28 ರಂದು ರಾಷ್ಟ್ರ ಮಟ್ಟದ ಸಂಶೋಧನಾ ಸಮ್ಮೇಳನ: ರಾಮದುರ್ಗ ಪ್ರೆಸ್ ಕ್ಲಬ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಪ್ರಾಚಾರ್ಯ ಎಸ್.ಎಸ್. ಕೊಡತೆ ಮಾಹಿತಿ
ರಾಮದುರ್ಗ 25: ಬಹುವಿಧದ ವಿಷಯಗಳಲ್ಲಿ ಸಂಶೋಧನೆಗಳು ಮತ್ತು ಹೊಸ ಆಯಾಮಗಳು ಎಂಬ ವಿಷಯ ಕುರಿತು ರಾಷ್ಟ್ರಮಟ್ಟದ ಒಂದು ದಿನದ ಸಮ್ಮೇಳನ ಹಾಗೂ ಕಾಯರ್ಾಗಾರವನ್ನು ಪಟ್ಟಣದ ಸಿ.ಎಸ್ ಬೆಂಬಳಗಿ ಮಹಾವಿದ್ಯಾಲಯದಲ್ಲಿ ಮಾರ್ಚ-28 ರಂದು ಮುಂಜಾನೆ 10 ಗಂಟೆಗೆ ಹಮ್ಮಿಕೊಳ್ಳಲಾಗಿದೆ ಎಂದು ಪ್ರಾಚಾರ್ಯ ಎಸ್.ಎಸ್. ಕೊಡತೆ ಹೇಳಿದರು.
ಪಟ್ಟಣದ ಪ್ರೆಸ್ ಕ್ಲಬ್ನಲ್ಲಿ ಪತ್ರಿಕಾಗೋಷ್ಠಿಯಲ್ಲಿ ಈ ವಿಷಯ ತಿಳಿಸಿದ ಅವರು, ಕಲಿಕೆಯ ಜೊತೆಗೆ ವಿದ್ಯಾಥರ್ಿಗಲ್ಲಿ ಸಂಶೋಧನಾ ಪ್ರವೃತ್ತಿ ಬೆಳೆಸುವ ನಿಟ್ಟಿನಲ್ಲಿ, ಭಾರತೀಯ ಶಿಕ್ಷಣ ವ್ಯವಸ್ಥೆಗೆ ಜಾಗತಿಕ ಮಟ್ಟದಲ್ಲಿ ಉನ್ನತೀಕರಿಸಲು, ಕೇವಲ ವಿಜ್ಞಾನ ಮತ್ತು ವೈಧ್ಯಕೀಯ ವಿಷಯಗಳಿಗೆ ಮಾತ್ರ ಸಂಶೋಧನೆ ಸಿಮೀತವಲ್ಲ. ಬೇರೆ ವಿಷಯಗಳಲ್ಲೂ ಸಂಶೋಧನೆ ಮಾಡಿ, ಹೊಸದನ್ನು ಕಂಡು ಹಿಡಿಯಲು ಸಾಧ್ಯವೆಂದು ಸಾಧಿಸಲು ವಿದ್ಯಾಥರ್ಿಗಳನ್ನು ಪ್ರೇರೆಪಿಸಲು ಮಾನವ ಸಂಪನ್ಮೂಲ ಅಭಿವೃದ್ಧಿ ಇಲಾಖೆ ಹಾಗೂ ಯುಜಿಸಿ ಪ್ರಾಯೋಜಕತ್ವದಲ್ಲಿ ಪದವಿ ಮಹಾವಿದ್ಯಾಲಯಗಳಲ್ಲಿ ರಾಷ್ಟ್ರ ಮಟ್ಟದ ಸಮ್ಮೇಳನಗಳನ್ನು ಮೇಲಿಂದ ಮೇಲೆ ಏರ್ಪಡಿಸಲಾಗುತ್ತಿದೆ ಎಂದರು.
ಕಾಯರ್ಾಗಾರದಲ್ಲಿ ಕನರ್ಾಟಕ ಸೇರಿದಂತೆ ವಿವಿಧ ರಾಜ್ಯಗಳಿಂದ ಸುಮಾರು 100-20 ಪ್ರಾಧ್ಯಾಪಕರು ಹಾಗೂ ಸಂಶೋಧನಾ ವಿದ್ಯಾಥರ್ಿಗಳು ತಮ್ಮ ಪ್ರಬಂಧ ಮಂಡನೆ ಮಾಡುವ ನಿರೀಕ್ಷೆ ಇದೆ. ವಿದ್ಯಾ ಪ್ರಸಾರಕ ಸಮಿತಿಯ ಅಧ್ಯಕ್ಷ ಪಿ.ಎಂ. ಜಗತಾಪ ಅಧ್ಯಕ್ಷತೆಯಲ್ಲಿ ಮಾರ್ಚ-28 ರಂದು ಮುಂಜಾನೆ 10 ಗಂಟೆಗೆ ನಡೆಯುವ ಸಮ್ಮೇಳನದ ಉದ್ಘಾಟನಾ ಸಮಾರಂಭವನ್ನು ಕೊಲ್ಹಾಪೂರ ಶಿವಾಜಿ ವಿಶ್ವಿದ್ಯಾಲಯದ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥ ಡಾ. ಪಿ.ಎಸ್. ಕಾಂಬಳೆ ಉದ್ಘಾಟಿಸಲಿದ್ದಾರೆ. ಕಾರ್ಯಕ್ರಮದಲ್ಲಿ ಪ್ರಾಚಾರ್ಯ ಎಸ್.ಎಸ್. ಕೊಡತೆ, ಎಸ್.ಪಿ. ಮುರಾರಿ, ವಿದ್ಯಾ ಪ್ರಸಾರಕ ಸಮಿತಿಯ ಉಪಾಧ್ಯಕ್ಷ ಎಸ್. ಬಿ. ಪಾಟೀಲ, ಮಹಾವಿದ್ಯಾಲಯದ ಗೌನರ್ಿಂಗ್ ಕಮಿಟಿಯ ಚೇರಮನ್ ವಿ.ಎಸ್. ಸೊಬರದ, ಸೇರಿದಂತೆ ವಿವಿಧ ವಿಶ್ವವಿದ್ಯಾಲಗಳ ಪ್ರಾಧ್ಯಾಪಕರು, ಸಂಶೋಧನಾ ವಿದ್ಯಾಥರ್ಿಗಳು ತಮ್ಮ ಪ್ರಬಂಧ ಮಂಡನೆ ಮಾಡಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪ್ರೊ. ಎಸ್.ಎಂ. ಸಕ್ರಿ, ಪ್ರೊ. ಪಿ.ಬಿ. ತೆಗ್ಗಿಹಳ್ಳಿ ಸೇರಿದಂತೆ ಇತರರಿದ್ದರು.