ಕುಸ್ತಿಪಟುಗಳ ತವರೂರಲ್ಲಿ ಇಂದಿನಿಂದ ಸಂಸದರ ಕ್ರಿಡೋತ್ಸವ ಆರಂಭ
ರಾಣಿಬೆನ್ನೂರ:27 ಗ್ರಾಮೀಣ ಪ್ರದೇಶದ ಪ್ರತಿಭೆಗಳಿಗೆ ಉತ್ತೇಜನ ನೀಡುವ ಸದುದ್ದೇಶದಿಂದ ಜ.28, 29ರಂದು ನಗರದ ನಗರಸಭಾ ಕ್ರೀಡಾಂಗಣದಲ್ಲಿ ಸಂಸದರ ಕ್ರೀಡಾ ಮಹೋತ್ಸವ ಆಯೋಜಿಸಲಾಗಿದೆ. ಜೊತೆಗೆ ಜ. 29 ರಂದು ಸಂಜೆ 6ಘಂಟೆಗೆ ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹುಟ್ಡು ಹಬ್ಬ ಆಚರಿಸಲಾಗುವುದು ಮಾಜಿ ಶಾಸಕ ಅರುಣಕುಮಾರ ಪೂಜಾರ ಹೇಳಿದರು.
ನಗರದ ಕ್ರೀಡಾಂಗಣದಲ್ಲಿ ಮಾಧ್ಯಮ ಗೋಷ್ಠಿಯಲ್ಲಿ ಮಾತನಾಡಿದರು, ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರಿಗೆ ಓಲಂಪಿಕ್ ಕ್ರೀಡಾಕೂಟದಲ್ಲಿ ದೇಶದ ಕ್ರೀಡಾಪಟುಗಳು ಉತ್ತಮ ಸಾಧನೆ ಮಾಡಬೇಕು ಎಂಬ ಕನಸಿದೆ. ಈ ನಿಟ್ಟಿನಲ್ಲಿ ಮುಂದಿನ ಹತ್ತು ವರ್ಷದ ದೂರದೃಷ್ಟಿ ಇಟ್ಟುಕೊಂಡು ಕ್ರೀಡಾ ಮಹೋತ್ಸವ ನಡೆಸಲಾಗುತ್ತಿದೆ.
ಕಬಡ್ಡಿ, ವಾಲಿಬಾಲ್, ಖೋಖೋ, ಹಗ್ಗಜಗ್ಗಾಟ ಸ್ಪರ್ಧೆಗಳು ಗುಂಪು ವಿಭಾಗದಲ್ಲಿ ಜರುಗಲಿವೆ. ಅಥ್ಲೆಟಿಕ್ಸ್ನಲ್ಲಿ 100 ಮೀ, 400 ಮೀ ಓಟ, 4100 ಮೀ. ರೀಲೆ, ಗುಂಡು ಎಸೆತ, ಚಕ್ರ ಎಸೆತ, ವಿಕಲಚೇತನರಿಗಾಗಿ 50 ಮೀ. ಓಟ, ಗೋಣಿ ಚೀಲದ ಓಟ ಮುಂತಾದ ಕ್ರೀಡೆಗಳನ್ನು ಆಯೋಜಿಸಲಾಗಿದೆ. ಈಗಾಗಲೇ 50ಕ್ಕೂ ಅಧಿಕ ಕ್ರೀಡಾಪಟುಗಳು ಗುಂಪು ಆಟಗಳಿಗೆ ಮತ್ತು 100ಕ್ಕೂ ಅಧಿಕ ಕ್ರೀಡಾಪಟುಗಳು ವೈಯಕ್ತಿಕ ಆಟಗಳಿಗೆ ಆನ್ಲೈನ್ ಮೂಲಕ ನೋಂದಣಿ ಮಾಡಿಸಿಕೊಂಡಿದ್ದಾರೆ ಎಂದರು.
ಸಂಸದ ಬಸವರಾಜ ಬೊಮ್ಮಾಯಿ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ.ಸ್ಥಳೀಯ ಕ್ರೀಡಾಪಟುಗಳು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಕ್ರೀಡಾ ಮಹೋತ್ಸವ ಯಶಸ್ವಿಗೊಳಿಸಬೇಕು ಎಂದು ಮನವಿ ಮಾಡಿದರು. ಕೆ. ಶಿವಲಿಂಗಪ್ಪ, ಚೋಳಪ್ಪ ಕಸವಾಳ, ನಿಂಗರಾಜ ಕೋಡಿಹಳ್ಳಿ, ಮಲ್ಲಣ್ಣ ಅಂಗಡಿ, ಪವನಕುಮಾರ ಮಲ್ಲಾಡದ, ಮಾಳಪ್ಪ ಪೂಜಾರ, ರಮೇಶ ಕರಡಣ್ಣನವರ, ಕುಬೇರ್ಪ ಕೊಂಡಜ್ಜಿ ಸುದ್ದಿಗೋಷ್ಠಿಯಲ್ಲಿ ಇದ್ದರು.