆಯನ್ನು ಸೊನ್ನ ದಾಸೋಹ ವಿರಕ್ತಮಠದ ಡಾ. ಶಿವಾನಂದ ಮಹಾಸ್ವಾಮಿಗಳು, ಧಮ್ಮ ವಿಹಾರದ ಸಂಘಪಾಲ ಬಂತೇಜಿ, ಹುಲಿಜಂತಿ ಸುಕ್ಷೇತ್ರದ ಪಟ್ಟದ ಪೂಜಾರಿ ಮಾಳಿಂಗರಾಯ ಮಹಾರಾಜರು ವಹಿಸಲಿದ್ದಾರೆ ಎಂದು ತಿಳಿಸಿದ ಅವರು, ಮಾಜಿ ಸಚಿವ ದಿ.ಎಂ.ಸಿ.ಮನಗೂಳಿ 5ನೇ ಪುಣ್ಯ ಸ್ಮರಣೆ ನಿಮಿತ್ಯ ಎಂ.ಸಿ.ಮನಗೂಳಿ ಪ್ರತಿಷ್ಠಾನದವತಿಯಿಂದ 27 ಮತ್ತು 28 ರಂದು ಭಗೀರಥ ಕಪ್ ಹೊನಲು ಬೆಳಕಿನ ವಾಲೀಬಾಲ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ.
ಇಲ್ಲಿ ಕರ್ನಾಟಕ ರಾಜ್ಯ ಪೊಲೀಸ್, ಎ.ಎಸ್.ಸಿ ಬೆಂಗಳೂರು, ಕರ್ನಾಟಕ ಪೋಸ್ಟಲ್, ಸ್ಪೋರ್ಟ್ಸ ಹಾಸ್ಟೇಲ್, ಎಸ್.ಡಿ.ಎಂ ಉಜಿರೆ, ಸೌತ್ ಸೆಂಟ್ರಲ್ ರೇಲ್ವೆ ಹುಬ್ಬಳ್ಳಿ ರಾಜ್ಯದ 6 ತಂಡಗಳು, ರಾಷ್ಟ್ರ ಮತ್ತು ಅಂತರರಾಷ್ಟ್ರೀಯ ಮಟ್ಟದ ಕ್ರೀಡಾಪಟುಗಳು ಹಾಗೂ ಏಕಲವ್ಯ ಪುರಷ್ಕೃತರು ಪಂಧ್ಯಾವಳಿಗಳಲ್ಲಿ ಬಾಗವಹಿಸಲಿದ್ದಾರೆ.
ಪ್ರಥಮ ರೂ 1ಲಕ್ಷ, ದ್ವೀತಿಯ ರೂ 75 ಸಾವಿರ, ತೃತೀಯ ರೂ.50 ಸಾವಿರ, 4ನೇ ಬಹುಮಾನ ರೂ 25 ಸಾವಿರ ಹಾಗೂ ಭಗೀರಥ ಕಪ್ ಇಡಲಾಗಿದೆ. ಕಾರಣ ಕ್ರೀಡಾಭಿಮಾನಿಗಳು ಕ್ರೀಡೆಗೆ ಪ್ರೋತ್ಸಾಹ ನೀಡಬೇಕು ಎಂದರು. ಪತ್ರಿಕಾಗೋಷ್ಠಿಯಲ್ಲಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಸುರೇಶ ಪೂಜಾರಿ, ವೈ.ಸಿ.ಮಯೂರ, ಪ್ರವೀಣ ಕಂಠಿಗೊಂಡ ಇದ್ದರು.
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ
ಹಳೆದಿಗ್ಗೆವಾಡಿ ಗ್ರಾಮದ ಮಹಾದೇವ ಗಂಗಾಯಿ ಅಜ್ಜ ವಿಧಿವಶ
ಆರೈಕೆಗಿದ್ದವನಿಂದ 1.02 ಕೋಟಿಯ 930 ಗ್ರಾಂ ಚಿನ್ನ ಕಳ್ಳತನ: ಇಬ್ಬರ ಬಂಧನ, 73.03 ಲಕ್ಷದ ಚಿನ್ನ ವಶಕ್ಕೆ 