ಸೆಲ್ಫಿ ಹುಚ್ಚಿಗೆ ಬಲಿಯಾಗದಿರಲಿ ಬದುಕು
-ಶ್ವೇತಾ ಹೆದ್ದೂರ ಶೆಟ್ಟಿ, ಬೆಳಗಾವಿ
ಸೆಲ್ಫಿ' ಹೆಸರೇ ವಿಚಿತ್ರ ಅಲ್ವಾ? ಈ ಹೆಸರನ್ನು ಯಾರು ಕಂಡುಹಿಡಿದಿರೋ ಗೊತ್ತಿಲ್ಲ. ಆದರೆ ಈ ಶಬ್ದ ಕಿವಿಗೆ ಅಪ್ಪಳಿಸಿದ ಕೂಡಲೇ ನಮ್ಮ ಕಿವಿ ಚುರುಕಾಗುವುದಂತೂ ನಿಜ. ಈಗಂತು ಚಿಕ್ಕ ಮಕ್ಕಳಿಂದ ಹಿಡಿದು ವೃದ್ಧರ ಮನಸ್ಸಿನ ಮೇಲೆ ಈ ಸೆಲ್ಫಿ ತನ್ನ ಅಪಾರವಾದ ಜಾದೂ ಮಾಡಿದೆ ಎಂದರೇ ತಪ್ಪಾಗಲಾರದು. ಚಿಕ್ಕ ಮಕ್ಕಳಿಗಿಂತ ವೃದ್ಧರಿಗೇ ಸೆಲ್ಫಿ ಎಂದರೇ ಏನು ಎಂದು ತಿಳಿದುಕೊಳ್ಳುವ ಹಂಬಲ ತುಂಬಾನೇ ಜಾಸ್ತಿ ಸಾಮಾನ್ಯವಾಗಿ ಸೆಲ್ಫಿ ಎಂದರೇ ನಮ್ಮ ಫೋಟೋವನ್ನು ನಾವೇ ಕ್ಲಿಕ್ ಮಾಡಿಕೊಳ್ಳುವುದು ಎಂದು. ಆದರೇ ಅದನ್ನೇ ಸ್ವಲ್ಪ ವಿಸ್ತಾರವಾಗಿ ಹೇಳುವುದಾದರೇ ನಮ್ಮ ಮುಖವನ್ನು ಚಿತ್ರ ವಿಚಿತ್ರವಾಗಿ ಭಂಗಿಗಳಲ್ಲಿ ಮಾಪರ್ಾಡು ಮಾಡಿ ನಮ್ಮ ಭಾವಚಿತ್ರವನ್ನು ನಾವೇ ತೆಗೆದುಕೊಳ್ಳುವುದು ಎಂದರ್ಥ.
ಆದರೇ ಇತ್ತೀಚಿಗೆ ಸೆಲ್ಫಿ ನಮ್ಮ ಯುವ ಜನಾಂಗದವರ ಕೈಯಲ್ಲಿ ಸಿಕ್ಕು ಅವರ ಹುಚ್ಚುತನದಿಂದ ಅನೇಕ ದುರಂತಗಳಿಗೆ ಕಾರಣವಾಗುತ್ತಿರುವುದು ಒಂದು ವಿಷಾದದ ಸಂಗತಿ. ಈಗ ತಾನೇ ಜನಿಸಿರುವ ಮಗು ಕೂಡ ಮೊಬೈಲ್ ಉಪಯೋಗದ ಬಗ್ಗೆ ತಿಳಿದುಕೊಂಡೇ ಇರುವಂಥ ಈ 4ಉ/5ಉ ಯುಗದಲ್ಲಿ ನಮ್ಮ ಯುವ ಜನಾಂಗದವರಿಗೆ ಸಾಕಷ್ಟು ತಿಳುವಳಿಕೆ ಇದ್ದರೂ ಕೂಡ ಈ ಸೆಲ್ಫಿಯಿಂದ ಪದೇ ಪದೇ ಅವಘಡಗಳು ನಡೀತಾನೇ ಇರೋದು ಒಂದು ದುಃಖಕರವಾದ ಸಂಗತಿ.
ನಮ್ಮ ಯುವ ಜನಾಂಗ ಸೆಲ್ಫಿ ತೆಗೆದುಕೊಳ್ಳುವ ಹುಮ್ಮಸ್ಸಿನಲ್ಲಿ ತಮ್ಮ ಜೀವನವನ್ನು ಲೆಕ್ಕಿಸದೇ ಪ್ರಯತ್ನ ಪಡುತ್ತಿರುವುದು ಹುಚ್ಚುತನವೇ ಸರಿ. ಕೇವಲ ಪಬ್ಲಿಸಿಟಿ ಮತ್ತು ಫೇಸ್ಬುಕ್ ಲೈಕಗಳಿಗಾಗಿ ಇಂಥ ಹುಚ್ಚುತನಕ್ಕೆ ಬಲಿಯಾಗುವುದು ಎಷ್ಟು ಸರೀ? ಮುಂದುವರಿದ ತಂತ್ರ ಜ್ಞಾನದ ಬಳಕೆ ಯಾವುದಾದರೂ ಸತ್ಕಾರ್ಯಕ್ಕೆ ಮಾಡಿಕೊಳ್ಳುವ ಬದಲು ಈ ರೀತಿ ತಮ್ಮ ಜೀವನವನ್ನೇ ಪಣಕ್ಕಿಡುವ ಸಾಹಸಕ್ಕೆ ಕೈ ಹಾಕುವುದು ಎಷ್ಟು ಸೂಕ್ತ?
ಸೆಲ್ಫಿಗಾಗಿ ಜನ ಏನೆಲ್ಲಾ ಮಾಡ್ತಾರೆ. ದೊಡ್ಡ ದೊಡ್ಡ ಕಟ್ಟಡಗಳ ತುತ್ತ ತುದಿಯಲ್ಲಿ ನಿಲ್ಲುವುದು, ಗುಡ್ಡ ಬೆಟ್ಟಗಳ ತುತ್ತ ತುದಿಯಲ್ಲಿ ನಿಲ್ಲುವುದು, ಚಲಿಸುವ ವಾಹನದ ಮುಂದೆ ನಿಲ್ಲುವುದು, ಧುಮ್ಮುಕ್ಕಿ ಹರಿಯುತ್ತಿರುವ ಜಲಪಾತಗಳ ತುದಿಯಲ್ಲಿ ನಿಲ್ಲುವುದು ಹೀಗೆ ಇನ್ನೂ ಅನೇಕ ರೀತಿಯ ಭಯಾನಕ ರೀತಿಯಲ್ಲಿ ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಾರೆ. ಹೀಗೆಲ್ಲ ಮಾಡುವಾಗ ಅವರು ತಮ್ಮ ಮೃತ್ಯುವನ್ನು ತಾವೇ ಆಹ್ವಾನ ಮಾಡುತ್ತಿದ್ದಾರೆ ಎಂದು ಏಕೇ ತಿಳಿಯುವುದಿಲ್ಲವೋ ಗೊತ್ತಿಲ್ಲ. ಆದರೂ ಮಾನವ ಜನಾಂಗ ಈ ಸೆಲ್ಫಿ ಇಷ್ಟೊಂದು ಬಗ್ಗಿಕೊಂಡುರುವುದು ನೋಡಿದರೇ ವಿಚಿತ್ರವೆನಿಸುತ್ತದೆ. ನಾವು ಪ್ರತಿದಿನ ಓದುವ ದಿನ ಪತ್ರಿಕೆಗಳಲ್ಲಿ ಕನಿಷ್ಠ ಪಕ್ಷ ಒಂದು ಸುದ್ದಿಯಾದರೂ ಈ ಸೆಲ್ಫಿ ಹುಚ್ಚಿಗೆ ಬಲಿಯಾದವರ ಬಗ್ಗೆ ಇದ್ದೇ ಇರುತ್ತದೆ. ಮುಂದಿನ ಪೀಳಿಗೆಗೆ ಸಹಾಯವಾಗಲೆಂದು ನಮ್ಮ ತಂತ್ರಜ್ಞಾನ ಎಷ್ಟೇ ಮುಂದುವರೆದರೂ ಅದರಿಂದ ಅವಘಡಗಳ ಸಂಖ್ಯೆಯೇ ಜಾಸ್ತಿಯಾಗುತ್ತಿದೆ.
ಮನುಷ್ಯನಿಗೆ ಹವ್ಯಾಸ ಇರಬೇಕು ಆದರೇ ಅದು ಹುಚ್ಚಾಗಿ ಪರಿವರ್ತನೇ ಆಗಬಾರದು. ಸೆಲ್ಫಿ ಹವ್ಯಾಸ ಇರಲಿ ಆದರೇ ಅದು ತಮ್ಮ ಜೀವನವನ್ನೇ ಬಲಿಕೊಡುವಷ್ಟರ ಮಟ್ಟಿಗೆ ಹುಚ್ಚಾಗಿ ಪರಿವರ್ತನೆ ಆಗದೇ ಇರಲಿ.
ಸೆಲ್ಫಿ ಕ್ಲಿಕ್ಕಿಸಿಕೊಳ್ಳುವುದೇ ಆಗಿದಲ್ಲಿ ಒಂದು ಸುರಕ್ಷಿತ ಪ್ರದೇಶದಲ್ಲಿ ಸುರಕ್ಷಿತ ರೀತಿಯಲ್ಲಿ ಕ್ಲಿಕ್ಕಿಸಿಕೊಂಡಿದ್ದೆ ಆದಲ್ಲಿ ಆದಷ್ಟೂ ಸೆಲ್ಫಿಯಿಂದ ಆಗುತ್ತಿರುವ ದುರಂತಗಳನ್ನು ಕಡಿಮೆ ಮಾಡಬಹುದು ಎಂಬುದು ನನ್ನ ಆಶಯ.