ಮುಖ್ಯ ಅಂಚೆ ಕಚೇರಿ ಪೋಸ್ಟ್ ಪೋರಂ ಸರ್ವ ಸದಸ್ಯರ ಸಭೆ
ಸಿರುಗುಪ್ಪ : ಪೋಸ್ಟ್ ಆಫೀಸಿನ ಎಲ್ಲಾ ಕೌಂಟರಿನ ಸೇವೆಯನ್ನು ಶ್ಲಾಘಿಸಿ ಸೇವೆ ಹಾಗೂ ಕಚೇರಿಯ ಸ್ವಚ್ಛತೆ ಮತ್ತು ಅಚ್ಚುಕಟ್ಟಾದ ನಿರ್ವಹಣೆಗಾಗಿ ಸಿಬ್ಬಂದಿಯನ್ನು ಶ್ಲಾಘಿಸುತ್ತಾ ಮತ್ತು ಆಧಾರ್ ಹಾಗೂ ರೈಲ್ವೆ ಕೌಂಟರ್ ಗಾಗಿ ಒಂದು ಕೌಂಟರ್ ಪಿಎ ಅನ್ನು ಸೂಚಿಸಲಾಗಿದೆ ಎಂದು ಎಂ ಡಿ ಜಿ ಎಸ್ ಜಿ ಪಿ ಪೋಸ್ಟ್ ಪೋರಂ ಸದಸ್ಯ ಅಬ್ದುಲ್ ನಬಿ ಅವರು ತಿಳಿಸಿದರು ಪೋಸ್ಟ್ ಫೋರಂ ನ ನಿಯಮಿತ ಸದಸ್ಯ ಜೈ ಸಿಂಗ್ ಅಲ್ವರಿ ಅವರು ಮಾತನಾಡಿ ಆದೋನಿ ಮತ್ತು ಬಳ್ಳಾರಿ ಜಂಕ್ಷನ್ ನಿಂದ ರೈಲು ಆಗಮನ ಮತ್ತು ನಿರ್ಗಮನದ ನೈನ್ ಬೋರ್ಡ್ ಅನ್ನು ಪ್ರದರ್ಶಿಸಲು ಸೂಚಿಸಿದರು ಪಿಎ ಗಳ ಕೊರತೆಯಿಂದಾಗಿ ಅದು ಸಾಧ್ಯವಿಲ್ಲ ಎಂದು ಮನವರಿಕೆ ಮಾಡಿಕೊಟ್ಟರೆ ದೈಹಿಕವಾಗಿ ಅಂಗವಿಕಲ ವ್ಯಕ್ತಿ ಮತ್ತು ಹಳೆಯ ಪಿಂಚಣಿದಾರರಿಗೆ ಸೂಕ್ತ ಆದ್ಯತೆ ನೀಡಲಾಗುವುದು ಅಂಚೆ ಪಾಲಕರು ಪೋಸ್ಟ್ ಮಾಸ್ಟರ್ ಮತ್ತು ಸಂಚಾಲಕರಾದ ಎಂ ಮಂಜುನಾಥ ಶೆಟ್ಟಿ ಅವರು ಸಭೆಯ ಅಧ್ಯಕ್ಷ ವಹಿಸಿದ್ದರು ಕೆ ರಾಘವ ರೆಡ್ಡಿ ಅವರು ಸರ್ವರನ್ನು ಸ್ವಾಗತಿಸಿದರು ವಿಜಯ ಕುಮಾರಿ ಹನುಮಂತರೆಡ್ಡಿ, ಸಾಮಾಜಿಕ ಕಾರ್ಯಕರ್ತ ಮೊಹಮ್ಮದ್ ನೌಶಾದ್ ಅಲಿ, ಕೆ ಬಸವರಾಜ್, ಎಂ ರಾಜಶೇಖರ, ಕೆ ಪದ್ಮ, ರಾಮಾಂಜಿನಿಯ, ಹೆಚ್ ಪಾಂಡುರಂಗ, ಹೆಚ್ ಸಲೀಂ ಮತ್ತಿತರರು ಇದ್ದರು.