ಮಹಲಿಂಗಪುರ

ಪ್ರಸಕ್ತ ವರ್ಷದ ಜಂಬೂ ಸವಾರಿಯಲ್ಲಿ ಉತ್ತರ ಕರ್ನಾಟಕ ಸ್ತಬ್ಧಚಿತ್ರಗಳು ಪ್ರೇಕ್ಷಕರ ಗಮನ ಸೆಳೆದವು

ಪ್ರಸಕ್ತ ವರ್ಷದ ಜಂಬೂ ಸವಾರಿಯಲ್ಲಿ ಉತ್ತರ ಕರ್ನಾಟಕ ಸ್ತಬ್ಧಚಿತ್ರಗಳು ಪ್ರೇಕ್ಷಕರ ಗಮನ ಸೆಳೆದವು

ಸ್ಥಬ್ದ ಚಿತ್ರಗಳ ನೋಡುತ್ತಲೆ ಬಾದಾಮಿ ಕ್ಷೇತ್ರದ ಹಳೆಯ ನೆನಪಿಗೆ ಜಾರಿದ ಮುಖ್ಯಮಂತ್ರಿ ಸಿದ್ದರಾಮಯ್ಯ ! 

ಮಹಾಲಿಂಗಪುರ : ಪ್ರಸಕ್ತ ವರ್ಷದ ಜಂಬೂ ಸವಾರಿಯಲ್ಲಿ ಉತ್ತರ ಕರ್ನಾಟಕ ಸ್ತಬ್ಧಚಿತ್ರಗಳು ಪ್ರೇಕ್ಷಕರ ಗಮನ ಸೆಳೆದುದಲ್ಲದೆ, ಮುಖ್ಯಮಂತ್ರಿ ಸಿದ್ದರಾಮಯ್ಯ ಬನಶಂಕರಿದೇವಿಯನ್ನು ನೋಡುತ್ತಲೆ ಬಾದಾಮಿಯ ಹಳೆಯ ನೆನಪುಗಳನ್ನು ರಾಜಕೀಯ ಸಹೋದ್ಯೋಗಿಗಳ ಮುಂದೆ ಸ್ಮರಿಸುವ ವಿಷಯವನ್ನು 13 ವರ್ಷಗಳಿಂದ ಸ್ತಬ್ಧಚಿತ್ರಗಳ ತಯಾರಿಯಲ್ಲಿ ಶ್ರಮಿಸುತ್ತಿರುವ ಸ್ಥಳೀಯ ಕಲಾವಿದ ಡಿ ಕೆ.ರಂಗನಾಥ ಹೆಮ್ಮೆಯಿಂದ ಹೇಳುತ್ತಾರೆ.

ಉತ್ತರ ಕರ್ನಾಟಕದ ಬಾದಾಮಿ ಬನಶಂಕರಿದೇವಿ ಮತ್ತು ಚಾಲುಕ್ಯ ಅರಸರು ಆಳಿದ ನೆಲದ ಪರಿಚಯ, ಕೊಪ್ಪಳ ಜಿಲ್ಲೆಯ ಕಿನ್ನಾಳ ಗ್ರಾಮದ ಕಟ್ಟಿಗೆ ಗೊಂಬೆಗಳ ತಯಾರಿಕೆಗೆ ಮತ್ತು ಕೈಮಗ್ಗ ಬಟ್ಟೆ ತಯಾರಿಕೆ, ದಾವಣಗೆರೆ ಜಿಲ್ಲೆಯ ಸೂರಗೊಂಡನಕ್ಕೊಪ್ಪ ಗ್ರಾಮದ ಸಂತ ಸೇವಾಲಾಲ್ ರ ಹಳ್ಳಿಯ ಬದುಕಿನ ಪ್ರತಿ ಬಿಂಬ, ಲಂಬಾಣಿ ಪೋಷಾಕು ಮತ್ತು ಕಾಮಧೇನು, ಪವನಸುತ ಹಣುಮ ಇನ್ನಿತರ ಸ್ತಬ್ಧಚಿತ್ರಗಳು ಸಂಭ್ರಮದ ದಶಹರ ಹಬ್ಬದ ಪ್ರಯುಕ್ತ ಮಂಗಳವಾರ ಜರುಗಿದ ಜಂಬೋ ಸವಾರಿಯಲ್ಲಿ ಪ್ರೇಕ್ಷಕರ ಗಮನ ಸೆಳೆದವು. ಈ ಎಲ್ಲವುಗಳು ಆಯಾ ಜಿಲ್ಲಾ ಪಂಚಾಯತ್ ಅಡಿಯಲ್ಲಿ ಜರುಗಿ ಬಂದಿವೆ.

ವಿಶೇಷವೆಂದರೆ ಮೈಸೂರು ಬನ್ನಿಮಂಟಪದ ದಾರಿಯುದ್ದಕ್ಕೂ ಪ್ರದರ್ಶನಗೊಳ್ಳುವ ಸ್ತಬ್ಧಚಿತ್ರಗಳಲ್ಲಿ ಬಾಗಲಕೋಟ ಜಿಲ್ಲೆಗೆ ಮುಂಚೂಣಿ ಪ್ರಾಶಸ್ತ್ಯವಿದೆ. ಅಲ್ಲದೆ ಅರಮನೆ ಮೈದಾನ ಪ್ರವೇಶಿಸುವ ದ್ವಾರದಲ್ಲಿ ಅಂಬಾರಿ ಹೊರುವ ಅರ್ಜು ನ ಗಜರಾಜ ಬನಶಂಕರಿ ದೇವಿಗೆ ನಮಸ್ಕರಿಸಿ ಬರಮಾಡಿಕ್ಕೊಂಡಿತು. 

ದಾರಿಯಲ್ಲಿ ಪ್ರೇಕ್ಷಕರು, ಆರಕ್ಷಕರು ತಮ್ಮ ಪಾದರಕ್ಷೆಗಳನ್ನು ಕಳಚಿ ಕೈ ಮುಗಿದರೆ, ದೇವಸ್ಥಾನೊಂದರ ಅರ್ಚಕರು ಇದೆ ಸಂದರ್ಭದಲ್ಲಿ ಪೂಜೆ ಸಲ್ಲಿಸಿ ದೇವಿಗೆ ಭಕ್ತಿಯನ್ನು ಸಮಪರ್ಿಸಿದರು. ಈ ಕಾರ್ಯಕ್ಕೆ ಸಾರ್ವಜನಿಕ ಜಾಲತಾಣಗಳಲ್ಲಿ ಜನರಿಂದ ಸಖತ್ ಪ್ರಚಾರ ಮತ್ತು ಪ್ರಶಂಸೆ ಗಿಟ್ಟಿಸಿತು. ಈ ಪ್ರದರ್ಶನದಲ್ಲಿ 31 ಜಿಲ್ಲೆಯ 49 ಸ್ತಬ್ಧಚಿತ್ರಗಳು ಭಾಗವಹಿಸಿದ್ದವು ಎಂದು ಕಲಾವಿದ ಡಿ ಕೆ.ರಂಗನಾಥ ಮಾಹಿತಿ ನೀಡಿದರು. 

ಕಳೆದ ವರ್ಷ ಭಾರತೀಯ ಸೈನ್ಯದ ಅಂಗ ಮುಧೋಳ ಶ್ವಾನ ಮತ್ತು ಕೈ ಮಗ್ಗ, ನೇಕಾರ, ಬಾದಾಮಿ ಐಹೊಳೆಯ ದುರ್ಗಾ ದೇವಸ್ಥಾನ ಸ್ತಬ್ಧಚಿತ್ರಗಳು ಮೈಸೂರಿನ ಜಂಬೋ ಸವಾರಿಯಲ್ಲಿ ಗಮನ ಸೆಳೆದಿದ್ದವು. ಇವುಗಳಲ್ಲದೆ ಅನೇಕ ಪ್ರದರ್ಶನ ಮಳಿಗೆಗಳಲ್ಲಿಯ ಡಿ ಕೆ.ರಂಗನಾಥ ಕೈ ಚಳಕದಲ್ಲಿ ಮೂಡಿ ಬಂದ ಜಮಖಂಡಿ ಅರಮನೆಯೂ ಕೂಡ ಪ್ರಶಂಸಾತ್ಮಕ ಬಹುಮಾನ ಪಡೆದುಕೊಂಡಿರುವುದು ಇತಿಹಾಸ. 

***

ನನ್ನ ಕಲಾ ಕುಂಚದಲ್ಲಿ ಮೂಡಿ ಬಂದ ತಾಯಿ ಬನಶಂಕರಿದೇವಿ ಮತ್ತು ಬಾದಾಮಿ ಅರಸರ ಸ್ತಬ್ಧಚಿತ್ರಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಹಳೆ ನೆನಪಿಗೆ ಜಾರುವಂತೆ ಮಾಡಿರುವುದು ಮತ್ತು ಉಪ ಸಭಾಪತಿ ರುದ್ರಪ್ಪ ಲಮಾಣಿ ಅವರು ಸಂತ ಸೇವಾಲಾಲ್ ಸ್ತಬ್ಧಚಿತ್ರ ವೀಕ್ಷಿಸಿ ಪ್ರಶಂಸೆ ವ್ಯಕ್ತಪಡಿಸಿರುವುದಕ್ಕೆ ಇದು ನನಗೆ ಸಿಕ್ಕ ಬಹುಮಾನವೆ ಎಂದು ತಿಳಿದಿದ್ದೇನೆ.

* ಸ್ತಬ್ಧ ಚಿತ್ರ ಕಲಾವಿದ ಡಿ ಕೆ.ರಂಗನಾಥ ಮಹಾಲಿಂಗಪುರ.


ಸುದ್ದಿ ಓದಿ