ಮಹಲಿಂಗಪುರ

ಕೆಸರಗೊಪ್ಪ ಸರಕಾರಿ ಪ್ರೌಢಶಾಲೆ ರಾಜ್ಯಮಟ್ಟಕ್ಕೆ ಆಯ್ಕೆ

ಕೆಸರಗೊಪ್ಪ ಸರಕಾರಿ ಪ್ರೌಢಶಾಲೆ ರಾಜ್ಯಮಟ್ಟಕ್ಕೆ ಆಯ್ಕೆ

 ಮಹಾಲಿಂಗಪುರ 04: ಸಮೀಪದ ಕೆಸರಗೊಪ್ಪ ಗ್ರಾಮದ ಸರಕಾರಿ ಪ್ರೌಢಶಾಲೆ ಮಕ್ಕಳು ಜಿಲ್ಲಾ ಮಟ್ಟದ ವಿವಿಧ ಸ್ಪರ್ಧೆಗಳಲ್ಲಿ ಪ್ರಥಮ ಸ್ಥಾನ ಗಳಿಸಿ ಜಿಲ್ಲಾಮಟ್ಟಕ್ಕೆ ಆಯ್ಕೆಯಾಗಿದ್ದಾರೆ. ಲಕ್ಕವ್ವ ಮಿರ್ಜಿ 400 ಮೀಟರ್ ಅಡತಡೆ ಓಟ (ಪ್ರಥಮಸ್ಥಾನ), ರಮೇಶ್ ಗಾಂಜಿ ಹ್ಯಾಮರ್ ಎಸೆತ(ದ್ವಿತೀಯ ಸ್ಥಾನ), ಮಹಾಲಿಂಗ ಚವ್ಹಾಣ ಭಲ್ಲೇ ಎಸೆತ್ (ದ್ವಿತೀಯಸ್ಥಾನ), ರಿಲೇಯಲ್ಲಿ ಮಹಾಲಿಂಗ ಚವ್ಹಾಣ,ವಿನಯ ಮಲ್ಲಿಕಾರ್ಜುನ ಢವಳೇಶ್ವರ, ಪ್ರದೀಪ ಗುಜನಟ್ಟಿ,ದರ್ಶನ ಕಲ್ಲಟ್ಟಿ ಪ್ರಥಮ ಸ್ಥಾನದೊಂದಿಗೆ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ. 

ವಿದ್ಯಾರ್ಥಿಗಳಿಗೆ ದೈಹಿಕ ಶಿಕ್ಷಣ ಶಿಕ್ಷಕ ಸಂಗಮೇಶ ಮುಕಾರ್ತಿಹಾಳ ತರಬೇತಿ ನೀಡಿದ್ದಾರೆ. ಸಾಧನೆ ಮಾಡಿದ ಎಲ್ಲ ವಿದ್ಯಾರ್ಥಿಗಳಿಗೆ ಮುಖ್ಯೋಪಾಧ್ಯಾಯ ಸಿ.ವೈ.ಚೌಧರಿ, ಎಸ್‌ಡಿಎಂಸಿ ಅಧ್ಯಕ್ಷರು, ಸರ್ವ ಸದಸ್ಯರು, ಶಿಕ್ಷಕರು ಸೇರಿದಂತೆ ಊರಿನ ಹಿರಿಯರು ಅಭಿನಂದನೆ ಸಲ್ಲಿಸಿದ್ದಾರೆ. 


ಸುದ್ದಿ ಓದಿ