ಕನ್ನಡ ಶಾಲೆಗೆ ಹೋಗೋಣ
- ಪ್ರಭಾ .ಅ. ಪಾಟೀಲ
ನವೆಂಬರ ಒಂದು ಬಂತೆಂದರೆ ಕನ್ನಡಿಗರಾದ ನಮಗೆಲ್ಲ ಎಲ್ಲಿಲ್ಲದ ಉತ್ಸಾಹ ಸಡಗರ ಸಂಭ್ರಮ. 1956 ರಲ್ಲಿ ಹಂಚಿಹೋಗಿದ್ದ ಕನ್ನಡಿಗರನ್ನು ಒಂದು ಗೂಡಿಸಿ ಮೈಸೂರು ರಾಜ್ಯ ಉದಯವಾಯಿತು.1973 ರಲ್ಲಿ ನವೆಂಬರ ಒಂದರಂದು ಕನರ್ಾಟಕ ಎಂದು ಮರುನಾಮಕರಣವಾಯಿತು. ಎಲ್ಲ ಕನ್ನಡ ಭಾಷೆ ಮಾತನಾಡುವ ಪ್ರದೇಶಗಳನ್ನು ವಿಲೀನಗೊಳಿಸಿ ಒಂದು ರಾಜ್ಯ ಎಂದು ಘೋಷಣೆ ಮಾಡಿದ ಈ ದಿನವನ್ನು ನಾವೆಲ್ಲ ಕನ್ನಡಿಗರು ನಾಡ ಹಬ್ಬವನ್ನು ಆಚರಿಸುತ್ತೇವೆ ಅಂದು ರಾಜ್ಯ ಸಕರ್ಾರ ರಜಾ ದಿನವೆಂದು ಘೋಷಿಸುತ್ತದೆ ಕನರ್ಾಟಕ ಸಕರ್ಾರ ಅಂದು ರಾಜ್ಯ ಪ್ರಶಸ್ತಿಗಳನ್ನು ವಿತರಿಸುತ್ತದೆ ಕನ್ನಡಕ್ಕಾಗಿ ಕನ್ನಡ ಭಾಷೆಗಾಗಿ ಅನೇಕ ಮಹನೀಯರು ದುಡಿದಿದ್ದಾರೆ ಸಾಹಿತ್ಯಲೋಕದಲ್ಲಿ ಹೆಸರು ಮಾಡಿದ್ದಾರೆ.
ಆದರೆ ಇಂದಿನ ದಿನಗಳಲ್ಲಿ ನಾವೆಲ್ಲ ಆಂಗ್ಲ ಮಾಧ್ಯಮ ಶಾಲೆಗಳಿಗೆ ಒತ್ತು ಕೊಡುತ್ತಿದ್ದೇವೆ ಅಲ್ಲಿ ಕಲಿತ ಮಕ್ಕಳಿಗೆ ಬಾಯಿಪಾಠ ಮಾಡಿ ಬರೆಯುವ ಅಭ್ಯಾಸ ಹೆಚ್ಚು ಇನ್ನು ಮನೆಯಲ್ಲಂತೂ ತಂದೆ ತಾಯಿಯರ ಜೊತೆ ಇಂಗ್ಲಿಷಿನಲ್ಲೇ ಮಾತನಾಡುತ್ತಾರೆ ಇದರಿಂದ ನಮ್ಮ ಕನ್ನಡ ಭಾಷೆ ಅಳಿಸಿ ಹೋಗುತ್ತದೆ ಆದ್ದರಿಂದ ನಾವೆಲ್ಲ ಇಂದು ಶಪತ ಮಾಡಬೇಕಾಗಿದೆ ನಮ್ಮ ಮೊಮ್ ಮಕ್ಕಳನ್ನಾದರೂ ಕನ್ನಡ ಶಾಲೆಗೆ ಹಾಕೋಣ ಕನ್ನಡವನ್ನೇ ಕಲಿಸೋಣ ಮಾತೃಭಾಷೆಯಲ್ಲಿ ಕಲಿತ ಮಕ್ಕಳು ಹೆಚ್ಚಿನ ಜ್ಞಾನ ವಿಚಾರಶಕ್ತಿಯನ್ನು ಹೊಂದುತ್ತಾರೆ.
'ಕನ್ನಡ ಶಾಲೆ ಕವಿತೆ'
ಕನ್ನಡ ಶಾಲೆಗೆ ಹೋಗೋಣ ಕನ್ನಡವನ್ನು ಕಲಿಯೋಣ ಮಕ್ಕಳನ್ನೆಲ್ಲಾ ಸೇರಿಸೋಣ ಕನ್ನಡವನ್ನು ಉಳಿಸೋಣ/ಪ/
ಅ, ಆ, ಇ, ಈ,,,, ಕಲಿಯೋಣ
ಕ, ಕಾ, ಕಿ ಕೀ,, ಬರೆಯೋಣ ಕಕ್ಕಂಬಳ್ಳಿ ಕಲಿಯೋಣ
ಕಮ್ ಕಹಾ ಎನ್ನೋಣ
ಅ,,,,, ಅಗಸ ಅರಿಯೋಣ
ಆ ಆನೆ ಆಲಿಸೋಣ
ಈ ಇಲಿ ಹಿಡಿಯೋಣ
ಈ ಈಶ್ವರ ಗೆ ಕೈ ಮುಗಿಯೋಣ
ಉ,,, ಉರಗ ಎನ್ನೋಣ
ಊ ಊಟ ಮಾಡೋಣ
ಎ,,,, ಎತ್ತಿನ ಪೂಜೆ ಮಾಡೋಣ
ಏ,,,, ಏಣಿ ಏರೋಣ
ಏ,,, ಐರಾವತ. ಎರೋಣ
ಒ,,, ಓದಿ ಕನ್ನಡ ಎನ್ನೋಣ
ಓ,,,, ಓಂ ಕಾರ ಹೇಳೋಣ
ಔ,,,, ಔದಾರ್ಯ ದಿಂದ ಬಾಳೋಣ
ಅಂ,ಅಂದದ. ಕನ್ನಡ ಕಲಿಯೋಣ
ಆಂ,,, ಆಹಾ ಆಹಾ ಏನು ಚೆಂದ ಕನ್ನಡ ಭಾಷೆ ಎನ್ನೋಣ ಕನ್ನಡ ಭಾಷೆ ಕಲಿಯೋಣ ಕನ್ನಡವನ್ನು ಉಳಿಸೋಣ ಕನ್ನಡವನ್ನು ಬೆಳೆಸೋಣ.
ಕನ್ನಡ ಶಾಲೆಯಲ್ಲಿ ಕಲಿತರಂದು ಕುವೆಂಪು ಬೇಂದ್ರೆಯವರು ಅವರು ಆದರೂ ಇಂದು ಕನ್ನಡದ ಕಂಪು ಕನ್ನಡದ ಇಂಪು ಕನ್ನಡದ ತಂಪು ಆದರೆ ಅವರು ಕನ್ನಡ ಸಾಹಿತ್ಯ ಲೋಕದ ಮುಕುಟ ವಿಂದು ಬಲು ಶ್ರೇಷ್ಠರೆಂದು,,,, ಕನ್ನಡ ಶಾಲೆಗೇ ಹೋಗೋಣ ಕನ್ನಡವನ್ನು ಕಲಿಯೋಣ.
ನಮ್ಮ ರಾಷ್ಟ್ರಕವಿ ಕುವೆಂಪು ಅವರು ಹೇಳಿದ ಪ್ರಕಾರ
ತಾಯೆ ಬಾರ ಮೊಗವ ತೋರ ಕನ್ನಡಿಗರ ಮಾತೆಯೇ ಹರಸು ತಾಯೆ ಸುತರ ಕಾಯೆ ನಮ್ಮ
ಜನ್ಮ ದಾತೆಯೇ
ನಮ್ಮ ತಪ್ಪನೆನಿತೋ ತಾಳ್ವೆ
ಅಕ್ಕರೆಯಿಂದೆಂಮ್ಮ ಬಾಳ್ವೆ
ನೀನೆ ಕಣಾ ನಮ್ಮ ಬಾಳ್ವೆ
ನಿನ್ನ ಮರೆಯಲೊಮ್ಮೆವು
ತನು ಕನ್ನಡ ನುಡಿ ಕನ್ನಡ ವೆಮ್ಮೆವು.
ಎಲ್ಲರಲ್ಲೂ ನನ್ನದೊಂದು ಸವಿನಯ ಪ್ರಾರ್ಥನೆ ಮನೆಯಲ್ಲಿ ಆದರೂ ನಾವು ತಾಯಂದಿರು ಮಕ್ಕಳ ಜೊತೆ ಕನ್ನಡದಲ್ಲಿ ಮಾತನಾಡೋಣ ಕನ್ನಡದಲ್ಲಿ ವ್ಯವಹಾರ ಮಾಡುವ ಕನರ್ಾಟಕದಲ್ಲಿ ಹುಟ್ಟಿ ಕನ್ನಡ ತಾಯಿಯ ಋಣವನ್ನು ತೀರಿಸುವ ಹೆಚ್ಚು ಹೆಚ್ಚು ಕನ್ನಡ ಸಾಹಿತ್ಯವನ್ನು ಓದೋಣ ಕನ್ನಡ ಗೀತೆಗಳನ್ನು ಹಾಡೋಣ ಕನ್ನಡ ಚಿತ್ರಗಳನ್ನು ನೋಡೋಣ ನೀವೆಲ್ಲ ಏನಂತೀರಿ ಅಭಿಪ್ರಾಯಕ್ಕೆ??