ಹಳಿಯಾಳ ತಾ.ಪಂ. ವಾರ್ಷಿಕ ಬಜೆಟ್ ಮಂಡನೆ
ಲೋಕದರ್ಶನ ವರದಿ
ಹಳಿಯಾಳ: ತಾಲೂಕಾ ಪಂಚಾಯತದ 2019-20ನೇ ಸಾಲಿನ 71.15 ಕೋಟಿ ರೂ.ಗಳ ಮೊತ್ತದ ವಾರ್ಷಿಕ ಬಜೆಟ್ ಅನ್ನು ಅಧ್ಯಕ್ಷೆ ರೀಟಾ ಸಿದ್ದಿ ಮಂಡಿಸಿದರು. ಉಪಾಧ್ಯಕ್ಷೆ ನೀಲವ್ವಾ ಮಡಿವಾಳ, ಸ್ಥಾಯಿ ಸಮಿತಿಯ ಅಧ್ಯಕ್ಷ ಬಾಳು ಪಾಟೀಲ ಮತ್ತು ಕಾರ್ಯನಿರ್ವಹಣಾಧಿಕಾರಿ ಡಾ. ಮಹೇಶ ಕುರಿಯವರ ಪಾಲ್ಗೊಂಡಿದ್ದ ಈ ಬಜೆಟ್ ಅನ್ನು ಸಭೆಯಲ್ಲಿದ್ದ ಸದಸ್ಯರು ಅನುಮೋದಿಸಿದರು.
ತಾಲೂಕ ಪಂಚಾಯತ ಅಧೀನದಲ್ಲಿ ಬರುವ ವಿವಿಧ ಇಲಾಖೆಗಳ ಯೋಜನೇತರ ಲೆಕ್ಕ ಶಿಷರ್ಿಕೆವಾರು ಮಂಡನೆಯ ಸಂದರ್ಭದಲ್ಲಿ ಸಂಬಂಧಿಸಿದ ಇಲಾಖೆಗಳ ಅನುಷ್ಠಾನಾಧಿಕಾರಿಗಳು ಹಾಜರಿದ್ದರು. ಸದಸ್ಯರಾದ ದಯಾನಂದ ಜಾವಳೇಕರ, ಲಕ್ಷ್ಮೀ ಹರಿಜನ, ದೇಮಾಣಿ ಶಿರೋಜಿ, ಗಿರೀಶ ಟೋಸೂರು, ಸವಿತಾ ದಳವಿ, ಮೋಹನ ನಾಕಾಡಿ, ಸಕ್ಕುಬಾಯಿ ಮಡಿವಾಳ, ಜಯಶ್ರೀ ಗಾವಡೆ ಸಭೆಯಲ್ಲಿದ್ದರು.
71.15 ಕೋಟಿ ರೂ.ಗಳ ಮೊತ್ತದ ವಾಷರ್ಿಕ ಬಜೆಟ್ನಲ್ಲಿ ಶಿಕ್ಷಣ ಇಲಾಖೆಗೆ 48.44 ಕೋಟಿ, ಆರೋಗ್ಯ ಇಲಾಖೆಗೆ 3.55 ಲಕ್ಷ ರೂ, ಸಮಾಜ ಕಲ್ಯಾಣ ಇಲಾಖೆಗೆ 2 ಕೋಟಿ ರೂ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಗೆ 46 ಲಕ್ಷ ರೂ, ಶಿಶು ಅಭಿವೃದ್ದಿ ಇಲಾಖೆಗೆ 15.93 ಕೋಟಿ ರೂ, ಕೃಷಿ ಇಲಾಖೆಗೆ 33 ಲಕ್ಷ ರೂ, ತೋಟಗಾರಿಕಾ ಇಲಾಖೆಗೆ ಕೇವಲ 83 ಸಾವಿರ ರೂ, ಪಶು ಸಂಗೋಪನಾ 1.32 ಕೋಟಿ ರೂ ಮತ್ತು ಗ್ರಾಮೀಣ ಅಭಿವೃದ್ದಿ ಪಂಚಾಯತ್ ರಾಜ್ ಇಲಾಖೆಗೆ 2.60 ಕೋಟಿ ರೂ. ತೆಗೆದಿರಿಸಲಾಗಿದೆ. ಉದ್ಯೋಗ ಮತ್ತು ತರಬೇತಿ ಇಲಾಖೆ ಹಾಗೂ ರೇಷ್ಮೆ ಇಲಾಖೆಗಳಿಗೆ ಯಾವುದೇ ಅನುದಾನವನ್ನು ನೀಡಲಾಗಿಲ್ಲ.
ಬಜೆಟ್ ಮಂಡನೆಯ ನಂತರ ಸಾಮಾನ್ಯ ಸಭೆ ಜರುಗಿತು. ಮುಂದಿನ ದಿನಗಳಲ್ಲಿ ತಾಲೂಕಿನಲ್ಲಿ ನಡೆಯುವ ಯಾವುದೇ ಕಾಮಗಾರಿ ಸೇರಿದಂತೆ ಇನ್ನಿತರ ಕಾರ್ಯಕ್ರಮಗಳಿಗೆ ಕಡ್ಡಾಯವಾಗಿ ಜನಪ್ರತಿನಿಧಿಗಳನ್ನು ಆಹ್ವಾನಿಸುವುದರ ಬಗ್ಗೆ ಎಲ್ಲಾ ಇಲಾಖೆಗಳಿಗೆ ನೆನಪಿಸುವ ಬಗ್ಗೆ ಸಭೆಯಲ್ಲಿ ಚಚರ್ಿಸಲಾಯಿತು. ಕಾಮಗಾರಿಗಳು ನಡೆಯುವ ಮುನ್ನ ಕಾಮಗಾರಿಯ ಸಾರಾಂಶವನ್ನು ಜನಪ್ರತಿನಿಧಿಗಳಿಗೆ ತಲುಪಿಸಿ ಅವರ ಅನುಮತಿ ಪಡೆಯುವುದು ಸೌಜನ್ಯವಾಗಿದ್ದು ಇದನ್ನು ಎಲ್ಲಾ ಇಲಾಖೆಯ ಅಧಿಕಾರಿಗಳು ಪಾಲಿಸುವಂತೆ ನಿರ್ಣಯಿಸಲಾಯಿತು.
ಕ್ಷೇತ್ರ ಶಿಕ್ಷಣಾಧಿಕಾರಿ ಸಮೀರ ಅಹ್ಮದ ಮುಲ್ಲಾ ಶಿಕ್ಷಣ ಇಲಾಖೆಯ ಸ್ಥಿತಿ-ಗತಿಗಳನ್ನು ವಿವರಿಸಿದರು. ತಾಲೂಕಿನಲ್ಲಿ 222 ಶಾಲೆಗಳಿದ್ದು ಈಗಾಗಲೇ ಎಲ್ಲಾ ಶಾಲೆಗಳನ್ನು ಆರಂಭಿಸಲಾಗಿದೆ. ಅಲ್ಲದೇ ಸಕರ್ಾರದ ನೂತನ ಯೋಜನೆ ಮತ್ತು ಆದೇಶದಂತೆ ತಾಲೂಕಿನ ಮುರ್ಕವಾಡ, ಬಿ.ಕೆ.ಹಳ್ಳಿ, ತೇರಗಾಂವ, ಪಟ್ಣಣದ ಶಾಸಕರ ಮಾದರಿ ಶಾಲೆ ನಂ 1 ಮತ್ತು ಪ್ರಾಥಮಿಕ ಶಾಲೆ ಹುಲ್ಲಟ್ಟಿಯ ನಂ 2 ರಲ್ಲಿ ಆಂಗ್ಲ ಮಾಧ್ಯಮ ತರಗತಿಗಳನ್ನು ತೆರೆಯಲಾಗಿದೆ. ಇಂಗ್ಲೀಷ ಮಾಧ್ಯಮದಲ್ಲಿ ಮಕ್ಕಳಿಗೆ ಶಿಕ್ಷಣ ನೀಡಲು ಇಗಾಗಲೇ ಶಿಕ್ಷಕರಿಗೆ ಬುನಾಧಿ ತರಬೇತಿಯನ್ನು ನೀಡಲಾಗಿದ್ದು, ಪ್ರತಿ ತರಗತಿಗೆ ಕೇವಲ 30 ಮಕ್ಕಳಿಗೆ ಅವಕಾಶ ನೀಡಲಾಗಿದ್ದರೂ ಸಹ ಪ್ರವೇಶಾತಿ ಸಂಖ್ಯೆಯಲ್ಲಿ ಗಣನೀಯ ಹೆಚ್ಚಳ ಉಂಟಾಗಿದೆ ಎಂದು ಸಭೆಗೆ ತಿಳಿಸಿದರು.
ತಾಲೂಕಿನಲ್ಲಿ 200 ಶಿಕ್ಷಕರ ಕೊರತೆ ಎದುರಾಗಿದ್ದು 136 ಪ್ರಾಥಮಿಕ ಹಾಗೂ 15 ಪ್ರೌಢಶಾಲಾ ಅತಿಥಿ ಶಿಕ್ಷಕರನ್ನು ನಿಯೋಜನೆ ಮಾಡಲು ಸಕರ್ಾರಕ್ಕೆ ಪ್ರಸ್ತಾವನೆ ರವಾನಿಸಲಾಗಿದ್ದು, ಮುಂದಿನ 15 ದಿನಗಳ ಅವಧಿಯಲ್ಲಿ ಶಿಕ್ಷಕರ ಸಮಸ್ಯೆ ನಿವಾರಣೆಯಾಗಲಿದೆ. ಕಳೆದ ಬಾರಿಗಿಂತ ಈ ಬಾರಿ ಎಸ್.ಎಸ್.ಎಲ್.ಸಿ ಫಲಿತಾಂಶದಲ್ಲಿ ವೃದ್ದಿಯಾಗಿದೆ ಎಂದು ಸಭೆಗೆ ತಿಳಿಸಿದರು.
ಪಟ್ಟಣದಲ್ಲಿ ಟ್ರಾಪಿಕ್ ಜಾಮ್ ಸಮಸ್ಯೆ ಮತ್ತು ಯುವತಿಯರ ನಾಪತ್ತೆ ಪ್ರಕರಣಗಳ ಕುರಿತು ಸದಸ್ಯ ದೇಮಾಣಿ ಶಿರೋಜಿ ಹಾಗೂ ಇತರರು ಸದಸ್ಯರು ಸಭೆಯ ಗಮನ ಸೆಳೆದರು. ಈ ಬಗ್ಗೆ ಪಿಎಸೈ ಆನಂದಮೂರ್ತಿ ಸಿ. ಮಾತನಾಡುತ್ತಾ ಹಳಿಯಾಳ ಪೊಲೀಸ್ ಠಾಣೆಯಲ್ಲಿ ಈಗಾಗಲೇ ದಾಖಲಾದ ಒಟ್ಟು 8 ನಾಪತ್ತೆ ಪ್ರಕರಣಗಳನ್ನು ಪತ್ತೆ ಮಾಡಲಾಗಿದೆ ಎಂದು ತಿಳಿಸಿದರು. ಬಸ್ಸ್ಟಾಂಡ್ ಹಾಗೂ ಪೇಟೆ ರಸ್ತೆಯ ಪ್ರದೇಶದಲ್ಲಿ ಟ್ರಾಫಿಕ್ ಕಿರಿಕಿರಿಯನ್ನು ನಿಯಂತ್ರಿಸಲು ಪೊಲೀಸ್ ಹಾಗೂ ಗೃಹರಕ್ಷಕ ಸಿಬ್ಬಂದಿಯನ್ನು ನೇಮಿಸಿ ಸುಗಮ ಸಂಚಾರವಾಗುವಂತೆ ಕಾಳಜಿ ವಹಿಸಲಾಗುವುದು ಎಂದು ತಿಳಿಸಿದರು.
-: ಮಳೆಯ ಕೊರತೆ :-
ವಾಡಿಕೆಗಿಂತ ಮಳೆಯ ಪ್ರಮಾಣ ತೀರಾ ಕಡಿಮೆಯಾಗಿದೆ ಎಂದು ಸಹಾಯಕ ಕೃಷಿ ನಿದರ್ೇಶಕ ನಾಗೇಶ ನಾಯ್ಕ ಸಭೆಗೆ ತಿಳಿಸಿದರು. ಈವರೆಗೆ 215 ಮಿ.ಮೀ. ಮಳೆಯಾಗಬೇಕಾಗಿತ್ತು. ಆದರೆ ಆಗಿದ್ದು ಕೇವಲ 121.80 ಮಿ.ಮೀ. ಶೇ. 43.48 ರಷ್ಟು ಮಳೆಯ ಕೊರತೆಯಾಗಿದೆ. ಮಳೆ ವಿಳಂಬದ ಕಾರಣ ಬಿತ್ತನೆಗೆ ಹಿನ್ನಡೆಯಾಗಿದೆ ಎಂದರು.