ಮಹಲಿಂಗಪುರ

ಗೃಹಲಕ್ಷ್ಮಿ ಯೋಜನೆ ಮಹಿಳೆಯರಿಗೆ ಸದ್ಬಳಕೆ ಆಗಲಿ: ಸಂತೋಷ ಕಾಮಗೌಡ

ಗೃಹಲಕ್ಷ್ಮಿ ಯೋಜನೆ ಮಹಿಳೆಯರಿಗೆ ಸದ್ಬಳಕೆ ಆಗಲಿ: ಸಂತೋಷ ಕಾಮಗೌಡ

ಮಹಾಲಿಂಗಪುರ: ಗೃಹಲಕ್ಷ್ಮಿ ಯೋಜನೆಯ 2000 ರೂ. ಸದ್ಬಳಕೆ ಮಾಡಿಕೊಳ್ಳುವ ಮೂಲಕ ಮಹಿಳೆಯರು ಆರ್ಥಿಕ ಸ್ವಾವಲಂಬನೆ ಹೊಂದಬೇಕು ಎಂದು ಜಮಖಂಡಿ ಉಪವಿಭಾಗಾಧಿಕಾರಿ ಸಂತೋಷ ಕಾಮಗೌಡ ಹೇಳಿದರು.ನಗರದ ಮೂರು ಕಡೆ ಹಮ್ಮಿ ಕೊಂಡಿದ್ದ ಗೃಹಲಕ್ಷ್ಮಿಯೋಜನೆಗೆ ಚಾಲನೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು ಸರ್ಕಾ ರದ ಪ್ರತಿಯೊಂದು ಯೋಜನೆ ಯಶಸ್ವಿಗೆ ಸಾರ್ವಜನಿಕರ ಸಹಕಾರ ಅಗತ್ಯವಿದೆ. ಕುಟುಂಬ ನಿರ್ವಹಣೆ,ಮಕ್ಕಳ ಶಿಕ್ಷಣ,ಆರೋಗ್ಯ ಸೇರಿ ಅಗತ್ಯ ಸನ್ನಿವೇಶಗಳಲ್ಲಿ ಗೃಹಲಕ್ಷ್ಮಿ ಯೋಜನೆ ಹಣ ಉಪಯೋಗವಾಗಲಿ ಎಂದು ಹೇಳಿದರು.

ಪುರಸಭೆ ಮುಖ್ಯಾಧಿಕಾರಿ ಈರಣ್ಣ ದಡ್ಡಿ, ಗೃಹಲಕ್ಷ್ಮಿ ಯೋಜನೆಯ ಕಾರ್ಯಕ್ರಮಗಳಿಗೆ ಚಾಲನೆ ನೀಡಿದರು.ಸಾವಿರಾರು ಫಲಾನುಭವಿಗಳು ಈ ಕಾರ್ಯಕ್ರಮದಲ್ಲಿ ಭಾಗವಹಿಸಿ ಮೈಸೂರಿನಲ್ಲಿ ನಡೆದ ಕಾರ್ಯಕ್ರಮದ ನೇರಪ್ರಸಾರ ವೀಕ್ಷಿಸಿದರು.ಪುರಸಭೆ ಸದಸ್ಯರಾದ ಯಲ್ಲನಗೌಡ ಪಾಟೀಲ,ಶೇಖರ ಅಂಗಡಿ,ಮುಸ್ತಾಕ ಚಿಕ್ಕೋಡಿ,ರಾಜು ಗೌಡಪ್ಪಗೋಳ,ಸುಜಾತಾ ಮಾಂಗ,ಶೀಲಾ ಭಾವಿಕಟ್ಟಿ,ಸರಸ್ವತಿ ರಾಮೋಜಿ,ಮುಖಂಡರಾದ ಚನ್ನಪ್ಪ ರಾಮೋಜಿ,ರಾಜೇಶ ಭಾವಿಕಟ್ಟಿ,ನೋಡಲ್ ಅಧಿಕಾರಿಗಳಾದ ಎಂ.ಎಂ.ಮುಗಳಖೋಡ, ವಿ.ಜಿ.ಕುಲಕರ್ಣಿ ,ಸಿ.ಎಸ್.ಮಠಪತಿ,ಪುರಸಭೆ ವ್ಯವಸ್ಥಾಪಕ ಎಸ್.ಎನ್.ಪಾಟೀಲ,ಕಿರಿಯ ಆರೋಗ್ಯ ನಿರೀಕ್ಷಕ ಸಿದ್ದು ಅಳ್ಳಿಮಟ್ಟಿ,ರಾಜು ಹೂಗಾರಸಿ ಎಸ್ ಪಟ್ಟಣಶೆಟ್ಟಿ, ಬಿ ವಾಯ್ ಮರದಿ, ಎಂ ಕೆ ದಳವಾಯಿ,ಡಿ ಕೆ ಜಮಖಂಡಿ, ಏಸ್ ಆರ್ ಮಾವಿನಹಂಡಿ ಸೈಪ ಮುಲ್ಲಾ, ಕಾಂತು ಹಡಪದ, ಪರಶುರಾಮ ಬಂಡಿವಡ್ಡರ, ವಿಕ್ರಂ ಹವಾಲ್ದಾರ,ಇನ್ನು ಹಲವಾರು ಫಲಾನುಭವಿಗಳು ಮತ್ತು ಅಧಿಕಾರಿಗಳು ಭಾಗಿಯಾಗಿದ್ದರು 

ಸುದ್ದಿ ಓದಿ