ಜೀವನವನ್ನು ಶುದ್ಧವಾಗಿ, ಗ್ರಾಮವನ್ನು ಸ್ವಚ್ಛವಾಗಿಟ್ಟುಕೊಳ್ಳಿ: ಅಮೃತಾನಂದ ಸ್ವಾಮೀಜಿ

ಜೀವನವನ್ನು ಶುದ್ಧವಾಗಿ, ಗ್ರಾಮವನ್ನು ಸ್ವಚ್ಛವಾಗಿಟ್ಟುಕೊಳ್ಳಿ: ಅಮೃತಾನಂದ ಸ್ವಾಮೀಜಿ


ಕೊಲ್ಹಾರ 20: ವ್ಯಸನಗಳು ಕ್ಷಣಿಕ ಸುಖ ನೀಡಬಹುದು, ಆದರೆ ಜೀವನದ ಶಾಂತಿ, ಆರೋಗ್ಯ ಮತ್ತು ಗೌರವವನ್ನು ಕಸಿದುಕೊಳ್ಳುತ್ತವೆ. ದೇವರಿಗೆ ಪಟ್ಟಿ ಕೋಡದೆ ಇದ್ರು ಪರವಾಗಿಲ್ಲ ದೇವರಲ್ಲಿ ಒಂದು ಸಂಕಲ್ಪ ಮಾಡಿ ಇಂದಿನಿಂದ ಮದ್ಯಪಾನ, ಧೂಮಪಾನ, ತಂಬಾಕು, ಗುಟ್ಕಾ, ಸಿಗರೇಟ ಸೇವನೆಯಂತಹ ದುಶ್ಚಟಗಳ ವ್ಯಸನವನ್ನು ತ್ಯಜಿಸಿ ಎಂದು ಬಾಲಗಾವ ಗುರುದೇವ ಆಶ್ರಮದ ಅಮೃತಾನಂದ ಸ್ವಾಮೀಜಿ ಹೇಳಿದರು. 

ತಾಲೂಕಿನ ಹಳ್ಳದಗೆಣ್ಣೂರು ಗ್ರಾಮದಲ್ಲಿ ಭಾನುವಾರ ನಡೆದ ಬೀರಲಿಂಗೇಶ್ವರ ಹಾಗೂ ಜಟ್ಟಿಂಗೇಶ್ವರ ಜಾತ್ರಾ ಮಹೋತ್ಸವ ಕಾರ್ಯಕ್ರಮದಲ್ಲಿ ಆಧ್ಯಾತ್ಮಿಕ ಪ್ರವಚನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಮಾತನಾಡಿದ ಅವರು, ನಿಮ್ಮ ಜೀವನವನ್ನು ಶುದ್ಧವಾಗಿ ಇಟ್ಟುಕೊಳ್ಳಿ ಹಾಗೆ ನಿಮ್ಮ ಗ್ರಾಮವನ್ನು ಸ್ವಚ್ಛವಾಗಿ ಇಡಿ ಎಂದರು. 

ವಿಜಯಪುರ ಚಾಣಕ್ಯ ಕರಿಯರ ಅಕಾಡೆಮಿಯ ಸಂಸ್ಥಾಪಕ ಅಧ್ಯಕ್ಷ ಎನ್‌.ಎಂ. ಬಿರಾದಾರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ನಮ್ಮ ಬದುಕಿನಲ್ಲಿ ನಾವು ಯಾರಿಗೂ ಕೆಟ್ಟದನ್ನು ಮಾಡದೆ ಸಮಾಜದಲ್ಲಿ ನೆರೆಹೊರೆಯವರ ಜೊತೆ ಚೆನ್ನಾಗಿ ಇರಬೇಕು ಅಂದಾಗ ಮಾತ್ರ ನಮ್ಮ ಬದುಕು ಸುಂದರವಾಗುತ್ತದೆ. ಮದ್ಯಪಾನ ಧೂಮಪಾನ ದುಶ್ಚಟಗಳಿಗೆ ಬಲಿಯಾಗಿ ಸಾಕಷ್ಟು ಕುಟುಂಬಗಳು  ಬೀದಿಗೆ ಬಂದಿರುವುದನ್ನು ನಾವು ನೋಡಿದ್ದೇವೆ ಪ್ರತಿಯೊಬ್ಬರು ದುಶ್ಚಟಗಳಿಂದ ದೂರವಿದ್ದು ಪ್ರತಿಯೊಬ್ಬ ವ್ಯಕ್ತಿಯೂ ಕುಟುಂಬದಲ್ಲಿ ದುಡಿಯಬೇಕು ಅಂದಾಗ ಮಾತ್ರ ಕುಟುಂಬ ಆರ್ಥಿಕವಾಗಿ ಬಲಿಷ್ಠವಾಗಲು ಸಾಧ್ಯ ದುಡಿಯದೆ ಸೋಮಾರಿಗಳಾದರೆ ಬಡತನ ಪ್ರಾರಂಭವಾಗುತ್ತದೆ ಎಂದರು. 

ಕಸಾಪ ಗೌರವ ಕಾರ್ಯದರ್ಶಿ ಮಾಧವ ಗುಡಿ, ಬನಹಟ್ಟಿಯ ನಿವೃತ್ತ ಉಪನ್ಯಾಸಕ ಎಸ್‌.ಎಂ. ಶೇಖ ಉಪನ್ಯಾಸ ನೀಡಿದರು. ಸಾನಿಧ್ಯವನ್ನು ಗೂಳಪ್ಪ ಮುತ್ಯಾ ಪೂಜಾರಿ, ಕೊಲ್ಹಾರ ಪೊಲೀಸ ಠಾಣೆ ಪಿಎಸ್‌ಐ ಅಶೋಕ ನಾಯಕ, ಸಿದ್ದೇಶ್ವರ ಕೋಚಿಂಗ್ ಕ್ಲಾಸಿಸ್ ಸುರೇಶ ಜತ್ತಿ, ಶಿಕ್ಷಕ ಮೆಹತಾಬ ಕಾಗವಾಡ, ವಕೀಲರಾದ ಮಹ್ಮದಗೌಸ ಹವಾಲ್ದಾರ, ಶ್ರೀಕಾಂತ ಪಾರಗೊಂಡ ಇದ್ದರು. 


ಸುದ್ದಿ ಓದಿ