ಮಹಿಳೆಯರಲ್ಲೂ ಅಸಾಮಾನ್ಯ ಗುಣ ಹಾಗೂ ಶಕ್ತಿ ಇದೆ ತಿಳಿಯಿರಿ
-ಡಾ. ಹೇಮಾವತಿ ಸೊನ್ನೊಳ್ಳಿ
ಬೆಳಗಾವಿ
ಆನಂದಗೌಡ್ರಿಗೆ ಹೆಂಡತಿ, ಒಬ್ಬ ಮಗ, ಒಬ್ಬಳು ಮಗಳು ಹೀಗೆ ತುಂಬಿದ ಸಂಸಾರವಿತ್ತು ಯಾವದಕ್ಕೂ ಏನು ಕೊರತೆಯಿರಲಿಲ್ಲ. ಮನೆಯೆಂದ ಮೇಲೆ ಏನಾದರೂ ಸಮಸ್ಯೆಗಳು ಬಂದೇ ಬರುತ್ತವೇ ಮಕ್ಕಳಿಬ್ಬರೂ ಪದವಿ ಮಹಾವಿದ್ಯಾಲಯದಲ್ಲಿ ಓದುತ್ತಿದ್ದರು ಯಾವುದೇ ಸಮಸ್ಯೆ ಬಂದೊದಗಿದರೆ ಆನಂದಗೌಡ್ರು ಮಗನನ್ನು ಕರೆದು ಅವನೊಂದಿಗೆ ಸಮಾಲೋಚನೆ ಮಾಡಿ ನಿರ್ಣಯ ತೆಗೆದುಕೊಳ್ಳುತ್ತಿದ್ದರು. ಮನೆಯಲ್ಲಿ ಹೆಂಡತಿ ಇದ್ದಾಳೆ ಹಾಗೂ ಬೆಳೆದ ಮಗಳಿದ್ದಾಳೆ ಅವರೊಂದಿಗೂ ಸಮಸ್ಯೆ ಅಥವಾ ಮನೆಯ ಯಾವುದಾದರೂ ಮಹತ್ವದ ವಿಷಯದ ಬಗ್ಗೆ ಚಚರ್ಿಸಬೇಕು ಎಂದು ಆನಂದಗೌಡ್ರಿಗೆ ಎಂದೂ ಅನಿಸುತ್ತಿರಲಿಲ್ಲ. ಹೆಂಡತಿ ಮತ್ತು ತಾವಾಗೇ ಮುಂದೆ ಬಂದು ಏನಾದರೂ ಸಲಹೆ ನೀಡಲು ಹೊದರೆ ಆನಂದಗೌಡ್ರು ನಿಮಗ್ಯಾರ ಕರದಾರು? ನಿಮಗೇನ ತಿಳಿತೈತಿ? ನಮಗ ಬುದ್ಧಿ ಹೇಳುವಷ್ಟ ಜ್ಞಾನ ಐತೇನ ನಿಮಗ? ಅಂತ ಅವರನ್ನು ಅತ್ಯಂತ ಕೀಳರಿಮೇಯಿಂದ ಕಂಡು ಅವರನ್ನು ಮತ್ತು ಅವರ ಸಲಹೆಗಳನ್ನು ದೂರಸರಿಸುತ್ತಿದ್ದರು. ಮನಿಕೆಲಸಾ ಮತ್ತ ಅಡಗಿ ಮಾಡೋದು ಅಷ್ಟ ಅವರ ಕೆಲಸಾ ಇಲ್ಲದ್ದ ಮನಿ ಉಸಾಬರಿ ಹೆಂಗಸರ್ರು ಮಾಡುಬಾರದು ಅನ್ನುವುದೇ ಗೌಡರ ನಿಲುವಾಗಿತ್ತು. ಇದರಿಂದ ತಾಯಿ ಮತ್ತು ಮಗಳು ತಮ್ಮ ವಿಚಾರಕ್ಕೆ ಬೆಲೆ ಇಲ್ಲಾ ಎಂದು ಸುಮ್ಮನಾಗಿಬಿಡುತ್ತಿದ್ದರು.
ಅಲುಮೇಲು ಒಂದು ಪ್ರತಿಷ್ಟಿತ ಮಹಾವಿದ್ಯಾಲಯದಲ್ಲಿ ಇತಿಹಾಸ ವಿಷಯದ ಉಪನ್ಯಾಸಕಿಯಾಗಿದ್ದಳು. ಅವಳ ಪತಿ ಸರಕಾರಿ ಕಚೇರಿಯಲ್ಲಿ ಮ್ಯಾನೇಜರ್ ಆಗಿ ಕಾರ್ಯನಿರ್ವಹಿಸುತ್ತಿದ್ದರು. ಅಲುಮೇಲು ಸುಸಂಸ್ಕೃತೆ ಮನೆತನದವಳು, ಕಲಿತವಳು, ನಾಲ್ಕುಜನರೊಂದಿಗೆ ನಗುನಗುತ್ತಾ ಹೊಂದಿಕೊಂಡು ಬಾಳುವವಳು ಅವಳ ಪತಿ ಸಿಟ್ಟಿನ ಸ್ವಭಾವ, ಮನೆಯ ಯಾವುದೇ ಜವಾಬ್ಬಾರಿಯಿಂದ ನುಣುಚಿಕೊಳ್ಳುವ ಕೇವಲ ಮಾತಿನಲ್ಲೇ ಮನೆ ಕಟ್ಟುವವನಾಗಿದ್ದ ಅಲುಮೇಲು ಮನೆ ಇಬ್ಬರು ಮಕ್ಕಳು ಹಾಗೂ ತನ್ನ ಡ್ಯೂಟಿ ಸಂಬಾಳಿಸುತ್ತಾ ಎಲ್ಲವನ್ನೂ ಅಚ್ಚುಕಟ್ಟಾಗಿ ನೋಡಿಕೊಂಡು ಹೊರಟಿದ್ದರೂ ಅವಳ ಪತಿಗೆ ಅವಳ ಬಗ್ಗೆ ಕಿಂಚಿತ್ತೂ ಅಭಿಮಾನ ಮತ್ತು ಕಾಳಜಿ ಇರುತ್ತಿರಲಿಲ್ಲ. ಏನ್ ಕೆಲಸಾ ಮಾಡ್ತಿ? ಅಂತಾ ಅವಳನ್ನು ಹೀಯಾಳಿಸುವುದನ್ನೇ ಮಾಡುತ್ತಿದ್ದ ಅವಳು ನೌಕರಿ ಮಾಡುವವಳು ಅವಳಿಗೆ ಸಹಕಾರ ನೀಡಬೇಕೆನ್ನುವ ಮಾತು ದೂರ ಎಳೆಯಿತು ಅವಳ ಪತಿ ಮಾತು ನಡೆ ನುಡಿಯಲ್ಲಿ ಕ್ಷಣ ಕ್ಷಣಕ್ಕೂ ಮೊಸರಿನಲ್ಲಿ ಕಲ್ಲು ಹುಡುಕುವಂತೆ ನಿರಂತರವಾಗಿ ಒಂದಿಲ್ಲೊಂದು ರೀತಿಯಿಂದ ಕಾಡುತ್ತಿದ್ದ ಏನಾದರೂ ಅಲು ಮೇಲು ಹೇಳಿದರೆ ಕೇಳಿದರೆ ಗುರ್ರ್ ಎಂದು ಗುರುಗುಟ್ಟುತ್ತಾ ಮೈಮೇಲೆ ಏರಿ ಬರುತ್ತಿದ್ದ. ಮಕ್ಕಳೆದುರೆಗೆನೆ ಹೇಂಡತಿಯನ್ನು ಮನಬಂದಂತೆ ಹೀಯಾಳಿಸುತ್ತಿದ್ದ ಕಲಿತವನಾಗಿ ಮಾತು ಮತ್ತು ಕೃತಿಯಲ್ಲಿ ಅನಾಗರಿಕನಂತೆ ವತರ್ಿಸುತ್ತಿದ್ದ ಹೆಂಡತಿಯ ಮೇಲೆ ದೌರ್ಜನ್ಯವೆಸಗುತ್ತಿದ್ದ ಅಲುಮೆಲು ಎಲ್ಲವನ್ನೂ ಸಹಿಸಿಕೊಂಡು ಹೋಗುವ ಸಹನಾ ಮೂತರ್ಿಯಾಗಿದ್ದಳು ಅವಳು ತನಗೆ ಸೂಕ್ತವೆನಿಸಿದ ಸಲಹೆ ನೀಡಿದರೆ ಗಂಡ ಕೋಪದಿಂದ ಸಿಡಿದೆದ್ದು ಹೆಂಗಸಾಗಿ ನಿನಗೇನ ತಿಳಿತೈತಿ? ಬಾಳ ಶ್ಯಾಣ್ಯಾಳಂಗ ಹೇಳಾಕ ಬರತಿ? ಗಂಡ ಹೇಳಿದಂಗ ಕೇಳ್ಕೊಂಡ ಬಿದ್ದಿರಬೇಕೆಂದು ನೆರೆಹೊರೆಯವರು ಕೇಳುವಂತೆ ಚೀರಾಡುತ್ತಿದ್ದ ಅಲುಮೇಲು ಮಾನಕ್ಕಂಜಿ ಮೌನಕ್ಕೆ ಶರಣಾಗುತ್ತಿದ್ದಳು
ಶಶಿರೇಖಾ ಹಣಕಾಸಿನ ವಿಭಾಗದಲ್ಲಿ ಒಂದು ಕಚೇರಿಯ ಮುಖ್ಯಸ್ಥಳಾಗಿದ್ದಳು ಅಲ್ಲಿ ಉದ್ಯೋಗ ಮಾಡುವವರಲ್ಲಿ ಪುರುಷರೇ ಇದ್ದರು ಇವಳೊಬ್ಬಳೇ ಹೆಣ್ಣು ಮಗಳು ಅಲ್ಲಿ ಇದ್ದಳು ಅವಳು ಎಲ್ಲರಿಗಿಂತ ಕೆಲಸ ಮಡುವಲ್ಲಿ ಜಾಣೆಯಾಗಿದ್ದಳು ಮತ್ತು ಕರ್ತವ್ಯ ಪ್ರಜ್ಞೆ ಉಳ್ಳವಳಾಗಿದ್ದಳು ಕಚೇರಿಗೆ ಬಂದವರೆಲ್ಲ ಶಶಿರೇಖಾಳ ಕಾರ್ಯವೈಖರಿಯ ಗುಣಗಾನ ಮಾಡುತ್ತಿದ್ದರು ಅವಳ ಗುಣಗಾನ ಇನ್ನುಳಿದ ಪುರುಷ ವರ್ಗದವರಿಗೆ ಕೇಳಿ ಸಹಿಸಲಾತ್ತಿರಲಿಲ್ಲ ಶಶಿರೇಖಾಳೊಂದಿಗೆ ಅಲ್ಲ ಸಲ್ಲದ ಕಿರಿಕಿರಿ ನೀಡಿ ಕಾಡಲು ನೋಡುತ್ತಿದ್ದರು. ಮೇಲಾಧಿಕಾರಿಯಾದ ಶಶಿರೇಖಾ ತನ್ನ ಕೈಕೆಳಗಿರುವ ಪುರುಷ ನೌಕರರಿಗೆ ಕೆಲಸದ ಬಗ್ಗೆ ಆಜ್ಞೆ ಅದನ್ನು ಪಾಲಿಸದೇ ಅವಳಿಗೆ ಒಂದಲ್ಲೊಂದು ರೀತಿಯಿಂದ ಅಸಹಕಾರ ನೀಡಿ ಕೆಲಸವನ್ನು ಸರಿಯಾಗಿ ನಿಭಾಯಿಸದೇ ಶಶಿರೇಖಾಳಿಗೆ ತೊಂದರೆನೀಡಿ ಅವಳ ಹೆಸರಿಗೆ ಮಸಿ ಬಳಿಯುವ ಕೆಲಸವನ್ನು ಮಾಡುತ್ತಿದ್ದರು ಇದರಿಂದ ಶಶಿರೇಖಾಳಿಗೆ ತನ್ನ ಕರ್ತವ್ಯದಲ್ಲಿ ಏನಾದರೂ ಸಾಧನೆ ಮಾಡಿ ಜನರಿಂದ ಭೇಷ್ ಎನಿಸಿಕೊಳ್ಳಬೇಕೆಂಬ ಇಚ್ಛೆಗೆ ಉಳಿದ ಸಿಬ್ಬಂದಿಯವರು ಅಡ್ಡಗಾಲು ಹಾಕುತ್ತಿದ್ದ ಶಶಿರೇಖಾ ಒಬ್ಬ ಹೆಣ್ಣುಮಕ್ಕಳು ಪುರುಷರಾದ ನಾವು ಶ್ರೇಷ್ಠರು ಒಬ್ಬ ಹೆಣ್ಣುಮಗಳು ಆಜ್ಞೆ ಮಾಡಿದರೆ ನಾವೇಕೆ ಕೇಳಬೇಕು ಹೆಂಗಸರಿಗೆ ಏನ ಬುದ್ಧಿ ಇರತೈತೇನ? ಅನ್ನೂ ಭಾವನೆಯಿಂದ ಅವಳನ್ನು ಪೀಡಿಸಿ ವಗರ್ಾಯಿಸುವ ಅಥವಾ ಅವಳು ಕೆಲಸಕ್ಕೆ ರಾಜೀನಾಮೆ ತಾನಾಗೆ ಹೋಗಬೇಕೆನ್ನುವ ಪರಿಸ್ಥಿತಿ ನಿಮರ್ಾಣಗೊಳಿಸುತ್ತಿದ್ದರು ಅವಳ ಕೆಳಗಿನ ಸೇವಾ ವರ್ಗದವರು.
ಇದೇಕೆ ಹೀಗೆ ಅಂತಾ? ಬುದ್ಧಿ ಮತ್ತು ಜಾಣ್ಮೆ ಎಲ್ಲರಲ್ಲಿಯೂ ಇರುತ್ತದೆ ಪುರುಷರು ಶ್ರೇಷ್ಠರು ಮತ್ತು ಹೆಣ್ಣುಮಕ್ಕಳು ಕನಿಷ್ಠರು ಎಂಬುದೇನೂ ಇಲ್ಲಾ ಒಂದೇ ತೆರನಾದ ಬುದ್ಧಿಯ ಕೊಡುಗೆ ಎಲ್ಲರಲ್ಲಿರುತ್ತದೆ ಅದಕ್ಕಾಗಿ ಪುರುಷರಾದವರು ತಾವೇ ಜಾಣರೆಂಬ ಅಹಂ ತ್ಯಜಿಸಿ ಹೆಣ್ಣು ಮಕ್ಕಳಲ್ಲಿರುವ ಬುದ್ಧಿ ಮತ್ತು ಜಾಣ್ಮೆಗೆ ಲಕ್ಷ ಹಾಗೂ ಗೌರವ ನೀಡಿ ಕೌಟುಂಬಿಕ ಸಾಮಾಜಿಕ, ಆಥರ್ಿಕ ಹಾಗೂ ಇನ್ನಿತರ ಯಾವುದೇ ಕ್ಷೇತ್ರದ ಪ್ರಗತಿಪರ ಕಾರ್ಯಗಳು ಸಾಕಾರವಾಗಿ ಯಶಸ್ವಿಯಾಗುವಂತೆ ಸಹಕಾರ ನೀಡಬೇಕು. ಕಿತ್ತೂರ ಚೆನ್ನಮ್ಮ, ಬೆಳವಡಿ ಮಲ್ಲಮ್ಮ, ಅಕ್ಕಮಹಾದೇವಿ, ಸರೋಜಿನಿ, ನಾಯ್ಡು, ಇಂದಿರಾಗಾಂಧಿ, ಸಾಲುಮರದ ತಿಮ್ಮಕ್ಕ, ಕಲ್ಪನಾ ಚಾವ್ಲಾ, ಎಂಥೆಂಥ ಮಹಿಳಾ ರತ್ನಗಳು ನಮಗೆಲ್ಲರಿಗೂ ಆದರ್ಶಪ್ರಾಯರಾಗಿದ್ದಾರೆ. ಹೆಣ್ಣು ಹೆಣ್ಣು ಎಂದು ಕಡೆಗಣಿಸದೆ ಪ್ರತಿಹೆಣ್ಣಿನಲ್ಲೂ ಒಂದೊಂದು ವಿಶೇಷವಾದ ವಿಶೇಷತೆ ಅಡಗಿಕೊಂಡಿದೆ ಅದನ್ನು ಆದರಿಸಿ ಪುರುಷರು ಬೆಳೆಯಲು ಅವಳಿಗೆ ಅನುವು ನೀಡಿದರೆ ನಿಮ್ಮ ಜೀವನ ಸಾರ್ಥಕ ಮಹಿಳೆಯರಲ್ಲೂ ಅಸಾಮಾನ್ಯ ಗುಣ ಹಾಗೂ ಶಕ್ತಿಯಿದೆ ಎಂದು ತಿಳಿಯಿರಿ ಪುರುಷ ವರ್ಗದವರೇ ಎಂಬುದೇ ನನ್ನ ಆಶೆ.