ವಿವಿಧೆಡೆ ಜಾತ್ರಾ ರಥೋತ್ಸವ ಕಾರ್ಯಕ್ರಮ
ಲೋಕದರ್ಶನ ವರದಿ
ಸಿರುಗುಪ್ಪ 07: ನಗರದ ತುಂಗಭದ್ರ ನದಿ ತೀರದಲ್ಲಿರುವ ಶ್ರೀ ಶಂಭುಲಿಂಗೇಶ್ವರ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವ ಅಂಗವಾಗಿ ವಿವಿಧ ಕಾರ್ಯಕ್ರಮ ಧಾಮರ್ಿಕ ಕಾರ್ಯಕ್ರಮಗಳು ನಡೆದವು ಪಂಚಾಮೃತ ಅಭಿಷೇಕ ವಿಶೇಷ ವಿವಿಧ ಹೂಗಳಿಂದ ಅಲಂಕರಿಸಿ ಮಹಾಮಂಗಳಾರತಿ ದೊಂದಿಗೆ ಅಗ್ನಿಕೊಂಡ ಅಗ್ನಿ ಪುಟರಾಧನೆ ಕಾರ್ಯಕ್ರಮ ನೆರವೇರಿದವು. ನೂರಾರು ಮಹಿಳೆಯರು ಮಡಿತೇರನ್ನು ಎಳೇದರು ಭಕ್ತರು ಮಡಿ ತೆರಿಗೆ ಹುತ್ತುತ್ತಿ ಎಸೆದರು ನಂತರ ಶಂಭುಲಿಂಗೇಶ್ವರ ಸ್ವಾಮಿಗೆ ಹಣ್ಣು ಕಾಯಿ ಸಮರ್ಪಿಸಿದರು.
ತಾಲೂಕಿನ ಬೋಸ್ ಬಾಳ್ ಗ್ರಾಮದ ಶ್ರೀ ಸಿದ್ದಲಿಂಗೇಶ್ವರ ಸ್ವಾಮಿಯ ರಥೋತ್ಸವ ಜರುಗಿತು ವಿವಿಧ ಧಾಮರ್ಿಕ ಕಾರ್ಯಕ್ರಮಗಳು ಜರುಗಿದವು
ತಾಲೂಕಿನ ಉತ್ತನೂರು ಗ್ರಾಮದ ಶ್ರೀ ಉತ್ತರೇಶ್ವರ ಸ್ವಾಮಿಯ ಜಾತ್ರಾ ಮಹೋತ್ಸವ ನಡೆಯಿತು. ಮಹಾ ರುದ್ರಭಿಷೇಕ ನೆರವೇರಿಸಿದರು ಭಕ್ತರು ಹೂ ಹಣ್ಣು ಕಾಯಿ ಕೊಟ್ಟು ಕೈಮುಗಿದು ಇಷ್ಟಾರ್ಥಗಳನ್ನು ಈಡೇರಿಸಿಕೊಂಡರು