ಜೆಎಫ್ಸಿ ತಂಡದ ರಾಬಿನ್ ಗುರುಂಜ್ ಗುತ್ತಿಗೆ ಅವಧಿ ವಿಸ್ತರಣೆ
ಜೆಮ್ಶೆಡ್ಪುರ, ಮೇ 2 ಇಂಡಿಯನ್ ಸೂಪರ್ ಲೀಗ್ ಫುಟ್ಬಾಲ್ನ ಜೆಮ್ಶೆಡ್ಪುರ ಎಫ್ಸಿ ತಂಡ ಭಾರತದ ಡಿಫೆಂಡರ್ ರಾಬಿನ್ ಗುರುಂಜ್ ಅವರ ಗುತ್ತಿಗೆ ಅವಧಿಯನ್ನು ಇನ್ನೂ ಒಂದು ವರ್ಷ ವಿಸ್ತರಿಸಿದೆ.
ಜೆಮ್ಶೆಡ್ಪುರ ಎಫ್ಸಿ ತಂಡದ ಗುತ್ತಿಗೆ ಅವಧಿಯನ್ನು ವಿಸ್ತರಿಸಿದ್ದು ಖುಷಿ ತಂದಿದೆ. ಜೆಮ್ಶೆಡ್ಪುರ ನನಗೆ ಎರಡನೇ ಮನೆ ಇದ್ದಂತೆ. ಇಲ್ಲಿನ ನಗರ ಹಾಗೂ ಜನರನ್ನು ತುಂಬಾ ಇಷ್ಟಪಟ್ಟಿದ್ದೇನೆ. ಕಳೆದ ಎರಡು ಋತುವಿನಲ್ಲಿ ಜೆಎಫ್ಸಿ ಬ್ಯಾಡ್ಜ್ ಧರಿಸಿದ್ದು ಅತ್ಯಂತ ಹೆಮ್ಮೆ ಎನಿಸಿದೆ" ಎಂದು ರಾಬಿನ್ ಗುರುಂಜ್ ಹೇಳಿದರು.
ಕಳೆದ ಐಎಸ್ಎಲ್ ಟೂರ್ನಿ ಯಲ್ಲಿ ಜೆಮ್ಶೆಡ್ಪುರ ಎಫ್ಸಿ ಐದನೇ ಸ್ಥಾನ ಪಡೆದಿತ್ತು.