ರಬಾಕಾವಿಬನಹಟ್ಟಿ

ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ

ಬಿಜೆಪಿ ತೊರೆದು ಕಾಂಗ್ರೆಸ್ ಸೇರ್ಪಡೆ

ಲೋಕದರ್ಶನ ವರದಿ

ರಬಕವಿ-ಬನಹಟ್ಟಿ 05: ಬನಹಟ್ಟಿಯ ಈಶ್ವರಲಿಂಗ ಮೈದಾನದ ವಾರ್ಡ ನಂ 2 ರಲ್ಲಿ ಬಿಜೆಪಿ ತೊರೆದು ನೂರಾರು ಕಾರ್ಯಕರ್ತರು ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಮಲ್ಲಪ್ಪ ಸಿಂಗಾಡಿ ಹಾಗೂ ಬನಹಟ್ಟಿ ನಗರ ಘಟಕದ ಅಧ್ಯಕ್ಷ ರಾಜು ಭದ್ರನ್ನವರ ಸಮ್ಮುಖದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು.

ಈ ಸಂದರ್ಭದಲ್ಲಿ ಮಾತನಾಡಿದ ಕಾಂಗ್ರೆಸ್ ಮುಖಂಡ ರಾಹುಲ ಕಲಾಲ, ಬೆಜೆಪಿಯ ದುರಾಡಳಿತದಿಂದ ಬೇಸತ್ತು ಕಾರ್ಯಕರ್ತರು ಕಾಂಗ್ರೆಸ್ ಸೇರುತ್ತಿದ್ದು, ಈ ಬಾರಿ ಕಾಂಗ್ರೆಸ್ ಪಕ್ಷದ ಅಭ್ಯರ್ಥಿ  ಸಿದ್ದು ಕೊಣ್ಣೂರ ತೇರದಾಳ ಮತಕ್ಷೇತ್ರದಲ್ಲಿ ಜಯಸಾಧಿಸಲಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. 

ಬಸು ತೆಲಸಂಗ, ಕಲ್ಲಪ್ಪ ಕುಳ್ಳಿ, ಶೇಖರ ಇಟ್ನಾಳ, ಗಂಗಾಧರ ಬಿಳ್ಳೂರ, ಶಿವಯ್ಯ ಬಂಟನೂರಮಠ, ಮಲ್ಲಪ್ಪ ತೇಲಿ, ಶಂಕರ ಕುಳ್ಳಿ, ಈರಪ್ಪ ಶೀಲವಂತ, ಆನಂದ ಬಾಣಕಾರ, ಪ್ರಕಾಶ ಭದ್ರನ್ನವರ,  ನಿತ್ಯಾನಂದ ಕುಸಬಿ, ಮುತ್ತು ಬಕ್ಕನ್ನವರ, ಆನಂದ ಕಡೇಮನಿ, ಸುರೇಶ ಉದಗಟ್ಟಿ, ಶ್ರೀಕಾಂತ ಮೊಪಗಾರ, ಮೆಹಬೂಬ್ ಪೆಂಡಾರಿ, ಸಚೀನ ಇಟ್ನಾಳ ಸೇರಿದಂತೆ ಅನೇಕ ಕಾರ್ಯಕರ್ತರು ಬಿಜೆಪಿ ತೊರೆದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಈಶ್ವರ ಅಂಬಲಿ, ವಿಠ್ಠಲ ಹೊಸಮನಿ, ದುಂಡಪ್ಪ ಕರಿಗಾರ, ಓಂಪ್ರಕಾಶ ಮನಗೂಳಿ ಸೇರಿದಂತೆ ಅನೇಕರು ಇದ್ದರು.



ಸುದ್ದಿ ಓದಿ