ಅಂತರ ವಿಶ್ವವಿದ್ಯಾಲಯಗಳ ಯೋಗ ಪಂದ್ಯಾಟ

ಅಂತರ ವಿಶ್ವವಿದ್ಯಾಲಯಗಳ ಯೋಗ ಪಂದ್ಯಾಟ


ಗುಲಬರ್ಗಾ 06: ದಿ. 05ರಿಂದ 09ರವರೆಗೆ ಬೆಂಗಳೂರಿನ ಸ್ವಾಮಿ ವಿವೇಕಾನಂದ ಯೋಗ ಅನುಸಂಧಾನ ವಿಶ್ವವಿದ್ಯಾಲಯ(ಸ್ವಾಯತ)ದಲ್ಲಿ ಜರುಗಲಿರುವ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯಗಳ ಯೋಗ (ಮಹಿಳೆ) ಪಂದ್ಯಾಟದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ತಂಡವು ಭಾಗವಹಿಸುತ್ತಿದೆ.   

ತಂಡದ ನಾಯಕಿ ಸಂಜನಾ ಮತ್ತು ಶಿವಲೀಲಾ, ಐಶ್ವರ್ಯ, ಜೈಭಾರತಿ, ದೀಪಿಕಾ ಮತ್ತು ಪ್ರಿಯಾಂಕ ತಂಡದ ಸದಸ್ಯರು ಭಾಗವಹಿಸುವರು. ತಂಡದ ವ್ಯವಸ್ಥಾಪಕರಾಗಿ-ತರಬೇತುದಾರರಾಗಿ ಡಾ. ಚಂದ್ರಕಾಂತ ಬಿರಾದಾರ, ತಾಂತ್ರಿಕ ಸಹಾಯಕರು (ಯೋಗ) ದೈಹಿಕ ಶಿಕ್ಷಣ ವಿಭಾಗ ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿ. ಇವರು ಭಾಗವಹಿಸುವರು.           

ತಂಡದ ಯಶಸ್ವಿಗೆ ಗುಲಬರ್ಗಾ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಪ್ರೊ. ಶಶಿಕಾಂತ. ಎಸ್‌. ಉಡಿಕೇರಿ, ಕುಲಸಚಿವರಾದ ಪ್ರೊ. ರಮೇಶ ಲಂಡನಕರ್, ಡಾ. ಎನ್‌.ಜಿ. ಕಣ್ಣೂರ, ಕುಲಸಚಿವರು (ಮೌಲ್ಯಮಾಪನ) ನಿರ್ದೇಶಕರು ದೈಹಿಕ ಶಿಕ್ಷಣ ವಿಭಾಗ, ಡಾ. ಎಚ್‌.ಎಸ್‌. ಜಂಗೆ, ಸಂಯೋಜಕರು ಮತ್ತು ಪ್ರಾಂಶುಪಾಲರು, ದೈಹಿಕ ಶಿಕ್ಷಣ ವಿಭಾಗ, ಪ್ರಶಾಂತಕುಮಾರ ಡಿ, ಅರುಣಕುಮಾರ ಎಚ್‌. ಇವರು ತಂಡಕ್ಕೆ ಶುಭ ಹಾರೈಸಿದ್ದಾರೆ. 


ಸುದ್ದಿ ಓದಿ