ರೈತರ ಜಮೀನುಗಳಲ್ಲಿ ಮಂಗಗಳ ಕಾಟ
ಕೊಲ್ಹಾರ 21: ಪಟ್ಟಣದ ಸುತ್ತಮುತ್ತಲಿನ ರೈತರ ಜಮೀನುಗಳಲ್ಲಿ ಕಳೆದ ಹಲವು ತಿಂಗಳುಗಳಿಂದ ಮಂಗಗಳ ಕಾಟ ಹೆಚ್ಚಾಗಿದ್ದು, ರೈತರ ಜಮೀನುಗಳಲ್ಲಿ ಬೆಳೆದ ಬೆಳೆಗಳನ್ನು ನಾಶ ಮಾಡುತ್ತಿವೆ ಎಂದು ಅಧಿಕಾರಿಗಳು ವಿರುದ್ಧ ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ ರೈತರ ಸರ್ವೇ ನಂಬರ್ 958 ರಿಂದ 62 ರಲ್ಲಿ ಬರುವ ಸುತ್ತಮುತ್ತಲಿನ ರೈತರ ತೋಟದಲ್ಲಿನ ಮಂಗಗಳ ಕಾಟ ಹೆಚ್ಚಾಗಿದೆ ಇದರಿಂದ ರೈತರ ತೆಂಗು ಹಣ್ಣು ಹಂಪಲು, ಕಾಯಿಪಲ್ಲೆ ಬೆಳೆ ಸೇರಿದಂತೆ ಇತರ ಬೆಳೆಗಳ ಮೇಲೆ ದಾಳಿ ಮಾಡಿ ಅಪಾರ ಪ್ರಮಾಣದಲ್ಲಿ ಹಾನಿ ಮಾಡುತ್ತಿರುವುದರಿಂದ ರೆ?ತರು ಸಂಕಷ್ಟಕ್ಕೆ ಸಿಲುಕಿರುವುದಲ್ಲದೆ ಜನರಲ್ಲಿ ಭಯದ ವಾತಾವರಣ ಸೃಷ್ಟಿಸಿದೆ ಸುಮಾರು 60 ರಿಂದ 70 ಮಂಗಗಳು ಇಲ್ಲಿ ನಿತ್ಯ ರೈತರ ಜಮೀನುಗಳಲ್ಲಿ ದಾಂಧಲೆ ಮಾಡುತ್ತಿವೆ ಅವುಗಳನ್ನು ಓಡಿಸಲು ಪ್ರಯತ್ನಿಸಿದರೆ ಮೈ ಮೇಲೆ ಎಗರುತ್ತವೆ ಇದರಿಂದ ಮಹಿಳೆಯರು, ಮಕ್ಕಳು, ವೃದ್ಧರು ಹಾಗೂ ಸಾರ್ವಜನಿಕರು ಭಯಭೀತರಾಗಿದ್ದು ಸಾರ್ವಜನಿಕರು ಮನೆಯಿಂದ ಹೊರಬರಲು ಹೆದರುತ್ತಿದ್ದಾರೆ. ಕೂಡಲೇ ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳಿಯ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿಗಳು ಇತ್ತ ಗಮನ ಹರಿಸಿ ಮಂಗಗಳನ್ನು ಹಿಡಿದು ಕಾಡಿಗೆ ಬಿಡಬೇಕು ಇರದೆ ಹೋದರೆ ಮುಂದೆ ಆಗುವ ಅನಾಹುತಗಳಿಗೆ ಅಧಿಕಾರಿಗಳೆ ನೇರ ಹೊಣೆ ಹೊರಬೇಕಾಗುತ್ತದೆ ಎಂದು ಕೊಲ್ಹಾರ ಸುತ್ತಮುತ್ತಲಿನ ರೈತರು ಎಚ್ಚರಿಕೆ ನೀಡಿದ್ದಾರೆ