ಮೇಘಾ ಮಾರ್ಕೆಟ್ ನಿರ್ಮಾಣ ಮತ್ತು ರಸ್ತೆ ಅಗಲೀಕರಣಕ್ಕೆ ಪುರಸಭೆ ; ಯಲ್ಲನ್ನಗೌಡ ಪಾಟೀಲ್
ಮೇಘಾ ಮಾರ್ಕೆಟ್ ನಿರ್ಮಾಣ ಮತ್ತು ರಸ್ತೆ ಅಗಲೀಕರಣಕ್ಕೆ ಪುರಸಭೆ ; ಯಲ್ಲನ್ನಗೌಡ ಪಾಟೀಲ್
ಮಹಾಲಿಂಗಪುರ 04 : ಮಹಾಲಿಂಗಪುರ ಪಟ್ಟಣ ಸೌಂದರ್ಯ ವರ್ಧನೆಗೆ ರಸ್ತೆ ಅಗಲೀಕರಣದಂತಹ ಅನೇಕ ಅಭಿವೃದ್ಧಿ ಕಾರ್ಯಗಳನ್ನು ಮುಲಾಜಿಲ್ಲದೆ ಕೈಗೊಳ್ಳಲಾಗುವುದು ಎಂದು ಪುರಸಭೆ ಅಧ್ಯಕ್ಷ ಯಲ್ಲನ್ನಗೌಡ ಪಾಟೀಲ್ ಹೇಳಿದರು.
ನವೆಂಬರ್ 4 ರಂದು ಸೋಮವಾರ ಪುರಸಭೆಯಲ್ಲಿ ನಡೆದ ಸಾಮಾನ್ಯ ಸಭೆ ಅಧ್ಯಕ್ಷತೆ ವಹಿಸಿ ಚರ್ಚಿಸತಕ್ಕ ವಿಷಯಗಳ ಬಗ್ಗೆ ಸದಸ್ಯರುಗಳಿಂದ ಪರ ವಿರೋಧ ಚರ್ಚೆ ನಡೆಸಿ ಮಾತನಾಡಿದ ಅವರು, ಅಭಿವೃದ್ಧಿ ಕೆಲಸದಲ್ಲಿ ದಯವಿಟ್ಟು ವಿನಾಕಾರಣ ತಕರಾರು ಮಾಡದೆ ಆಡಳಿತ ಮತ್ತು ವಿರೋಧ ಪಕ್ಷದ ಸದಸ್ಯರು ಸಹಕರಿಸಬೇಕು. ಇಲ್ಲವಾದಲ್ಲಿ ನಾವು ಕೂಡ ತಟಸ್ಥ ನಿಲುವು ತಾಳಿದರೆ ಊರಿನ ಅಭಿವೃದ್ಧಿ ಕುಂಠಿತಗೊಳ್ಳುತ್ತದೆ ಎಂದು ಸರ್ವ ಸದಸ್ಯರಿಗೆ ಸಹಕರಿಸಲು ಮನವಿ ಮಾಡಿದರು.ಈ ಸಭೆಯಲ್ಲಿ ಸೆಪ್ಟೆಂಬರ್/ ಅಕ್ಟೋಬರ್ ತಿಂಗಳ ಜಮಾ ಖರ್ಚು ಹಾಗೂ ವಿವಿಧ ಅಭಿವೃದ್ಧಿ ವಿಷಯಗಳನ್ನು ವ್ಯವಸ್ಥಾಪಕ ಎಸ್ ಎನ್. ಪಾಟೀಲ್ ಓದಿ ಹೇಳಿದರೆ ಕಿರಿಯ ಅಭಿಯಂತರ ಎಸ್ ಎಂ. ಕಲ್ಬುರ್ಗಿ ಸಭೆಗೆ ಮನವರಿಕೆ ಮಾಡಿಕೊಟ್ಟರು.ಚರ್ಚೆ ವಿಷಯಗಳು: ಕೆರೆ ಹತ್ತಿರದ ವಿಶಾಲ ಜಾಗೆಯಲ್ಲಿ ಮೇಘಾ ಮಾರ್ಕೆಟ್ ನಿರ್ಮಾಣ, ಚನ್ನಮ್ಮ ಸರ್ಕಲ್ ಮತ್ತು ಮಂಗಳವಾರ ಸಂತೆ ಪೇಟೆಯ ಆಸು ಪಾಸಿನ ಅನಧಿಕೃತ ಷಡ್ಗಳ ತೆರವು, ವಾಣಿಜ್ಯ ಮಳಿಗೆಗಳ ನಿರ್ಮಾಣ, ಶ್ರೀ ಬಸವೇಶ್ವರ ವೃತ್ತದಿಂದ ಶ್ರೀ ಗುರು ಮಹಾಲಿಂಗೇಶ್ವರ ದೇವಸ್ಥಾನ ವರೆಗೆ ರಸ್ತೆ ಅಗಲೀಕರಣಗಳ ಸಾಧಕ ಬಾಧಕಗಳ ಬಗ್ಗೆ ಬಿಸಿಬಿಸಿ ಚರ್ಚೆ ನಡೆದು ನಿಖರವಾಗಿ ಸರ್ವೆ ನಡೆಸಿ ವರದಿ ನೀಡುವಂತೆ ಭೂಮಾಪಕರಿಗೆ ಅಧ್ಯಕ್ಷ ಯಲ್ಲನ್ನಗೌಡ ತಿಳಿಸಿದರು.
ಸನ್ 2020-21 ರಿಂದ 22-23 ರ 15 ನೇ ಹಣಕಾಸಿನ ಉಳಿಕೆಗೆ ಕ್ರಿಯಾಯೋಜನೆ ಮತ್ತು ಎ???ಫ್ ಸಿ ಆಡಿ ಕಾಮಗಾರಿಗೆ ಮಂಜೂರಾದವುಗಳಿಗೆ ಬದಲಿ ಯೋಜನೆಗೆ ಚಿಂತನೆ, ಮುನ್ನಿರೀಕ್ಷಿಯ ದರಗಳಿಗೆ ಅನುಮೋದನೆ, ಆರೋಗ್ಯ ಮತ್ತು ತಾಂತ್ರಿಕ ಯೋಜನೆಗಳಿಗೆ ಟೆಂಡರ್ ದರ ಮಂಜೂರಾತಿಗಳಿಗೆ ಸಭೆ ಅನುಮೋದನೆ ನೀಡಿತು.ಉದ್ಯಮ ನಿಧಿ ಕಾಮಗಾರಿಗೆ ಕ್ರಿಯಾಯೋಜನೆ ಮಂಜೂರು, ಇತರೆ ವಿಷಯಗಳು ಡಚ್ ಕಾಲೋನಿ ವೃತ್ತಕ್ಕೆ ದಾಸಿಮಯ ನಾಮಕರಣ ಕುರಿತು ಮತ್ತು ಸಂಗೋಳ್ಳಿ ರಾಯಣ್ಣ, ಹೇಮರೆಡ್ಡಿ ಮಲ್ಲಮ್ಮ ಪುತ್ಥಳಿ ಪ್ರತಿಷ್ಠಾಪನೆ, ಸರ್ವಿಸ್ ರಸ್ತೆಗಳ ನಿರ್ಮಾಣ ಇನ್ನೂ ಇತ್ಯಾದಿ ವಿಷಯಗಳು ಚರ್ಚೆಯ ಮುನ್ನೆಲೆಗೆ ಬಂದವು.ಸಭಾ ವೇದಿಕೆಯಲ್ಲಿ ಪುರಸಭೆ ಅಧ್ಯಕ್ಷ ಯಲ್ಲನ್ನಗೌಡ ಪಾಟೀಲ್, ಉಪಾಧ್ಯಕ್ಷೆ ಶೀಲಾ ರಾಜೇಶ. ಭಾವಿಕಟ್ಟಿ, ಸ್ಥಾಯಿ ಸಮಿತಿ ಚೇರ್ಮನ್ ಅಬ್ದುಲರಜಾಕ ಭಾಗವಾನ ಮತ್ತು ಮುಖ್ಯಾಧಿಕಾರಿ ಈರಣ್ಣ ದಡ್ಡಿ ಇದ್ದರು. ಸದಸ್ಯರಾದ ಬಲ್ವಂತಗೌಡ ಪಾಟೀಲ್, ಮುಸ್ತಾಕ್ ಚಿಕ್ಕೋಡಿ, ಸಜನಸಾಬ ಪೆಂಡಾರಿ, ಬಸವರಾಜ ಬುರುಡ, ಭಾವನಾ ಪಾಟೀಲ್, ಚಾಂದನಿ ನಾಯಿಕ, ಶೇಖರ ಅಂಗಡಿ, ಸ್ನೇಹಲ್ ಅಂಗಡಿ, ಸವಿತಾ ಕೋಳಿಗುಡ್ಡ, ಲಕ್ಷ್ಮಿ ಮುದ್ದಾಪೂರ, ಸರಸ್ವತಿ ರಾಮೋಜಿ, ಪ್ರಹ್ಲಾದ್ ಸಣ್ಣಕ್ಕಿ, ರವಿ ಜವಳಗಿ, ಬಸವರಾಜ ಚಮಕೇರಿ, ಬಸವರಾಜ ಹಿಟ್ಟಿನಮಠ ಮತ್ತು ಪುರಸಭೆಯ ಆರ್ ವಾಯ್ ಸೊನ್ನದ, ಎಂ ಎಸ್ ಮುಗಳಖೋಡ ಇನ್ನಿತರರಿದ್ದರು.
ಮಹಾಲಿಂಗಪುರ ಸಮೀರ್ವಾಡಿ ರಸ್ತೆ ಪಕ್ಕದಲ್ಲಿ ದೇವ್ರಾಜ್ ಅರಸ್ ಯೋಜನೆಯಲ್ಲಿ ಅರ್ಹ ಫಲಾನುಭವಿಗಳಿಗೆ ನೇಕಾರ ಕಾಲೋನಿ ನಿರ್ಮಾಣವಾಗಬೇಕಿದೆ. ಅಲ್ಲಿ ಈಗಾಗಲೇ ಅರ್ಧಕ್ಕಿಂತ ಹೆಚ್ಚು ನೇಕಾರಿಕೆ ಮಾಡದೆ ಇರುವವರು ಶಾಸಕ ಸಿದ್ದು ಸವದಿ ಅಥವಾ ಇನ್ನಿತರ ಪ್ರಭಾವಿಗಳಿಗೆ ಹಣ ನೀಡಿ ನಿವೇಶನಗಳನ್ನು ಪಡೆದಿರಬಹುದೆಂಬ ಬಲವಾದ ಶಂಕೆ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಗ್ರಾಸವಾಗಿದೆ. ಮಾನ್ಯ ಪುರಸಭಾ ಅಧ್ಯಕ್ಷರು ಅವುಗಳನ್ನು ತಡೆ ಹಿಡಿದು ನಿಜ ನೇಕಾರರಿಗೆ ನೀಡಬೇಕು ಇಲ್ಲದೆ ಹೋದಲ್ಲಿ ಬಡ ನೇಕಾರರಿಗೆ ಘೋರ ಅನ್ಯಾಯವಾಗುತ್ತದೆ. ಪ್ರಹ್ಲಾದ್ ಸಣ್ಣಕ್ಕಿ, ಪುರಸಭೆ ಸದಸ್ಯರು.ಮಹಾಲಿಂಗಪೂರ.