ಮಾತೃ ಹೃದಯಿ ಮಲ್ಲಿಕಾರ್ಜುನ ಶ್ರೀ: ಮಹಾದೇವ ದೇವರು
ಲೋಕದರ್ಶನ ವರದಿ
ಕುಕನೂರ 06: ಮುಂಡರಗಿಯ ಅನ್ನದಾನೀಶ್ವರ ಮಠದ ಉತ್ತಾಧಿಕಾರಿ ಮನಿಪ್ರ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು ನೊಂದವರ ಬೆಂದವರ ಕಣ್ಣೀರುವರಿಸುವ ಕಾರ್ಯ ಮಾಡುತ್ತೀರುವ ಮಾತೃ ಹೃದಯಿ ಶ್ರೀಗಳು ಎಂದು ಪೂಜ್ಯ ಮಹಾದೇವ ದೇವರು ಹೇಳಿದರು.
ಅವರು ಕುಕನೂರ ಪಟ್ಟಣದ ಅನ್ನದಾನೀಶ್ವರ ಮಠದಲ್ಲಿ ಮುಂಡರಗಿಯ ಅನ್ನದಾನೀಶ್ವರ ಮಠದ ಉತ್ತಾಧಿಕಾರಿ ಮನಿಪ್ರ ಡಾ. ಮಲ್ಲಿಕಾರ್ಜುನ ಮಹಾಸ್ವಾಮಿಗಳು 38ನೇ ಹುಟ್ಟುಹಬ್ಬ ಮತ್ತು ವಿಶ್ವ ಸ್ತನಪಾನ ಸಪ್ತಾಹ ಅಂಗವಾಗಿ ಕೊಪ್ಪಳದ ಸೆಕ್ಯೂರ ಆಸ್ಪತ್ರೆ ವತಿಯಿಂದ ಹಾಗೂ ಕುಕನೂರ ಪಪಂ, ಸಂಘ ಸಂಸ್ಥೆಗಳ ಸಹಯೋಗದಲ್ಲಿ ನಡೆದ ಉಚಿತ ಆರೋಗ್ಯ ಶಿಬಿರದ ನೇತೃತ್ವ ವಹಿಸಿ ಮಾತನಾಡುತ್ತಾ ಮಲ್ಲಿಕಾರ್ಜುನ ಶ್ರೀಗಳು ಬಸವಾದಿ ಶಿವಶರಣರ ಸಂದೇಶಗಳನ್ನ ತಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಮುಂಡರಗಿ ಮತ್ತು ಘಟಪ್ರಭ ಮಠಗಳ ಅಭಿವೃದ್ದಿ ಕಾರ್ಯಗಳ ಜೊತೆಗೆ ಬಡವರ ಮಕ್ಕಳ ಕಲ್ಯಾಣಕ್ಕೆ ಹೆಚ್ಚಿನ ಮಹತ್ವ ನೀಡಿದ ಶಿಕ್ಷಣ ಪ್ರೇಮಿಗಳು ಪೂಜ್ಯರು ಎಂದರು.
ನಂತರ ಮಾತನಾಡಿದ ಕೊಪ್ಪಳ ಸೆಕ್ಯೂರ ಆಸ್ಪತ್ರೆಯ ವ್ಯೆದ್ಯಾಧಿಕಾರಿಗಳಾದ ಡಾ. ಸಾಬಣ್ಣ ನಾಯಕ ಸಾಮಾನ್ಯ ಜನರಿಗೆ ಅನೂಕೂಲವಾಗುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮಗಳ ಪ್ರಯೋಜನವನ್ನ ಜನರು ಪಡೆದುಕೊಂಡು ಆರೋಗ್ಯವಂತರಾಗಿ ಬದುಕುಬೇಕು ಎಂದು ಕರೆ ನೀಡಿದರು.
ಡಾ. ಶಹಜಾದ ಬೇಗಂ ಮಾತನಾಡಿ ಸ್ತನ್ಯಪಾನ (ಇದು ಅಮ್ಮಂದಿರು ಸ್ತನದಿಂದ ಶಿಶುಗಳು ಮತ್ತು ಚಿಕ್ಕ ಮಕ್ಕಳಿಗೆ ಹಾಲನ್ನು ಉಣಿಸುವದು. ಸ್ತನ್ಯಪಾನವು ಮಗುವಿನ ಜೀವನದಲ್ಲಿ ಜನಿಸಿದ ಮೊದಲ ಗಂಟೆಯೊಳಗೆ ಪ್ರಾರಂಭವಾಗುತ್ತದೆ. ಜೀವನದ ಮೊದಲ ಕೆಲವು ವಾರಗಳಲ್ಲಿ ಶಿಶುಗಳು ಸುಮಾರು ಎರಡು ಅಥವಾ ಮೂರು ಗಂಟೆಗಳ ಕಾಲ ಸ್ತನ್ಯಪಾನ ಮಾಡಬಹುದು ತಾಯಂದಿರು ಮಗುವಿಗೆ ಸ್ತನ್ಯಪಾನವು ಹಲವಾರು ಪ್ರಯೋಜನಗಳನ್ನು ಹೊಂದಿದೆ ಎಂದರು.
ಈ ಸಂದರ್ಭದಲ್ಲಿ ಮ್ಯಾಳಿ ಈರಪ್ಪ, ಜಗದೀಶಯ್ಯ ಕಳ್ಳಿಮಠ, ಡಾ ಭಾಗ್ಯ ಬಿಜ್ಜರಿಗಿ, ಡಾ ಶೀಲಾ ಅರಕೇರಿ, ಚನ್ನಬಸವನಗೌಡ, ಸಿದ್ದಮ್ಮ ವಿದ್ಯಾಶ್ರೀ, ಸಂಗಮೇಶ ಕಲ್ಮಠ, ಶಿವಲಿಂಗಯ್ಯ ಶಿರೂಮಠ, ಪ್ರಭು ಶಿವಶಿಂಪರ, ನೀಲಕಂಠಯ್ಯ ಕಾಶೀಮಠ, ಬಾಬಣ್ಣ ಕಲ್ಮನಿ ಮತ್ತು ಇತರರು ಇದ್ದರು