ಗ್ರಾಮ ಮತ್ತು ದೇವಸ್ಥಾನದ ಏಳಿಗೆಗೆ ಶ್ರಮಿಸೋಣ: ಶೇಖರ ಅಂಗಡಿ
ಮಹಾಲಿಂಗಪುರ 20: ಯಾವುದೇ ಒಂದು ಗ್ರಾಮ ಅಭಿವೃದ್ಧಿ ಹೊಂದು ಬೇಕಾದರೆ ಅಲ್ಲಿನ ಎಲ್ಲಾ ಜನತೆಯಲ್ಲಿ ಒಕ್ಕಟ್ಟು ಬೇಕು,ಗ್ರಾಮದ ಅಭಿವೃದ್ಧಿ ಕೆಲಸವಾಗಲಿ,ದೇವಸ್ಥಾನದ ಏಳಿಗೆಗಾಗಿ ಎಲ್ಲರೂ ಶ್ರಮಿಸಿದರೆ ನಾವು ಕೈಜೋಡಿಸುತ್ತೇವೆ. ಈಗಿನ ಕಾಲದಲ್ಲಿ ದೇವಸ್ಥಾನಗಳಿಂದಲೇ ಈಗಲೂ ಭಕ್ತಿ ಪ್ರಧಾನವಾಗಿ ಉಳಿದಿದೆ ಎಂದು ಪುರಸಭೆ ಮಾಜಿ ಅಧ್ಯಕ್ಷ ಶೇಖರ ಅಂಗಡಿ ಹೇಳಿದರು.
ಸ್ಥಳೀಯ ಲಕ್ಷ್ಮೀನಗರದ(ಕೆಂಗೇರಿ ಮಡ್ಡಿ) ಶ್ರೀ ಲಕ್ಷ್ಮೀದೇವಿ ಜಾತ್ರಾ ಮಹೋತ್ಸವದ ಅಂಗವಾಗಿ ನಡೆದ ರಸಮಂಜರಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಇದೇ ಸಂದರ್ಭದಲ್ಲಿ ಶ್ರೀಶೈಲ ಭಜಂತ್ರಿ, ಸಿದ್ದಪ್ಪ ರಾಮೋಜಿ ಮಾತನಾಡಿದರು.
ಶ್ರೀ ಲಕ್ಷ್ಮೀ ದೇವಿ ಜಾತ್ರೆ ನೂರಾರು ಭಕ್ತರ ನಡುವೆ ಅದ್ದೂರಿಯಿಂದ ಜರುಗಿತು.ಇತ್ತೀಚೆಗೆ ಅಲ್ಲಿನ ವಡ್ಡಿನ ಲಕ್ಷ್ಮೀದೇವಿ ಜಾತ್ರೆ ನಡೆದಿತ್ತು.ಗುರುವಾರ ಕಾರ್ತಿಕೋತ್ಸವ ಮತ್ತು ಶುಕ್ರವಾರ ಜಾತ್ರೆ ಮತ್ತು ಕಿಚ್ಚು ಹಾಯುವ ದೃಶ್ಯವು ಭಕ್ತರನ್ನು ಭಕ್ತಿಯ ಸಾಗರದಲ್ಲಿ ಮುಳುಗಿಸಿತ್ತು.ಕಬ್ಬೂರಿನ ಶ್ರೀ ಬೀರಲಿಂಗೇಶ್ವರ ದೇವರ ಭೇಟಿಯಿಂದ ಲಕ್ಷ್ಮೀದೇವಿ ದೇವಸ್ಥಾನದಲ್ಲಿ ಬಂಡಾರದ ಮಳೆ ಸುರಿದಂತಾಯಿತು.ಸಂಜೆ ನಡೆದ ರಸಮಂಜರಿ ಕಾರ್ಯಕ್ರಮದಲ್ಲಿ ನೂರಾರು ಭಕ್ತರು ವೀಕ್ಷಿಸಿದರು.
ಈ ಸಂದರ್ಭದಲ್ಲಿ ಬಿಜೆಪಿ ನಗರ ಘಟಕ ಅಧ್ಯಕ್ಷ ಶಂಕರಗೌಡ ಪಾಟೀಲ,ಪಿಕೆಪಿಎಸ್ ನಿರ್ದೇಶಕ ಈರ್ಪ ದಿನ್ನಿಮನಿ,ಪಪಂ ಸದಸ್ಯ ಮುತ್ತಪ್ಪ ಸನ್ನಟ್ಟಿ,ಆಶ್ರಯ ಕಮಿಟಿ ಸದಸ್ಯ ವಿಠ್ಠಲ ಕುಳಲಿ,ಪತ್ರಕರ್ತರಾದ ಮಹೇಶ ಆರಿ, ಲಕ್ಷ್ಮಣ ಕಿಶೋರ,ಮಹಾಲಿಂಗ ಶಿವಣಗಿ, ಪ್ರಭು ಬಂದಕ್ಕನವರ, ಮಹಾದೇವ ಸಾವಂತ, ಶ್ರೀಶೈಲ ದೊಡಮನಿ, ತಿಪ್ಪಣ್ಣ ಬಂಡಿವಡ್ಡರ, ರಾಮಣ್ಣ ಹಟ್ಟಿ, ರಾಜು ಪಾತ್ರೋಟ, ಡಾ.ಶಂಕರ ಹುಕ್ಕೇರಿ,ಸಂತೋಷ ಬರಗಿ, ರಾಮು ಬಂಡಿವಡ್ಡರ, ಸಂಗಪ್ಪ ಪಟ್ಟಣಕೋಡಿ, ಚೆನ್ನಪ್ಪ ಬಳಗಾರ, ಚೇರಮನ ಜತ್ತಿ, ಪರಶುರಾಮ ಅಮರಾವತಿ, ನಾಗಲಿಂಗ ಬಡಿಗೇರ, ಕಾಡು ನಾವಿ, ಕಿರಣ ಶಿರೋಳ ಸೇರಿದಂತೆ ಲಕ್ಷ್ಮೀದೇವಿ ದೇವಸ್ಥಾನ ಟ್ರಸ್ಟ್ ಕಮಿಟಿ ಸದ್ಯಸರು ಮತ್ತು ನೂರಾರು ಸದ್ಭಕ್ತರು ಭಾಗಿಯಾಗಿದ್ದರು.ಪತ್ರಕರ್ತ ನಾರಣಗೌಡ ಉತ್ತಂಗಿ ನಿರೂಪಿಸಿ,ವಂದಿಸಿದರು.