ಅಂತರ ವಿಶ್ವವಿದ್ಯಾಲಯ ಬ್ಯಾಡಮಿಟನ್ ಕ್ರೀಡಾಕೂಟ
ಗುಲಬರ್ಗಾ 06: ದಿ. 06 ರಿಂದ 09ರವರೆಗೆ ಡಾ. ಎನ.ಟಿ.ಆರ್ ವಿಶ್ವವಿದ್ಯಾಲಯ, ಆರೋಗ್ಯ ವಿಜ್ಞಾನ ಆಂದ್ರ ಪ್ರದೇಶ ವಿಜಯವಾಡ ಜರುಗಲಿರುವ ದಕ್ಷಿಣ ವಲಯ ಅಂತರ ವಿಶ್ವವಿದ್ಯಾಲಯ ಬ್ಯಾಡಮಿಟನ್(ಮಹಿಳೆ) ಪಂದ್ಯಾಟದಲ್ಲಿ ಗುಲಬರ್ಗಾ ವಿಶ್ವವಿದ್ಯಾಲಯದ ತಂಡವು ಭಾಗವಹಿಸುತ್ತಿದೆ.
ತಂಡದ ನಾಯಕಿ ಭವಾನಿ ಮತ್ತು ಸಾಕ್ಷಿ, ಮತ್ತು ಭಾಗ್ಯಲಕ್ಷ್ಮೀ ತಂಡದ ಸದಸ್ಯರು ಭಾಗವಹಿಸುವರು. ತಂಡದ ವ್ಯವಸ್ಥಾಪಕರಾಗಿ-ತರಬೇತುದಾರರಾಗಿ ಅಮರೇಶ್ವರ ಸಹಾಯಕ ಪಾಧ್ಯಾಪಕರು, ಬಿ.ಶ್ಯಾಮಸುಂದರ ಸ್ಮಾರಕ ದೈಹಿಕ ಶಿಕ್ಷಣ ಮಹಾವಿದ್ಯಾಲಯ (ಬಿ.ಪಿ.ಇಡಿ) ಕಲಬುರಗಿ ಗುಲಬರ್ಗಾ ವಿಶ್ವವಿದ್ಯಾಲಯ ಕಲಬುರಗಿ ಇವರು ಭಾಗವಹಿಸುವರು.
ತಂಡದ ಯಶಸ್ವಿಗೆ ಗುಲಬರ್ಗಾ ವಿಶ್ವವಿದ್ಯಾಲಯದ ಮಾನ್ಯ ಕುಲಪತಿಗಳಾದ ಪ್ರೊ. ಶಶಿಕಾಂತ. ಎಸ್. ಉಡಿಕೇರಿ ಕುಲಸಚಿವರಾದ ಪ್ರೊ. ರಮೇಶ ಲಂಡನಕರ್, ಡಾ. ಎನ್.ಜಿ. ಕಣ್ಣೂರ, ಕುಲಸಚಿವರು (ಮೌಲ್ಯಮಾಪನ) ನಿರ್ದೇಶಕರು ದೈಹಿಕ ಶಿಕ್ಷಣ ವಿಭಾಗ, ಡಾ. ಎಚ್.ಎಸ್. ಜಂಗೆ, ಸಂಯೋಜಕರು ಮತ್ತು ಪ್ರಾಂಶುಪಾಲರು, ದೈಹಿಕ ಶಿಕ್ಷಣ ವಿಭಾಗ, ಡಾ. ಚಂದ್ರಕಾಂತ ಬಿರಾದಾರ, ಪ್ರಶಾಂತಕುಮಾರ ಡಿ, ಅರುಣಕುಮಾರ ಎಚ್. ಇವರು ತಂಡಕ್ಕೆ ಶುಭ ಹಾರೈಸಿದ್ದಾರೆ.