ಬೆಳಗಾವಿಗೆ ಬರತೇವೆ ಎಂದು ಜಂಬಕೊಚ್ಚಿದ್ದ ‘ಮಹಾ’ ಶಿವಸೇನಿಕರು ಬಂದ ದಾರಿಗೆ ಸುಂಕವಿಲ್ಲದಂತೆ ವಾಪಸ್
ಬೆಳಗಾವಿ, ಅ, 31 : ಕರ್ನಾಟಕದಲ್ಲಿ ಕನ್ನಡದ ಹಬ್ಬ ಅಥವಾ ರಾಜ್ಯೋತ್ಸವ ಕನ್ನಡ ನಾಡು ನುಡಿಯ ಸಂಭ್ರಮದ ತಯಾರಿ ಪ್ರಾರಂಭವಾದ್ರೆ ಸಾಕು ಶಿವಸೇನೆ ಮತ್ತು ಎಂಇಎಸ್ ಕಾರ್ಯಕರ್ತರು ನಾಡವಿರೋಧಿ ಚಟುವಟಿಗೆ ಶುರು ಮಾಡುತ್ತಾರೆ. ಮಂಗಳವಾರ ರಾಜ್ಯೋತ್ಸವಕ್ಕೆ ಬೆಳಗಾವಿ ನಗರವು ಸಜ್ಜಾಗುತ್ತಿದ್ದರೆ ಇತ್ತ ನಾಡ ದ್ರೋಹಿ ಶಿವಸೇನೆ ತನ್ನ ಪುಂಡಾಟಿಕೆ ಮುಂದೆವರೆಸಿದ್ದು, ರಾಜ್ಯದ ಗಡಿಯ ನಡು ರಸ್ತೆಯಲ್ಲಿ ಕುಳಿತು ಹೈಡ್ರಾಮಾ ನಡೆಸಿದೆ. ರಾಜ್ಯದ ಗಡಿ ಗ್ರಾಮ ಕೊಗನೋಳಿ ಹತ್ತಿರ ಆಗಮಿಸಿದ ಮಹಾರಾಷ್ಟ್ರದ ಪುಂಡರನ್ನು ಬೆಳಗಾವಿ ಪೊಲೀಸರು ತಡೆದು ಬಂದ ದಾರಿಗೆ ಸುಂಕವಿಲ್ಲದಂತೆ ವಾಪಸ್ ಕೊಲ್ಲಾಪೂರಕ್ಕೆ ಕಳಿಹಿಸಿದ್ದಾರೆ.

ಸೋಮವಾರ ಬೆಳಿಗ್ಗೆ ಕೊಲ್ಲಾಪೂರದಿಂದ ಆಗಮಿಸಿದ ಶಿವಸೇನಾ ಪುಂಟರು ಬೆಳಗಾವಿಗೆ ಆಗಮಿಸಲು ಯತ್ನಿಸಿದರು. ಬಳಿಕ ಅವರನ್ನು ತಡೆದ ಬೆಳಗಾವಿಯ ಪೊಲೀಸರ ವಿರುದ್ದ ರಸ್ತೆಯ ಮಧ್ಯೆ ಕುಳಿತ ಶಿವಸೇನಾ ಪುಂಡರು ಘೋಷಣೆ ಕೂಗಿದರು. ವಾಹನಗಳ ಮೇಲೆ ರಾಜ್ಯ ಪ್ರವೇಶಕ್ಕೆ ಯತ್ನಿಸ್ತಿರೋ ಕಾರ್ಯಕರ್ತರು, ಕೈಲಿ ವೀರ ಜ್ಯೋತಿ ಹಿಡಿದು ಆಗಮಿಸುತ್ತಿದ್ದರು. ನಾಳೆ ನಾಡಹಬ್ಬವನ್ನು ಜೋರಾಗಿ ಆಚರಣೆ ಮಾಡಬೇಕು ಅಂತ ಕನ್ನಡಿಗರು ತಯಾರಿ ನಡೆಸಿದರೆ ಇತ್ತ ಶಿವಸೇನೆ ಮತ್ತು ನಾಡದ್ರೋಹಿ ಎಂಇಎಸ್ ಎಂದಿನಂತೆ ತನ್ನ ಖಯಾಲಿ ಮುಂದುವರೆಸಿದೆ.
ಪ್ರತಿ ವರ್ಷದ ಪದ್ಧತಿಯಂತೆ ಈ ಬಾರಿಯೂ ನಮಗೆ ಬೆಳಗಾವಿ ಪ್ರವೇಶಕ್ಕೆ ಅವಕಾಶ ಮಾಡಿಕೊಡಬೇಕು ಅಂತ ರಾಜ್ಯ ಪ್ರವೇಶಕ್ಕೆ ಶಿವಸೇನೆ ಮುಂದಾಗಿತ್ತು. ಕೊಲ್ಹಾಪುರ ಶಿವಸೇನೆ ಜಿಲ್ಲಾಧ್ಯಕ್ಷ ವಿಜಯ್ ದೇವಣೆ ನೇತೃತ್ವದಲ್ಲಿ ರಾಜ್ಯ ಪ್ರವೇಶಕ್ಕೆ ಮುಂದಾದ ಶಿವಸೇನೆಯ 50ಕ್ಕೂ ಹೆಚ್ಚು ಕಾರ್ಯಕರ್ತರನ್ನು ಪೆÇಲೀಸರು ಕುಗನೊಳ್ಳಿ ಚಕ್‍ಪೆÇೀಸ್ಟ್ ಬಳಿ ತಡೆಯಲಾಯಿತು. ಪೆÇಲೀಸರು ತಡೆದಿದ್ದರಿಂದ ಅವರ ವಿರುದ್ದವೇ ನಡು ರಸ್ತೆಯಲ್ಲೇ ಶಿವಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ರಸ್ತೆ ಮಧ್ಯೆಯೇ ಕುಳಿತು ತಮ್ಮ ಆಟಾಟೋಪ ಮುಂದುವರೆಸಿದರು.

ರಸ್ತೆಯ ಮಧ್ಯೆ ಕುಳಿತು ಪ್ರತಿಭಟನೆ ಶುರು ಮಾಡಿದ ಶಿವಸೇನೆ ಪುಂಡರು ಬಿಸಿಲಿಗೆ ಬಳಲಿ ಬೆಂಡಾಗಿ ನಂತರ ಪೆÇಲೀಸರ ಬಳಿ ಒಂದು ನಿವೇದನೆಯನ್ನೂ ಇಟ್ಟರು. ನಾವು ರಾಜ್ಯ ಪ್ರವೇಶ ಮಾಡೋದಿಲ್ಲ ನಾವು ತಂದ ವಿಜಯ ಜ್ಯೋತಿಯನ್ನಾದರೂ ಬೆಳಗಾವಿಗೆ ತಲುಪಿಸಲು ಅವಕಾಶ ನೀಡಿ ಎಂದು ಪೆÇಲೀಸರ ಮುಂದೆ ಮನವಿ ಮಾಡಿದರು. ಆದರೆ ಇದಕ್ಕೂ ಸಹ ಒಪ್ಪದ ಬೆಳಗಾವಿ ಜಿಲ್ಲಾ ಪೆÇಲೀಸರು ಯಾವುದೇ ಕಾರಣಕ್ಕೂ ಯಾವುದಕ್ಕೂ ಅವಕಾಶ ನೀಡುವದಿಲ್ಲ ಎಂದು ಖಡಕ್ ಆಗಿ ತಿಳಿಸಿದರು. ಹೀಗಾಗಿ ಬಂದ ದಾರಿಗೆ ಸುಂಕ ಇಲ್ಲ ಅಂತ ತಮ್ಮಷ್ಟಕ್ಕೆ ತಾವೇ ಶಿವಸೇನೆಯ ಪುಂಡರು ಮತ್ತೆ ಮಹಾರಾಷ್ಟ್ರದ ಹಾದಿ ತುಳಿದರು.
ಒಟ್ಟಿನಲ್ಲಿ ಕನ್ನಡದ ಕರ್ನಾಟಕದ ಸಂಭ್ರಮ ಶುರುವಾದ್ರೆ ಎಂಇಎಸ್ ಹಾಗೂ ಶಿವಸೇನೆ ಪುಂಡರು ಅಬ್ಬರಿಸಿ ಬೊಬ್ಬಿರಿಯಲು ಶುರುಮಾಡುತ್ತಾರೆ. ಸಧ್ಯ ಇಂದಾಗಿದ್ದು ಅದೇ. ಇನ್ನು ನಾಳೆಯೂ ಸಹ ಎಂಇಎಸ್ ಬೆಳಗಾವಿಯಲ್ಲಿ ಕರಾಳ ದಿನಾಚರಣೆಗೆ ಮುಂದಾಗಿದ್ದು ನಾಳೆಯೂ ಸಹ ಬೆಳಗಾವಿಯಲ್ಲಿ ಎಂಇಎಸ್ ಹಾಗೂ ಶಿವಸೇನೆ ಆಟಾಟೋಪ ಮುಂದುವರೆಯಲಿದೆ. ಇತ್ತ ಎಂದಿನಂತೆ ಕನ್ನಡಿಗರು ನಾಡಹಬ್ಬದಲ್ಲಿ ತೊಡಗಲಿದ್ದಾರೆ.
ಬೆಳಗಾವಿಯಲ್ಲಿ ಬಿಗಿ ಪೊಲೀಸ ಬಂದೋಬಸ್ತ್ : ಬೆಳಗಾವಿಯಲ್ಲಿ ಅದ್ದೂರಿ ರಾಜ್ಯೋತ್ಸವದ ಆಚರಣೆಗೆ ಸಿದ್ಧತೆ ನಡೆಸಿದ್ದರೇ, ಬೆಳಗಾವಿ ನಗರ ಪೆÇಲೀಸರು ರಾಜ್ಯೋತ್ಸವದ ಆಚರಣೆಗೆ ಕಪ್ಪು ಚುಕ್ಕೆ ಬರದಂತೆ ಬಿಗಿ ಬಂದೋಬಸ್ತ ಏರ್ಪಡಿಸಿದ್ದಾರೆ. ಬೆಳಗಾವಿ ನಗರದಲ್ಲಿ ರಾಜ್ಯೋತ್ಸವದ ಬಂದೋಬಸ್ತ್ ಅಂಗವಾಗಿ 3 ಡಿಸಿಪಿಗಳು, 12 ಎಸಿಪಿಗಳು, 52 ಇನ್ಸ್‍ಪೆಕ್ಟರ್‍ಗಳು, 2500 ಸಿಬ್ಬಂದಿ ಮತ್ತು ಇತರ ಶ್ರೇಣಿಯ ಅಧಿಕಾರಿಗಳು, 9 ಸಿಎಆರ್ ಪ್ಲಟೂನ್‍ಗಳು, 10 ಕೆಎಸ್‍ಆರ್ಪಿ ತುಕಡಿಗಳು, 500 ಹೋಮ್ ಗಾರ್ಡ್‍ಗಳು, 8 ಡ್ರೋನ್ ಕ್ಯಾಮೆರಾಗಳು,300 ಸಿಸಿಟಿವಿ, 35 ವಿಡಿಯೋ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ.