ಮಕ್ಕಳು ಪರೀಕ್ಷೆಯಲ್ಲಿ ಕಡಿಮೆ ಅಂಕಗಳಿಸಿದಾಗ ಪ್ರತಿಕ್ರಿಯೆ ಹೀಗಿರಲಿ
* ಮಂಜುನಾಥ ಮರಿತಮ್ಮನವರ
ಸವಣೂರ. ಜಿ. ಹಾವೇರಿ.ಮೊ.9663338287
ಎಸ್ಎಸ್ಎಲ್ಸಿ ಅಥವಾ ಪಿಯುಸಿ ಪರೀಕ್ಷೆಗಳಲ್ಲಿ ಅನುತ್ತೀರ್ಣ ಹೊಂದಿದ ವಿದ್ಯಾಥರ್ಿ/ನಿಯರು ವಿಷ ಸೇವಿಸಿ, ಕೆರೆ, ಬಾವಿ, ಆಣೆಕಟ್ಟುಗಳಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡು ಜೀವ ಕಳೆದುಕೊಳ್ಳುತ್ತಿರುವುದನ್ನು, ಅವಮಾನಗೊಂಡು ಮನೆಬಿಟ್ಟು ಹೋಗುವುದನ್ನು ನಾವಿಂದು ವೃತ್ತಪತ್ರಿಕೆಗಳು ಹಾಗೂ ಟಿ.ವ್ಹಿ.ಗಳಲ್ಲಿ ಕಾಣುತ್ತಿದ್ದೇವೆ. ಇದಕ್ಕೆ ಕಾರಣವೂ ಇಲ್ಲದಿಲ್ಲ. ಎಸ್ಎಸ್ಎಲ್ಸಿ ಅಥವಾ ಪಿಯುಸಿಯಲ್ಲಿ ಕಡಿಮೆ ಅಂಕಗಳಿಸಿದಾಗ ಅಥವಾ ಅನುತ್ತೀರ್ಣರಾದಾಗ ಪಾಲಕರು ಕೋಪದ ಅತೀರೇಕಕ್ಕೇರುತ್ತಾರೆ. ಮಕ್ಕಳನ್ನು ಬೈಯುವುದು, ಹೊಡೆಯುವುದು, ಅವಮಾನಿಸುವುದು, ನಿನ್ನ ಮುಖವನ್ನು ನನಗೆ ತೋರಿಸಬೇಡ, ಮನೆಬಿಟ್ಟು ಹೋಗು, ನಿನ್ನ ವಿದ್ಯಾಭ್ಯಾಸಕ್ಕೆ ಖಚರ್ು ಮಾಡಿದ ಲಕ್ಷಗಟ್ಟಲೇ ಹಣವನ್ನು ಹೊಳೆಯಲ್ಲಿ ಹುಣಸೆಹಣ್ಣು ತೊಳೆದಂತಾಯ್ತು ಎಂದು ಚುಚ್ಚಿಚುಚ್ಚಿ ಮಾತನಾಡುವರು. ಇದರಿಂದ ಮನನೊಂದ ಮಕ್ಕಳು ಬಾವನಾಶೂನ್ಯರಾಗಿ ಅವಿವೇಕದ ನಿಧರ್ಾರವನ್ನು ತೆಗೆದುಕೊಳ್ಳುತ್ತಾರೆ. ಈ ವಿಷ ವತರ್ುಲದಿಂದ ನಮ್ಮ ಮಕ್ಕಳನ್ನು ನಾವಿಂದು ರಕ್ಷಿಸಿಕೊಳ್ಳಬೇಕಿದೆ.
ದೇವರು ನಮಗೆ ಜೀವನ ನೀಡಿದ್ದು, ಆತ್ಮಹತ್ಯೆ ಮಾಡಿಕೊಂಡು ಅರ್ಧಕ್ಕೆ ವಾಪಸ್ ಬಂದು ಬಿಡಲಿ ಎಂಬುದಕ್ಕಲ್ಲ; ಪರಿಪೂರ್ಣವಾಗಿ ಬದಕಲು. ನಿಮ್ಮ ಬದುಕನ್ನು ರೂಪಿಸಿಕೊಂಡು ಸಮಾಜದ ಹತ್ತಾರುಜನರಿಗೆ ಸಹಾಯ ಮಾಡಿ ಅವರ ಬದುಕನ್ನು ಬೆಳಗಲು ಅವಕಾಶ ಮಾಡಿ ಕೊಟ್ಟು ಅರ್ಥಪೂರ್ಣ ಬದುಕು ಸಾಗಿಸು ಎಂದು. ಸೋಲಾದಾಗ ವೈಫಲ್ಯ ಹೊಂದಿದಾಗ ಭ್ರಮನಿರಶನವಾಗುವದು ಸಹಜ. ದಿನಗಳೆದಂತೆ ಕ್ರಮೇಣ ಅದು ಇಳಿಮುಖವಾಗುತ್ತದೆ. ಆತ್ಯಹತ್ಯೆ ಮಾಡಿಕೊಳ್ಳಬೇಕೆಂಬ ತುಡಿ ತಕಡಿಮೆಯಾಗುತ್ತದೆ. ಬದುಕಿನ ಮುಂದೆ ಬರುವ ಬೇರೆ ಬೇರೆ ದಾರಿಗಳ ಕಡೆ ಮನಸ್ಸು ತೆರೆದುಕೊಳ್ಳುತ್ತವೆ ಎಂಬ ಸತ್ಯವನ್ನು ನಿಮ್ಮ ಮಕ್ಕಳಿಗೆ ತಿಳಿಸಿಕೊಡಿ.
ನಿಮ್ಮ ಮಕ್ಕಳು ಪರೀಕ್ಷೆಯಲ್ಲಿ ಅನುತ್ತೀರ್ಣನಾದರೆ ಅಥವಾ ಕಡಿಮೆ ಅಂಕಗಳಿಸಿದರೆ ಅವರನ್ನು ಕರೆದು ನಾಲ್ಕು ಸಮಾಧಾನದ ಮಾತು ಹೇಳಿ. ಅವರ ಪರೀಕ್ಷಾ ವೈಫಲ್ಯತೆಗೆ ಕಾರಣಗಳನ್ನು ಕಂಡು ಹಿಡಿಯಿರಿ. ಅದಕ್ಕೆ ಸೂಕ್ತವಾದ ಪರಿಹಾರ ಕ್ರಮಗಳನ್ನು ಯೋಚಿಸಿರಿ. ಮುಂದಿನ ಪರೀಕ್ಷೆಗೆ ಹೆಚ್ಚು ಅಂಕಗಳಿಸುವಂತೆ ಪ್ರೋತ್ಸಾಹ ತುಂಬಿ.
ಪ್ರತಿಯೊಂದು ಮಗುವಿನಲ್ಲಿಯೂ ವಿಶಿಷ್ಠ ಸಾಮಥ್ರ್ಯ ಅಡಗಿರುತ್ತದೆ. ಶೈಕ್ಷಣಿಕ ಪರೀಕ್ಷೆಯಲ್ಲಿ ವಿಫಲನಾದರೆ ಅವನಿಗಿಷ್ಟವಾದ ಕ್ಷೇತ್ರದಲ್ಲಿ ಮುಂದುವರೆಯಲು ಅವಕಾಶ ನೀಡಿ. ಕಲೆ, ಸಾಹಿತ್ಯ, ಚಿತ್ರಕಲೆ, ನೃತ್ಯ, ಸಿನಿಮಾ, ಹೀಗೆ ಯಾವಕ್ಷೇತ್ರಕ್ಕೆ ಮಕ್ಕಳು ಉತ್ಸಾಹತೋರಿಸುವರೋ ಆ ಕ್ಷೇತ್ರಕ್ಕೆ ಕಾಲಿಡಲು ಪ್ರೇರೇಪಿಸಿ.
ಎಷ್ಟೋ ಜನ ಎಸ್ಎಸ್ಎಲ್ಸಿ ಅಥವಾ ಪಿಯುಸಿ ಯಲ್ಲಿಕಡಿಮೆ ಅಂಕಗಳಿಸಿ ಪದವಿ, ಸ್ನಾತಕೋತ್ತರ ಪದವಿ ಹಂತಗಳಲ್ಲಿ, ಸ್ಪಧರ್ಾತ್ಮಕ ಪರೀಕ್ಷೆಗಳಲ್ಲಿ ಹೆಚ್ಚು ಅಂಕಗಳಿಸಿ ವಿಜಯ ಸಾಧಿಸಿದ್ದಾರೆ. ಆ ದಿಸೆಯಲ್ಲಿ ನಿಮ್ಮ ಮಕ್ಕಳನ್ನು ಹುರುದುಂಬಿಸಿ.
ಪರೀಕ್ಷೆಯಲ್ಲಿ ನೀನು ವಿಫಲನಾಗಿದ್ದಿಯಾ, ನೀನೊಬ್ಬ ನಿಷ್ಪ್ರಯೋಜ ಕದಂಡ ಪಿಂಡ ಎಂದು ಪದೇ ಪದೇ ಮೂದಲಿಸಬೇಡಿ. ಬಂಧು ಬಾಂಧವರ ಮುಂದೆ ಅವಮಾನ ಮಾಡಬೇಡಿ. ಮಕ್ಕಳಿಗೆ ಇದರಿಂದ ಆತ್ಮವಿಶ್ವಾಸ ಕುಗ್ಗಿ ಮಾನಸಿಕ ಕಿರಿಕಿರಿ ಉಂಟಾಗುತ್ತದೆ. ಉತ್ತಮ ಪ್ರಯತ್ನಕ್ಕೆ ಒಳ್ಳೆಯ ಫಲಿತಾಂಶ ಖಚಿತ. ಮಕ್ಕಳು ಮುಂದಿನ ಪ್ರಯತ್ನದಲ್ಲಿ ಮುಂದುವರೆಯಲು ಬೆಂಬಲಿಸಿ.
ಮಕ್ಕಳ ಮೇಲೆ ಅತಿಯಾದ ನಂಬಿಕೆಯಾಗಲಿ, ಅತೀಯಾದ ನಿರೀಕ್ಷೆಗಳಾಗಲಿ, ಅತಿಯಾದ ಅನುಮಾನಗಳಾಗಲಿ-ಮೂರೂಯೋಗ್ಯವಲ್ಲ. ಯಾವುದೇ ಪ್ರಸಂಗದ ಫಲಿತಾಂಶದ ಸತ್ಯಾಸತ್ಯತೆ ಪರಿಶೀಲಿಸಿ ನಂತರ ಅವರನ್ನು ಸರಿದಾರಿಗೆ ತರುವುದು ಒಳ್ಳೆಯದು.
ಬದುಕು ಬಹುದೊಡ್ಡ ಪರೀಕ್ಷಾರಂಗ. ಶೈಕ್ಷಣಿಕ ಪರೀಕ್ಷೆಯಲ್ಲಿ ವಿಫಲನಾದರೆ ಬದುಕೇನೂ ಮುಳುಗಿ ಹೋಗಲಿಲ್ಲ. ಮುಂದೆ ಸತತ ಪ್ರಯತ್ನ, ಪ್ರಾಮಾಣಿಕತನ, ನಿಷ್ಠೆಗಳಿಂದ ಬದುಕಿನ ಪರೀಕ್ಷಾರಂಗದಲ್ಲಿ ಗೆಲುವು ಸಾಧಿಸುವಂತೆ ಮಕ್ಕಳನ್ನು ಬೆಳೆಸಿರಿ.
ನಿಮ್ಮ ಮಕ್ಕಳ ದಿನಚರಿ ಬಗ್ಗೆ ತೀವ್ರ ಗಮನ ಇರಲಿ. ಅವರು ಎಲ್ಲಿ ಎಡವಿದ್ದಾರೆಂದು ತಿಳಿದುಕೊಳ್ಳಿ. ಅವರ ಸ್ನೇಹವಲಯದ ಮೇಲೊಂದು ನಿಗಾ ಇಡಿ.
ಕೇವಲ ಹೀಯಾಳಿಕೆಯಿಂದ ಯಾವುದೇ ಪ್ರಯೋಜನವಿಲ್ಲ, ಆದ್ದರಿಂದ ಮಕ್ಕಳನ್ನು ಸದಾ ಹುರುದುಂಬಿಸಿರಿ. ನಿಮ್ಮ ಮಕ್ಕಳಲ್ಲಿಯೂ ಅಪರಿಮಿತ ಶಕ್ತಿ-ಸಾಮಥ್ರ್ಯಇರುತ್ತದೆ. ಅವುಗಳನ್ನು ತಿಳಿದುಕೊಂಡು ಪ್ರೋತ್ಸಾಹಿಸಿದರೆ ಸಮಾಜದ ಆಸ್ತಿಯಾಗಬಲ್ಲರು. ಶೈಕ್ಷಣಿಕ ಪರೀಕ್ಷೆಗಳಲ್ಲಿ ಯಶಸ್ಸು ಕಾರಣದಿದ್ದರೂ ಬೇರೆ ಬೇರೆ ರಂಗಗಳಲ್ಲಿ ಸಾಧನೆ ಮಾಡಿದ ಮಹಾನ್ ವ್ಯಕ್ತಿಗಳ ಜೀವನ ಸಾಧನೆ ತಿಳಿದುಕೊಡಿ. ಥಾಮಸ್ ಅಲ್ವಾಎಡಿಸನ್, ಅಲ್ಬರ್ಟ ಐನ್ಸ್ಟಿನ್, ಸಚಿನ್ತೆಂಡುಲ್ಕರ್ ಮುಂತಾದವರ ಜೀವನ ನಿಮ್ಮ ಮಕ್ಕಳಿಗೆ ಮಾರ್ಗದಶರ್ಿಯಾಗಲಿ.
ನಾವೆಲ್ಲರೂ ಸಾಕಷ್ಟುಸಲ ಸೋಲನ್ನನುಭವಿಸಿದವರೆ. ಬಾಲ್ಯದಲ್ಲಿ ಸೈಕಲ್ ಕಲಿಯಲು ಹೇಗಿ ಬಿದ್ದು ಮೊಣಕಾಲು ಕೆತ್ತಿಸಿಕೊಂಡಿಲ್ಲವೇ? ಹಾಗೆಂದು ಸೈಕಲ್ ತುಳಿಯುವುದನ್ನು ಬಿಟ್ಟುಬಿಟ್ಟೆವೆಯೇ? ಮತ್ತೆ ಮತ್ತೆ ಪ್ರಯತ್ನಮಾಡಿ ಒಳ್ಳೆಯ ಸೈಕಲ್ ಸವಾರರಾಗಿಲ್ಲವೇ? ಈಜು ಕಲಿಯಲು ಹೋಗಿ ಮುಳುಗುತ್ತಾ ಏಳುತ್ತಾ ಒಳ್ಳೆಯ ಈಜು ಕಲಿತ್ತಿದ್ದೇವೆ. ಸೋಲು ಗೆಲುವಿನ ಮೊದಲ ಮೆಟ್ಟಿಲು. ಸೋಲೆಂಬುದು ಗೆಲುವಿನ ವಿರುದ್ಧ ಪದವೇ ಅಲ್ಲ. ಅದು ಗೆಲುವಿನ ಅವಿಭಾಜ್ಯ ಅಂಗ. ಗೆಲುವೆಂಬ ಸೌಧಕ್ಕೆ ಸೋಲೆಂಬ ಮೆಟ್ಟಿಲ ಮೂಲಕ ಹತ್ತಿ ಹೋಗಬೇಕು. ಸೋಲದಿದ್ದರೆ ಗೆಲುವಿನ ಅನುಭವವೇ ಆಗುವುದಿಲ್ಲ. ಸೋಲಿನ ಕಾರಣಗಳನ್ನು ಪತ್ತೆ ಮಾಡಬೇಕು. ಅವುಗಳನ್ನು ನಿವಾರಿಸಿಕೊಳ್ಳಬೇಕು. ಮತ್ತೆ ಸೋಲದಂತೆ ಎಚ್ಚರಿಕೆ ವಹಿಸಬೇಕು.
ಶೈಕ್ಷಣಿಕ ಪರೀಕ್ಷೆಗಳಲ್ಲಿ ಸಾಧನೆ ಮಾಡುವದಷ್ಟೇ ಯಶಸ್ಸಲ್ಲ. ಅನುತ್ತೀರ್ಣರಾದ ಮಾತ್ರಕ್ಕೆ ಬದುಕು ಮುಗಿದು ಹೋಗಲಿಲ್ಲ. ಪ್ರತಿ ವಿದ್ಯಾಥರ್ಿಯು ಅದ್ವಿತೀಯ. ಪ್ರತಿಯೊಬ್ಬರೂ ಪ್ರತಿಭಾವಂತರೇ. ಎಲ್ಲರಲ್ಲೂ ಒಂದೊಂದು ಪ್ರತಿಭೆ ಅಡಗಿರುತ್ತದೆ. ಅದು ಹೊರಬರಬೇಕಷ್ಟೇ. ನಿಮ್ಮ ಮಕ್ಕಳು ಪರೀಕ್ಷೆಯಲ್ಲಿ ಅನುತ್ತೀರ್ಣರಾದರೆ ಅಥವಾ ಕಡಿಮೆ ಅಂಕಗಳಿಸಿದರೆ ದೃತಿಗೆಡಬೇಡಿ. ಸಂಗೀತ, ಶಿಲ್ಪಕಲೆ, ಚಿತ್ರಕಲೆ, ನಾಟಕ, ಚಲನಚಿತ್ರ ಮುಂತಾದ ಕ್ಷೇತ್ರಗಳಲ್ಲಿ ಅವರನ್ನು ತೊಡಗಿಸಿ. ಅವರಿಗಿಷ್ಟವಿರುವ ಕ್ಷೇತ್ರದಲ್ಲಿ ಅವರು ಮಹೋನ್ನತ ಸಾಧನೆ ಮಾಡಿ ದೊಡ್ಡ ವ್ಯಕ್ತಿಗಳಾಗಬಹುದು. ಬದುಕಿನ ಒಂದು ಬಾಗಿಲು ಮುಚ್ಚಿದರೆ ನೂರು ಬಾಗಿಲು ತೆರೆದುಕೊಳ್ಳುತ್ತದೆ ಎಂಬ ಸತ್ಯವನ್ನು ನಿಮ್ಮ ಮಕ್ಕಳಿಗೆ ತಿಳಿಸಿಕೊಡಿ.