ಕಸಾಪ ಭವನದಲ್ಲಿ ನಾಡಹಬ್ಬ ಇತಿಹಾಸ ಪುನರುತ್ಥಾನಗೊಳ್ಳಬೇಕು: ಅರುಣ್ ಕುಮಾರ್

ಕಸಾಪ ಭವನದಲ್ಲಿ ನಾಡಹಬ್ಬ ಇತಿಹಾಸ ಪುನರುತ್ಥಾನಗೊಳ್ಳಬೇಕು: ಅರುಣ್ ಕುಮಾರ್

ರಾಣೆಬೆನ್ನೂರು 06:  ನಾಡು-ನುಡಿ ಸಾಹಿತ್ಯ-ಸಂಸ್ಕೃತಿ ವಿಜೃಂಭಿಸಬೇಕು, ಭವ್ಯ ಭಾರತದ ಮತ್ತು ನಾಡಿನ ಕಲೆ, ಮತ್ತು ಕಲಾವಿದರಿಗೆ ಕನ್ನಡ ಸಾಹಿತ್ಯ ಪರಿಷತ್ತು ನಿತ್ಯ ನಿರಂತರ ವೇದಿಕೆ ಕಲ್ಪಿಸಿಕೊಡಲು ಮುಂದಾಗಬೇಕು ಎಂದು ಶಾಸಕ ಅರುಣ್ ಕುಮಾರ್ ಪೂಜಾರ್ ಹೇಳಿದರು.

ವಾಗಿಸ್ ನಗರದ ಕನ್ನಡ ಸಾಹಿತ್ಯ ಪರಿಷತ್ ಭವನದಲ್ಲಿ ಆಯೋಜಿಸಲಾಗಿದ್ದ, 2022 ನೇ ಸಾಲಿನ ನಾಡಹಬ್ಬ ಮತ್ತು ಭವನದ ಮೇಲ್ಚಾವಣಿ ಉದ್ಘಾಟಿಸಿ, ಮಾತನಾಡಿದರು. ಕಸಾಪ ಭವನ ವಾಣಿಜ್ಯ ನಗರಕ್ಕೆ  ಕಳಸಪ್ರಾಯ ವಾಗಿದೆ, ಅದರ ಅಭಿವೃದ್ಧಿಗೆ ಪ್ರತಿಯೊಬ್ಬ ನಾಗರಿಕರು ಸಹಕರಿಸಬೇಕು. 

ಅವರು ತಾವು ಸಹ ಮೇಲಿಂದ ಮೇಲೆ ಎಲ್ಲ ರೀತಿಯ ಸಹಾಯ ಸಹಕಾರ ನೀಡುವುದಾಗಿ ಶಾಸಕರು ಭರವಸೆ ನೀಡಿದರು. ಕಸಾಪ ಅಧ್ಯಕ್ಷ ವೀರೇಶ ಜಂಬಿಗಿ  ಅವರು ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಸಮಾರಂಭಕ್ಕೂ ಮುನ್ನ ನಗರದ ಇತಿಹಾಸ ಪ್ರಸಿದ್ಧ ಚೌಕ ಮುಖಿ ದೇವಸ್ಥಾನದಿಂದ, ನಾಡದೇವಿ ಭುವನೇಶ್ವರಿಯ  ಭವ್ಯ ಮೆರವಣಿಗೆ ನಡೆಯಿತು. ಗೊರವರ ಕುಣಿತ, ವೀರಗಾಸೆ, ಡೊಳ್ಳು, ನಂದಿಕೋಲು ಎತ್ತಿನ ಬಂಡಿ ಮತ್ತಿತರೇ ಜನಪದ ಸಂಸ್ಕೃತಿ ಬಿಂಬಿತ ವಾದ್ಯಗಳು ವಿಶೇಷ ಮೆರಗು ನೀಡಿದ್ದವು. ಜೀವಮಾನ ಸಾಧನೆ ಮಾಡಿದ ಕ್ಷೇತ್ರ  ಸಾಧಕರಾದ, ವಾಸಪ್ಪ ಯ.ಕುಸುಗೂರ್, ಲಗಮಮ್ಮಾ. ಮ. ಕೇಶಾಪುರ, ಮಾಲತೇಶ್ಪ್ಪ ಗು. ಹಾವನೂರ್, ಅಶೋಕ ರಾವ್ ಪ್ರ. ಟಿಕಾರೆ, ಯಲ್ಲವ್ವ ಶಿ. ಮಣಕೂರ, ಶುಭಾಸಪ್ಪ ಯ. ಬನ್ನಿಕೋಡ, ಮಹೇಶಪ್ಪ ಬ. ಹಡಪದ, ಕಪತಪ್ಪ ಬ. ಸಾಲಮನಿ ಮತ್ತು ಕನಕಪ್ಪ ಹ. ಅಬ್ಬಿಗೇರಿ, ಪರಮೇಶಪ್ಪ ಮ. ಕೋಗಳೆ, ಶ್ರೀಮತಿ ಪುಟ್ಟಮ್ಮ ಗೂ. ಹಿರೇಬಿದರಿ ಸೇರಿದಂತೆ ಮತ್ತಿತರರನ್ನು ಸನ್ಮಾನಿಸಿ  ಗೌರವಿಸಲಾಯಿತು. ಮುಖ್ಯ ಅತಿಥಿಗಳಾಗಿದ್ದ, ಬಿಇಓ, ಎಂ. ಹೆಚ್. ಪಾಟೀಲ್ ಅವರು, ಕನ್ನಡ ಸಾಹಿತ್ಯ ಪರಿಷತ್ತು ಭವನ ರಾಜ್ಯದಲ್ಲಿಯೇ ಮೊಟ್ಟ ಮೊದಲದ್ದಾಗಿದೆ. ನಾಡಹಬ್ಬ ಪುನ :ಆರಂಭಗೊಂಡಿದ್ದು, ಸಾಹಿತಿಕ ಚಟುವಟಿಕೆಗಳು ನಿರಂತರವಾಗಿ  ನಡೆಯಲು, ಹೊಸ ಉತ್ಸಾಹ ಮೂಡಿದಂತಾಗಿದೆ ಎಂದರು. ಡಾ: ಬಸವರಾಜ ಕೇಲಗಾರ, ಜಟ್ಟಪ್ಪ ಕರೆಗೌಡ್ರ, ಭಾರತಿ ಅಳವಂಡಿ, ಬಿ.ಎಸ.ಸಣ್ಣಗೌಡ್ರ್, ಡಾ : ಕೆ.ಎಚ್. ಮುಕ್ಕಣ್ಣನವರ, ಮೊದಲಾದವರು ಪಾಲ್ಗೊಂಡಿದ್ದರು. ವರ್ತಕ ಎಂ.ಎಸ್. ಅರಕೇರಿ ಅಧ್ಯಕ್ಷತೆ ವಹಿಸಿದ್ದರು. ನಾಲ್ಕು ದಿವಸಗಳ ಕಾಲ ನಡೆದ ನಾಡಹಬ್ಬದಲ್ಲಿ ಪ್ರೊ, ಸಾಯಿ ಲತಾ ಮಡಿವಾಳರ, " ನಾಡಹಬ್ಬ ವೈಶಿಷ್ಟತೆ ", ಡಾ : ಕಾಂತೇಶ್ ಗೋಡಿಹಾಳ್," ದೇವಿ ಮಹಾತ್ಮೆ " ಮತ್ತು "ಮಕ್ಕಳ ಭವಿಷ್ಯ" ಮತ್ತು ಪಾಲಕರು, ಎಸ್.ಎಂ. ತುಕ್ಕಪ್ಪನವರ, ವಿಶೇಷ ಉಪನ್ಯಾಸ ನೀಡಿದರು. ಗಣ್ಯರಾದ ಡಿ. ಸಿ. ಕುಲಕಣರ್ಿ, ಆರ್. ಎಸ್. ನಂದಿಹಳ್ಳಿ, ಎಸ್ ಎಸ್ ಪಾಟೀಲ, ಕೆ. ವಿ.ಶ್ರೀನಿವಾಸ, ಎ.ಬಿ.ಪಾಟೀಲ್, ಎನ್.ಜಿ.ಕುಂದಾಪುರ, ಕೊಟ್ರೇಶಪ್ಪ ಎಮ್ಮೆ, ಹನುಮಂತಪ್ಪ ಕಬ್ಬಾರ, ಬಸವರಾಜ ಚಳಗೇರಿ, ಪ್ರಭಾಕರ ಶಿಗ್ಲಿ, ಎ.ಬಿ. ರತ್ನಮ್ಮ, ಬಿ.ಪಿ.ಶಿಡೇನೂರ, ಜಗದೀಶ್ ಮಳಿಮಠ, ಎಸ್ ಹೆಚ್ ಮೇಟಿ, ಆರ್. ಎಸ್. ನಂದಿಹಳ್ಳಿ, ಚಂದ್ರಶೇಖರ ಮಡಿವಾಳರ, ಎಸ್ ಹೆಚ್ ಮುದಿಗೌಡರ, ಮೊದಲಾದವರು ಉಪಸ್ಥಿತರಿದ್ದರು. ರವೀನಾ ಸಂಗಡಿಗರು, ನಿಟ್ಟೂರ್ ಮತ್ತು ಕನಕದಾಸ, ಕಸಾಪ ಮಹಿಳಾ ಸದಸ್ಯರು, ಶ್ರೀ ಶಾರದಾ ಭರತನಾಟ್ಯ ಶಾಲೆ ಸೇರಿ ಸಾಂಸ್ಕೃತಿಕ ಕಾರ್ಯಕ್ರಮಗಳು ನೆಡೆಸಿಕೊಟ್ಟರು 

ಸುದ್ದಿ ಓದಿ