ರಬಾಕಾವಿಬನಹಟ್ಟಿ

ವಿವಿಧ ಬೇಡಿಕೆ ಈಡೇರಿಸಲು ಆಟೋ ಚಾಲಕರ ಬೃಹತ್ ಪ್ರತಿಭಟನೆ

ವಿವಿಧ ಬೇಡಿಕೆ ಈಡೇರಿಸಲು ಆಟೋ ಚಾಲಕರ ಬೃಹತ್ ಪ್ರತಿಭಟನೆ

ರಾಜ್ಯ ಸರ್ಕಾರದ ವಿರುದ್ಧ ಘೋಷಣೆ ಕೂಗುತ್ತಾ ಪ್ರತಿಭಟನೆ ಮಾಡಿದ ಆಟೋ ಚಾಲಕರು.

ಸೈದಾಪುರ-ಸಮೀರವಾಡಿ : ಬಾಗಲಕೋಟೆ ಜಿಲ್ಲೆ ರಬಕವಿ ಬನಹಟ್ಟಿ ತಾಲೂಕ್ ಸೈದಾಪುರ-ಸಮೀರವಾಡಿ ಶಹರ್ ಮತ್ತು ಗ್ರಾಮೀಣ ಆಟೊ ಚಾಲಕರು ಹಾಗೂ ಮಾಲೀಕರ ಹೋರಾಟ ಸಮಿತಿ.ರಾಷ್ಟ್ರೀಯ ಆಟೋರಿಕ್ಷ ಟ್ಯಾಕ್ಸಿ ಟ್ರಾನ್ಸ್ಪೋರ್ಟ್  ಫೆಡರೇಶನ್ ಸಂಯೋಗದೊಂದಿಗೆ ನಗರದಲ್ಲಿ  ಒಗ್ಗೂಡಿ ಪ್ರಮುಖ ರಸ್ತೆಗಳ ಮುಖಾಂತರ ರಾಜ್ಯ ಸರ್ಕಾರದ ವಿರುದ್ಧ ದಿಕ್ಕಾರ ಕೂಗುತ್ತಾ ಪಾದಯಾತ್ರೆ ಮಾಡುವ ಮೂಲಕ ಮಿನಿ ವಿಧಾನಸೌಧಗೆ ತೆರಳಿ ತಹಶೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.ಜೂನ್ 11 ರಂದು ರಾಜ್ಯ ಸರ್ಕಾರ ಶಕ್ತಿ ಯೋಜನೆ ಜಾರಿ ಮಾಡಿದ ಹಿನ್ನೆಲೆಯಲ್ಲಿ ಆಟೋ ಚಾಲಕರ ಹೊಟ್ಟೆಯ ಮೇಲೆ ಹೊಡೆದಂತಾಗಿದೆ ಈ ಯೋಜನೆಯಿಂದ ಆಟೋ ಚಾಲಕರು ಜೀವನ ನಡೆಸುವುದು ಬಹಳ ಕಷ್ಟಕರವಾಗಿದೆ.ರಾಜ್ಯ ಸರ್ಕಾರವು ಶಕ್ತಿ ಯೋಜನೆಯನ್ನು ಕೈಬಿಡಬೇಕು ಇಲ್ಲವಾದರೆ ರಾಜ್ಯದ ಆಟೋ ಚಾಲಕರ ಹಾಗೂ ಆಟೋಮಾಲಿಕರ ಮಕ್ಕಳಿಗೆ ಎಲ್ ಕೆ ಜಿ ಯಿಂದ ಡಿಗ್ರಿ ಯವರಿಗೆ ಉಚಿತ ಶಿಕ್ಷಣ ನೀಡಬೇಕು.*ಆಟೋ ಚಾಲಕರಿಗೆ ಪ್ರತಿ ವರ್ಷ 10 ಲಕ್ಷ ರೂಪಾಯಿ ಅಪಘಾತ ವಿಮೆ ಹಾಗೂ ಆಟೋ ಚಾಲಕರು ಅಪಘಾತದಲ್ಲಿ ಅಂಗಾಂಗಗಳನ್ನು ಕಳೆದುಕೊಂಡರೆ 5 ಲಕ್ಷ ವರೆಗೆ ಅಪಘಾತ ವಿಮೆ ನೀಡಬೇಕು.*ಆಟೋ ಚಾಲಕರು ಜೀವನ ನಡೆಸಲು ಬಹಳ ಕಷ್ಟಕರವಾಗಿದೆ ಆದಕಾರಣ ಪ್ರತಿ ತಿಂಗಳು ಆಟೋ ಚಾಲಕರಿಗೆ ಹತ್ತರಿಂದ ಹದಿನೈದು ಸಾವಿರ ರೂಪಾಯಿ ಸಹಾಯಧನ ನೀಡಬೇಕು.*ಆಟೋ ಚಾಲಕರಿಗೆ ಒಳ್ಳೆಯ ಆಟೋ ಸ್ಟ್ಯಾಂಡ್ ನಿರ್ಮಾಣ ಮಾಡಿಕೊಡಬೇಕು*.

*ಪ್ರತಿ ತಾಲೂಕು ಹಾಗೂ ಜಿಲ್ಲೆಗಳಲ್ಲಿ ಚಾಲಕರಿಗೆ ಪ್ರತ್ಯೇಕ ಆಟೋ ಕಾಲೋನಿ ನಿಮರ್ಿಸಿ ಕೊಡಬೇಕು.*ಆಟೋ ಚಾಲಕರಿಗೆ 60 ವರ್ಷಗಳ ನಂತರ ಮಾಶಾಸನ ರೂಪದಲ್ಲಿ ಪ್ರತಿ ತಿಂಗಳು 10 ಸಾವಿರ ರೂಪಾಯಿಗಳನ್ನು ನೀಡಬೇಕು.*ಆಟೋರಿಕ್ಷಾ ರಸ್ತೆಯ ಪಮರ್ಿಟ್ 16 ಕಿಲೋಮೀಟರ್ ದಿಂದ 100 ಕಿಲೋಮೀಟರ್ ವರೆಗೆ ವಿಸ್ತರಿಸಬೇಕು*.*ಆಟೋರಿಕ್ಷಾ ಮೇಲಿನ ವಿಮೆ ಮತ್ತು ಅಧಿಕ ತೆರಿಗೆಗಳನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರ ಕೈಬಿಡಬೇಕು*.ಈ ಎಲ್ಲ ಬೇಡಿಕೆಗಳನ್ನು ಆದಷ್ಟು ಬೇಗನೆ ಈಡೇರಿಸಬೇಕು ಇಲ್ಲವಾದರೆ ಮುಂಬರುವ ದಿನಗಳಲ್ಲಿ ಕರ್ನಾಟಕದಾದ್ಯಂತ ಉಗ್ರವಾದ ಹೋರಾಟ ಮಾಡುತ್ತೇವೆ ಎಂದು ಆಟೋ ಮುಖಂಡರು ಮಾಧ್ಯಮದ ಮುಂದೆ ಮಾತನಾಡಿದರು. ಗಜಾನನ ಕಾಪೆ,ಸಲೀಂ ಖಲಿಪಾ,ಚಿದಾನಂದ ಸವದತ್ತಿ,ಮೊಹಮ್ಮದ್ ಹುಸೇನ್ ಲೇಂಗ್ರೆ.ಸದ್ದಾಮ್ ಹಿಪ್ಪರಗಿ,ಸದಾನಂದ ಬಾಡಗಿ.ರಾಜಸಾಬ್ ಅತ್ತಾರ.ಅಂಜು ಹಾದಿಮನಿ.ಹಾಗೂ ಆಟೋ ಚಾಲಕರು ಮತ್ತು ಮಾಲೀಕರು ಮತ್ತಿತರರು ಉಪಸ್ಥಿತರಿದ್ದರು 

ಸುದ್ದಿ ಓದಿ