ಮಹಲಿಂಗಪುರ

ಚಿಮ್ಮಡ ಗ್ರಾಮದ ಅಂಗನವಾಡಿ ಕೇಂದ್ರ ಬೇರೆ ಕಡೆ ಸ್ಥಳಾಂತರಿಸಲು ಸ್ಥಳೀಯರಿಂದ ಆಗ್ರಹ

ಚಿಮ್ಮಡ ಗ್ರಾಮದ ಅಂಗನವಾಡಿ ಕೇಂದ್ರ ಬೇರೆ ಕಡೆ ಸ್ಥಳಾಂತರಿಸಲು ಸ್ಥಳೀಯರಿಂದ ಆಗ್ರಹ

ಚಿಮ್ಮಡ ಗ್ರಾಮದ ಅಂಗನವಾಡಿ ಕೇಂದ್ರ ಬೇರೆ ಕಡೆ ಸ್ಥಳಾಂತರಿಸಲು ಸ್ಥಳೀಯರಿಂದ ಆಗ್ರಹ 

ಮಹಾಲಿಂಗಪುರ 22 : ಸಮೀಪದ ಚಿಮ್ಮಡ ಗ್ರಾಮದ 9ನೇ ವಾರ್ಡಿನಲ್ಲಿ ಗಲೀಜು ವಾತಾವರಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಂಗನವಾಡಿ ಕೇಂದ್ರವನ್ನು ಬೇರೆ ಕಡೆ ಸ್ಥಳಾಂತರಿಸಬೇಕೆಂದು ಗ್ರಾಮದ ನಾಗರಿಕರು ಅಂಗನವಾಡಿ ಕೇಂದ್ರಕ್ಕೆ ಸಂಬಂಧಿಸಿದ ಅಧಿಕಾರಿಗಳಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ.  

ಚಿಮ್ಮಡ ಗ್ರಾಮದ ಕೆರೆ ರಸ್ತೆ ಮಾರ್ಗದ ಸರ್ಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆ ಹತ್ತಿರದ ಅಂಗನವಾಡಿ ಕೇಂದ್ರಕ್ಕೆ ಪ್ರತಿದಿನ 20 ರಿಂದ 30ಕ್ಕೂ ಅಧಿಕ ಮಕ್ಕಳು ಹಾಜರಾತಿ ಇರುತ್ತದೆ. ಕೇಂದ್ರದ ಪಕ್ಕದಲ್ಲೇ ಇರುವ ಕೆರೆ ಅಂಗಳಕ್ಕೆ ಈ ಭಾಗದ ಜನರು ಪ್ರತಿ ದಿನ ಬಯಲು ಬಹಿರ್ದೆಸೆಗೆ ಹೋಗುವುದರಿಂದ ಈ ಭಾಗದ ವಾತಾವರಣವೇ ತೀವ್ರ ದುರ್ವಾಸನೆ ಬೀರುತ್ತದೆ. ಅಶುದ್ಧ ಪರಿಸರದಲ್ಲಿ ಪ್ರತಿದಿನ ಮಕ್ಕಳನ್ನು ಪೋಷಿಸಲಾಗುತ್ತಿರುವುದರಿಂದ ಇಲ್ಲಿನ ನಾಗರಿಕರು ಈ ಕುರಿತು "ಶಿಶು ಅಭಿವೃದ್ಧಿ ಯೋಜನೆ ಅಧಿಕಾರಿಗಳಿಗೆ" ಲಿಖಿತವಾಗಿ ಹಾಗೂ ಮೌಖಿಕವಾಗಿ ಹಲವಾರು ಬಾರಿ ಮನವಿ ಮಾಡಿದರು ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಮಕ್ಕಳ ಆರೋಗ್ಯ ಹಿತ ದೃಷ್ಟಿಯಿಂದ ಇಲ್ಲಿರುವ ಅಂಗನವಾಡಿ ಕೇಂದ್ರವನ್ನು ಬೇರೆ ಕಡೆ ಸ್ಥಳಾಂತರಿಸಬೇಕೆಂದು ಸ್ಥಳೀಯ ನಾಗರಿಕರು ಒತ್ತಾಯಿಸಿದ್ದಾರೆ."ಅಂಗನವಾಡಿ ಕೇಂದ್ರದ ಸುತ್ತಲು ಗಲೀಜು ಇರುವುದರಿಂದ ಮಕ್ಕಳ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಲವಾರು ಜನ ಪಾಲಕರು ತಮ್ಮ ಮಕ್ಕಳನ್ನು ಗಲೀಜು ಇರುವುದರಿಂದ ಅಂಗನವಾಡಿ ಕೇಂದ್ರಕ್ಕೆ ಕಳಿಸುವುದೇನೆ ಬಿಟ್ಟಿದ್ದಾರೆ.ಅದರ ಬದಲಾಗಿ ಈಗ ಖಾಲಿ ಇರುವ ಸರ್ಕಾರಿ ಕನ್ನಡ ಗಂಡು ಮಕ್ಕಳ ಹಿರಿಯ ಪ್ರಾಥಮಿಕ ಶಾಲೆಯ ಕಟ್ಟಡಕ್ಕೆ ಕೇಂದ್ರ ಸ್ಥಳಾಂತರಿಸಬೇಕು. ಶ್ರೀಶೈಲ್ ಮಠಪತಿ ಸ್ಥಳೀಯರು. ಗಲೀಜು ವಾತಾವರಣದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಗ್ರಾಮದ ಅಂಗನವಾಡಿ ಕೇಂದ್ರ. 


ಸುದ್ದಿ ಓದಿ