ಮುಖ್ಯ ಕಾಲುವೆ ಒಡೆದು ಅಪಾರ ಬೆಳೆ ಹಾನಿ: ಸ್ಥಳಕ್ಕೆ ಎಸ್ ಕೆ ಬೆಳ್ಳುಬ್ಬಿ ಭೇಟಿ
ಕೊಲ್ಹಾರ 11: ತಾಲೂಕಿನ ಹಳ್ಳದಗೆಣ್ಣೂರು ಗ್ರಾಮದ ಪಶ್ಚಿಮದ ಮುಖ್ಯ ಕಾಲುವೆ ಫೆ 9 ರಂದು ರಾತ್ರಿ 11 ಗಂಟೆಗೆ ಒಡೆದು ಅಪಾರ ಪ್ರಮಾಣದ ರೈತರ ಬೆಳೆಗಳು ಹಾನಿಯಾಗಿದ್ದು, ಸ್ಥಳಕ್ಕೆ ಮಂಗಳವಾರ ಮಾಜಿ ಸಚಿವ ಎಸ್ ಕೆ ಬೆಳ್ಳುಬ್ಬಿ ಭೇಟಿ ನೀಡಿ ಮಾಹಿತಿ ಪಡೆದುಕೊಂಡರು. ನಂತರ ಮಾತನಾಡಿದ ಅವರು ರೈತರ ಇರುಳಿ ಮತ್ತು ಕಬ್ಬು ಗೋದಿ ಬಾಳೆ ಬೆಳೆಗಳು ಅಪಾರ ಪ್ರಮಾಣದ ಹಾಳಾಗಿದ್ದು ಕೂಡಲೇ ಇದಕ್ಕೆ ಸರಕಾರ ಪರಿಹಾರ ಕಲ್ಪಿಸಬೇಕು ಹಾಗೂ ಕಾಲುವೆ ದುರಸ್ತಿ ಮಾಡಿ ರೈತರ ಬೆಳೆಗಳಿಗೆ ನೀರು ಹೋಗಲು ಅನುಕೂಲ ಮಾಡಿಕೊಡಬೇಕು ಇದು ಮುಖ್ಯ ಕಾಲುವೆ ಆಗಿರುವುದರಿಂದ 25 ಸಾವಿರ ಹೆಕ್ಟರ್ ಭೂಮಿ ನೀರಾವರಿಗೆ ಒಳಪಡುತ್ತದೆ, ಇದನ್ನೇ ನಂಬಿ ಈ ಭಾಗದ ಸಾವಿರಾರು ರೈತರ ಬೆಳೆಗಳನ್ನು ಬೆಳೆದಿದ್ದಾರೆ ಒಡೆದ ಕಾಲುವೆ ದುರಸ್ತಿ ಕಾರ್ಯ ಕೂಡಲೇ ಮಾಡಬೇಕು ಇಲ್ಲದಿದ್ದರೆ ನೀರಿಲ್ಲದೆ ಮತ್ತಷ್ಟು ರೈತರ ಬೆಳೆಗಳು ಹಾನಿಯಾಗುತ್ತವೆ ಬೇಸಿಗೆ ಸಮಯವಾಗಿದ್ದರಿಂದ ರೈತರಿಗೆ ತುಂಬಾ ತೊಂದರೆಯಾಗಿದೆ. ಈ ಭಾಗದ ರೈತರು ಸುಮಾರು 3 ವರ್ಷದಿಂದ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನ ಆಗಿಲ್ಲಾ. ಇದಕ್ಕೆ ಕ್ಷೇತ್ರದ ಶಾಸಕರು ಸಚಿವರು ಮತ್ತು ಅಧಿಕಾರಿಗಳ ನಿರ್ಲಕ್ಷವೇ ಕಾರಣ ಎಂದು ಹೇಳಿದ್ದಾರೆ. ಅವರು ಭೇಟಿ ನೀಡಿದಾಗ ತಾಲೂಕಿನ ಸುತ್ತಮುತ್ತಲಿನ ರೈತರು ಇದ್ದರು.